ಭಾರತದಲ್ಲಿ ಬಹುನೀರಿಕ್ಷಿತ ಕವಾಸಕಿ Versys 1000 ಬಿಡುಗಡೆ: ಬೆಲೆ ಊಹಿಸಲು ಸಾಧ್ಯವೇ..!

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಡಿರುವ 'ಕವಾಸಕಿ' ದುಬಾರಿ ಬೆಲೆಯ ಬೈಕ್‌ಗಳನ್ನು ತಯಾರಿಸುವ ಮೂಲಕ ವಿಶ್ವಾದ್ಯಂತ ಖ್ಯಾತಿಗಳಿಸಿದೆ. ಇದೀಗ, ಕೆಲವು ದಿನಗಳ ಹಿಂದೆ, ಭಾರತದ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 1000 (Kawasaki Versys 1000) ಬೈಕ್ ಅದ್ದೂರಿಯಾಗಿ ಬಿಡುಗಡೆಯಾಗಿದೆ.

ಬಹುತೇಕ 'ಕವಾಸಕಿ' ಕಂಪನಿ ದುಬಾರಿ ಹಾಗೂ ಐಷಾರಾಮಿ ಬೆಲೆಯ ಬೈಕ್‌ಗಳನ್ನು ರೆಡಿ ಮಾಡಲಿದ್ದು, ನೂತನ 'ಕವಾಸಕಿ ವರ್ಸಿಸ್ 1000' ರೂ.12.19 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಬೈಕ್ ಏನೆಲ್ಲ ಹೊಸತನ್ನು ಒಳಗೊಂಡಿದೆ ಎಂದು ನೋಡುವುದಾದರೆ, ಇದು ಆಕರ್ಷಕ ಡ್ಯುಯಲ್ ಟೋನ್ (ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ ಜೊತೆಗೆ ಎಬೊನಿ ಬ್ಲ್ಯಾಕ್) ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಹೊಸದಾದ LED ಹೆಡ್‌ಲ್ಯಾಂಪ್ಸ್ ಹಾಗೂ ಅಡ್ಜಸ್ಟ್ಏಬಲ್ ವಿಂಡ್‌ಸ್ಕ್ರೀನ್‌ನ್ನು ಹೊಂದಿದೆ.

ಭಾರತದಲ್ಲಿ ಬಹುನೀರಿಕ್ಷಿತ ಕವಾಸಕಿ Versys 1000 ಬಿಡುಗಡೆ: ಬೆಲೆ ಊಹಿಸಲು ಸಾಧ್ಯವೇ..!

ಇಷ್ಟೇ ಅಲ್ಲದೆ, ಹೊಸದಾದ ಅನಲಾಗ್ ಟ್ಯಾಕೋಮೀಟರ್ ಪಡೆದಿರುವ ಸಂಪೂರ್ಣ ಡಿಜಿಟಲ್ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಈ ಬೈಕಿನ ಬ್ರೇಕಿಂಗ್ ವ್ಯವಸ್ಥೆ ಕೂಡ ಸುಧಾರಿಸಿದ್ದು, ರೇಡಿಯಲ್ ಮೌಂಟ್ ಫ್ರಂಟ್ ಬ್ರೇಕ್ ಕ್ಯಾಲಿಪರ್ಸ್, ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ. ಜೊತೆಗೆ 17 ಇಂಚಿನ ವೀಲ್ಸ್ ಅನ್ನು ಒಳಗೊಂಡಿದೆ. ಸಸ್ಪೆನ್ಷನ್ ಸೆಟಪ್ ನೋಡುವುದಾದರೆ, ಇದು ಫ್ರಂಟ್ 43ಎಂಎಂ ಅಪ್-ಸೈಡ್ ಫೋರ್ಕ್, ರೇರ್ ಮೊನೊ-ಶಾಕ್ ಸೆಟಪ್ ಪಡೆದಿದೆ.

ಈ ಕವಾಸಕಿ ವರ್ಸಿಸ್ 1000 ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಹಿಂದಿನ ಮಾದರಿಯಂತೆ 1043 ಸಿಸಿ ಲಿಕ್ವಿಡ್ ಕೂಲ್ಡ್ ಇನ್‌ಲೈನ್ ಫೋರ್ ಎಂಜಿನ್, 9,000 rpmನಲ್ಲಿ 118.2 bhp ಗರಿಷ್ಠ ಪವರ್ ಹಾಗೂ 7,500 rpmನಲ್ಲಿ 102 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6 ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಜೊತೆಗೆ ಸ್ಲಿಪ್ಪರ್ ಕ್ಲಚ್ ಸಿಸ್ಟಮ್ ಅನ್ನು ಪಡೆದಿದೆ.

ಭಾರತದಲ್ಲಿ ಬಹುನೀರಿಕ್ಷಿತ ಕವಾಸಕಿ Versys 1000 ಬಿಡುಗಡೆ: ಬೆಲೆ ಊಹಿಸಲು ಸಾಧ್ಯವೇ..!

ಕವಾಸಕಿ ಕಂಪನಿ, ವರ್ಸಿಸ್ 1000 ಮಾತ್ರವಲ್ಲದೆ, ZH2 ಹಾಗೂ ZH2 SE ಬೈಕ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ, ಈ ಬೈಕ್‌ಗಳ ಬೆಲೆ ಕೊಂಚ ಹೆಚ್ಚಾಗಿದೆ ಎಂದು ಹೇಳಬಹುದು. ಕ್ರಮವಾಗಿ ರೂ.23 ಲಕ್ಷದಿಂದ ರೂ.27.22 ಲಕ್ಷ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಇವೆರೆಡು ಬೈಕ್‌ಗಳು ಮೆಟಾಲಿಕ್ ಮ್ಯಾಟ್ ಗ್ರ್ಯಾಫೀನ್ ಸ್ಟೀಲ್ ಗ್ರೇ ಅಥವಾ ಎಬೊನಿ ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಸಿಗಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ZH2, ZH2 SE ಬೈಕ್‌ಗಳು ಒಂದೇ ರೀತಿಯ ಎಂಜಿನ್ ಆಯ್ಕೆಯನ್ನು ಹೊಂದಿರಲಿವೆ. 998ಸಿಸಿ ಲಿಕ್ವಿಡ್ ಕೂಲ್ಡ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಪಡೆದಿದ್ದು, 11,000 rpmನಲ್ಲಿ 200 PS ಗರಿಷ್ಠ ಪವರ್ ಹಾಗೂ 8,500rpmನಲ್ಲಿ 137 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. 6 ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದ್ದು, 12 kmpl ಮೈಲೇಜ್ ನೀಡಲಿವೆ.

ಭಾರತದಲ್ಲಿ ಬಹುನೀರಿಕ್ಷಿತ ಕವಾಸಕಿ Versys 1000 ಬಿಡುಗಡೆ: ಬೆಲೆ ಊಹಿಸಲು ಸಾಧ್ಯವೇ..!

ಇವೆರಡು ಬೈಕುಗಳ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, TFT ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, LED ಹೆಡ್‌ಲ್ಯಾಂಪ್ಸ್, ಕ್ವಿಕ್ ಶಿಫ್ಟರ್ ಅನ್ನು ಹೊಂದಿದೆ. ವಿಶೇಷವಾಗಿ ZH2 SE ಬೈಕ್, ಟ್ರಾಕ್ಷನ್ ಕಂಟ್ರೋಲ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ಇವು ದುಬಾರಿ ಬೈಕ್ ಆಗಿದ್ದು, ಅದಕ್ಕೆ ತಕ್ಕಂತೆ ಯುವ ಖರೀದಿದಾರನ್ನು ಆಕರ್ಷಿಸುವ ಹತ್ತು ಹಲವು ನೂತನ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಹೇಳಬಹುದು.

ಕವಾಸಕಿ ಕಂಪನಿಯ ಬಹುನೀರಿಕ್ಷಿತ ವರ್ಸಿಸ್ 1000 ಬೈಕ್ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ಕಂಪನಿ ನಂಬಿದೆ. ಈ ಬೈಕ್, ಅದರ ದುಬಾರಿ ಬೆಲೆಗೆ ಅನುಗುಣವಾಗಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಬೈಕಿನ ವಿತರಣೆಗಳು ಆರಂಭವಾದ ಮೇಲೆ ಹೆಚ್ಚಿನ ಗ್ರಾಹಕರು ಖರೀದಿಸಬಹುದು. ದೇಶದಲ್ಲಿ ಈ ಬೈಕ್, ಎಷ್ಟರ ಮಟ್ಟಿಗೆ ಛಾಪು ಮೂಡಿಸಲಿದೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೆ ಕಾಯಬೇಕಾಗಿದೆ.

More from DriveSpark

Article Published On: Tuesday, March 14, 2023, 16:30 [IST]
English summary
Kawasaki versys 1000 launched in india details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+