ಭರ್ಜರಿ ಸಿಹಿಸುದ್ದಿ: ಕಡಿಮೆ ಬೆಲೆಯ ಕವಾಸಕಿ ಬೈಕಿನ ಬೆಲೆಯಲ್ಲಿ ಈಗ ರೂ. 25 ಸಾವಿರ ಕಡಿತ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಬಹುನಿರೀಕ್ಷಿತ ಕವಾಸಕಿ ಡಬ್ಲ್ಯು175 ಬೈಕ್ ರೆಟ್ರೊ ಶೈಲಿ ಮತ್ತು ಉತ್ತಮ ಪರ್ಫಾಮೆನ್ಸ್ ಮೂಲಕ ಭಾರತೀಯರ ಗ್ರಾಹಕರ ಗಮನಸೆಳೆದಿದೆ. ಇದೀಗ ಕವಾಸಕಿ ಮೋಟಾರ್ ಇಂಡಿಯಾ ತನ್ನ ಈ ಕವಾಸಕಿ ಡಬ್ಲ್ಯು175 ಬೈಕಿನ ಬೆಲೆಯನ್ನು ರೂ.25,000 ಕಡಿತಗೊಳಿಸಿದೆ.
ಕವಾಸಕಿ ಡಬ್ಲ್ಯು175 (Kawasaki W175) ಬೈಕಿನ ಬೆಲೆಯು ರೂ.1.22 ಲಕ್ಷವಾಗಿದೆ. ಈ ಡಬ್ಲ್ಯು175 ಚಿಕ್ಕ ಸಾಮರ್ಥ್ಯದ ರೆಟ್ರೋ-ಥೀಮ್ ಕವಾಸಕಿ ಬೈಕು, ಕವಾಸಕಿ ಡಬ್ಲ್ಯು175 ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ನಂತಹ ಏಷ್ಯಾದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಮೆಕ್ಸಿಕೋ, ಉರುಗ್ವೆ ಮತ್ತು ಬೊಲಿವಿಯಾದಂತಹ ಲ್ಯಾಟಿನ್ ಅಮೇರಿಕನ್ ದೇಶಗಳಿಗೂ ಇದನ್ನು ರಫ್ತು ಮಾಡಲಾಗುತ್ತದೆ.

ವಾಸಕಿ ಡಬ್ಲ್ಯು175 ಬೈಕ್ ರೆಟ್ರೊ-ಶೈಲಿಯ ಬೈಕ್ ಎಬೊನಿ ಪೇಂಟ್ ಅನ್ನು ಒಳಗೊಂಡಿರುವ ಬೇಸ್ ರೂಪಾಂತರ ಮತ್ತು ಕ್ಯಾಂಡಿ ಪರ್ಸಿಮನ್ ರೆಡ್ ಬಣ್ಣವನ್ನು ಹೊಂದಿರುವ ಪ್ರೀಮಿಯಂ ರೂಪಾಂತರವನ್ನು ಹೊಂದಿದೆ. ಎರಡು ಆಯ್ಕೆಗಳ ನಡುವಿನ ವ್ಯತ್ಯಾಸವು ಪೇಂಟ್ ಥೀಮ್‌ಗಳಿಗೆ ಮಾತ್ರ ಸೀಮಿತವಾಗಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ 177ಸಿಸಿ, ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.
ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.8 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 13.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಡಬಲ್-ಕ್ರೇಡಲ್ ಚಾಸಿಸ್ ಅನ್ನು ಹೊಂದಿದೆ. ಈ ಕವಾಸಕಿ ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ರಿಯರ್ ಸ್ಪ್ರಿಂಗ್‌ಗಳನ್ನು ಹೊಂದಿದೆ.

ಇನ್ನು ಪ್ರಮುಖವಾಗಿ ಸುರಕ್ಷತಾ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಒಂದೇ 270 ಎಂಎಂ ಪೆಟಲ್-ಟೈಪ್ ರೋಟರ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿದೆ. ಕವಾಸಕಿ ಡಬ್ಲ್ಯು800 ಬೈಕ್ ನಿಂದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿದೆ.
ಕವಾಸಕಿ W ಸರಣಿಯು 50 ವರ್ಷಗಳಿಗೂ ಹೆಚ್ಚು ಕಾಲದ ಇತಿಹಾಸವನ್ನು ಹೊಂದಿದೆ. ಈ ಸರಣಿಯ ಮೊದಲ ಬೈಕ್ W1 ಅನ್ನು 1966 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಹೊಸ ಕವಾಸಕಿ ಡಬ್ಲ್ಯು800 ಬೈಕಿನಲ್ಲಿ ರೌಂಡ್ ಹೆಡ್‌ಲ್ಯಾಂಪ್ ಮತ್ತು ರಿಯರ್ ವ್ಯೂ ಮಿರರ್‌ಗಳು, ಫೋರ್ಕ್ ಗೇಟರ್‌ಗಳು, ಟಿಯರ್ ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ಕ್ವಿಲ್ಟೆಡ್ ಸಿಂಗಲ್ ಟ್ಯಾಂಕ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಹಳೆಯ-ಸ್ಕೂಲ್ ಪ್ರೊಫೈಲ್ ಅನ್ನು ಆಕರ್ಷಕವಾಗಿದೆ.

ಈ ಕವಾಸಕಿ ಡಬ್ಲ್ಯು175 ಬೈಕ್ ಎಬೊನಿ ಮತ್ತು ಸ್ಪೆಷಲ್ ಎಡಿಷನ್ ರೆಡ್ ಎಂಬ ಎರಡು ಬಣ್ಣದ ಆಯ್ಕೆಗಳಿವೆ. ಮೊದಲನೆಯದು ಮೂಲಭೂತವಾಗಿ ಸಂಪೂರ್ಣ ಕಪ್ಪು ಥೀಮ್ ಆಗಿದ್ದರೆ, ಎರಡನೆಯದು ಕೆಂಪು ಮತ್ತು ಕಪ್ಪು ಬಣ್ಣದ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯಾಗಿದೆ. ಎರಡರಲ್ಲೂ, ಮುಂಭಾಗದ ಸಸ್ಪೆಕ್ಷನ್, ಹೆಡ್‌ಲೈಟ್ ಕೇಸಿಂಗ್, ಇಂಜಿನ್, ಸ್ವಿಂಗರ್ಮ್ ಮತ್ತು ಎಕ್ಸಾಸ್ಟ್ ಪೈಪ್‌ನಂತಹ ಹೆಚ್ಚಿನ ಯುನಿಟ್ ಗಳು ಕಪ್ಪು ಬಣ್ಣದಲ್ಲಿದೆ.
ಈ ಕವಾಸಕಿ ಬೈಕ್ ಅನಲಾಗ್ ಶೈಲಿಯ ಸ್ಪೀಡೋಮೀಟರ್, ಓಡೋಮೀಟರ್, ಟ್ರಿಪ್ ಮೀಟರ್ ಮತ್ತು ಟರ್ನ್ ಸಿಗ್ನಲ್‌ಗಳೊಂದಿಗೆ ಇನ್ಸ್ ಟ್ರೂಮೆಂಟ್ ಸರಳವಾಗಿದೆ. ಇದರೊಂದಿಗೆ ಇನ್ಸ್ಟ್ರುಮೆಂಟ್ ಕನ್ಸೋಲ್‌ನ ಕೆಳಗಿನ ವಿಭಾಗದಲ್ಲಿ ಸಿಗ್ನೇಚರ್ W ಬ್ರ್ಯಾಂಡಿಂಗ್ ಅನ್ನು ಕಾಣಬಹುದು. ಇನ್ನು ಕವಾಸಕಿ ಪ್ರಸ್ತುತ ಭಾರತದಲ್ಲಿ ಡ್ಯುಯಲ್-ಸಿಲಿಂಡರ್ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದ್ದರೂ, ಬಜಾಜ್ ಜೊತೆಗೆ ಭಾರತದಲ್ಲಿ ಬಾಕ್ಸರ್‌ನಂತಹ ಬಜೆಟ್ ಬೈಕ್‌ಗಳನ್ನು ಮಾರಾಟ ಮಾಡಿರುವ ಇತಿಹಾಸ ಕೂಡ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








