Keeway ಭರ್ಜರಿ ಆಫರ್: 300 ಸಿಸಿ ಬೈಕ್‌ಗಳ ಬೆಲೆಯಲ್ಲಿ ಬರೋಬ್ಬರಿ 55,000 ರೂ.ವೆರೆಗೆ ಇಳಿಕೆ
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ Keeway ಬ್ರಾಂಡ್ ತನ್ನ ಆಕರ್ಷಕ ಮೋಟಾರ್ ಸೈಕಲ್‌ಗಳಿಂದ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಈ ಬ್ರಾಂಡ್ ಭಾರತಕ್ಕೆ ಹೊಸತಾದರೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಂಬಾ ಹಳೆಯದು. ಈಗ ಗ್ರಾಹಕರನ್ನು ಸೆಳೆಯಲು ತನ್ನ 300 ಸಿಸಿ ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಿದೆ.
ಎರಡು ಬೈಕ್‌ಗಳ ಮೇಲೆ ಭಾರೀ ಕಡಿತ:
ಕೀವೇ ಕಂಪನಿಯು K300 ಮೋಟಾರ್ ಸೈಕಲ್ ಅನ್ನು K300 N ಮತ್ತು K300 R ಎಂಬ ಎರಡು ರೂಪಾಂತರಗಳಲ್ಲಿ ನೀಡುತ್ತಿದೆ. ಈ ಹಿಂದೆ ಕೀವೇ K300 N ಬೆಲೆಯು ರೂ. 2.65 ಲಕ್ಷದಿಂದ ರೂ. 2.85 ಲಕ್ಷದ ವರೆಗೆ ಇತ್ತು. ಹಾಗೆಯೇ K300 R ಬೆಲೆಯು ರೂ. 2.99 ಲಕ್ಷದಿಂದ ರೂ. 3.20 ಲಕ್ಷದವರೆಗೆ (ಎಕ್ಸ್ ಶೋ ರೂಂ) ಇತ್ತು.

ಈ ಎರಡೂ ಬೈಕ್‌ಗಳು ಈಗ ಭಾರಿ ಬೆಲೆ ಕಡಿತವನ್ನು ಪಡೆದಿವೆ. ಹೊಸ ಬೆಲೆಗಳ ಪ್ರಕಾರ, K300 N ಗೆ ರೂ. 10 ಸಾವಿರದಿಂದ ರೂ. 30 ವರೆಗೆ ಮತ್ತು K300 R ಗೆ ರೂ. 34 ಸಾವಿರದಿಂದ ರೂ. 55 ಸಾವಿರವರೆಗೆ ಬೆಲೆ ಕಡಿತವಾಗಿದೆ. ಈ ಎರಡೂ ಬೈಕ್‌ಗಳು ವಿಭಿನ್ನ ವಿಭಾಗದ್ದಾಗಿವೆ. K300 N ನೇಕೆಡ್ ಸ್ಟ್ರೀಟ್ ಆವೃತ್ತಿಯಾಗಿದ್ದರೇ, K300 R ಸಂಪೂರ್ಣ ಫೇರ್ಡ್ ರೇಸಿಂಗ್ ಸ್ಪೋರ್ಟ್ ಮಾದರಿಯಾಗಿದೆ.
ಕೀವೇ K300 N ಮತ್ತು K300 R ವಿಭಿನ್ನ ವಿಭಾಗಗಳಲ್ಲಿನ ಪ್ರತ್ಯೇಕ ರೈಡಿಂಗ್ ಆಯ್ಕೆಗಳನ್ನು ಹೊಂದಿದ್ದರೂ, ಒಂದೇ ರೀತಿಯ ಎಂಜಿನ್‌ಗಳನ್ನು ಹೊಂದಿವೆ. 292.4cc, ಲಿಕ್ವಿಡ್ ಕೂಲ್ಡ್, DOHC, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ 8,750 rpm ನಲ್ಲಿ 27.50 hp ಪವರ್ ಮತ್ತು 7,000 rpm ನಲ್ಲಿ 25 Nm ಟಾರ್ಕ್ ಅನ್ನು ಹೊರಹಾಕುತ್ತವೆ. ಇವು 6 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿವೆ.
ಕೀವೇ ಕಂಪನಿಯು ಭಾರತದ ರಸ್ತೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಎರಡೂ ಮೋಟಾರ್ ಸೈಕಲ್‌ಗಳ ಮುಂಭಾಗದಲ್ಲಿ 37mm USD ಶಾಕ್ ಅಬ್ಸಾರ್ಬರ್‌ಗಳು ಮತ್ತು ಹಿಂಭಾಗದಲ್ಲಿ ಸೆಂಟ್ರಲ್ ಮೊನೊಶಾಕ್‌ಗಳ ಮೂಲಕ ಸಸ್ಪೆನ್ಶನ್ ಅನ್ನು ಉತ್ತಮವಾಗಿ ನೀಡಲಾಗಿದೆ. ಬ್ರೇಕಿಂಗ್ ಕುರಿತು ಹೇಳುವುದಾದರೆ ಮುಂಭಾಗದಲ್ಲಿ 292 mm ಸಿಂಗಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220mm ಸಿಂಗಲ್ ಡಿಸ್ಕ್ ನೀಡಲಾಗಿದೆ. ಎರಡೂ ಬೈಕುಗಳು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಪ್ರಮಾಣಿತವಾಗಿ ಪಡೆದಿವೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ಎರಡೂ ಮೋಟಾರ್ ಸೈಕಲ್‌ಗಳ ಸ್ಪರ್ಧೆಗೆ ಸಂಬಂಧಿಸಿದಂತೆ, ಕೀವೇ K300 N ಮತ್ತು K300 R ತನ್ನ ವಿಭಾಗದಲ್ಲಿ ಅನೇಕ ಪ್ರತಿಸ್ಪರ್ಧಿಗಳನ್ನು ಹೊಂದಿವೆ. BMW G 310 R ಮತ್ತು G 310 RR ಸೇರಿದಂತೆ KTM ಡ್ಯೂಕ್ 250, KTM RC 390, KTM ಡ್ಯೂಕ್ 390, Bajaj Dominar, Apache RR 310, ಹೋಂಡಾ CB300R, CB300F ನಂತಹ ಜನಪ್ರಿಯ ಮಾದರಿಗಳೊಂದಿಗೆ ಸ್ಪರ್ಧಿಸುತ್ತವೆ.
ಹಂಗೇರಿ ಮೂಲದ ಈ ಕೀವೇ ಕಂಪನಿಯು ಪ್ರೀಮಿಯಂ ಸ್ಕೂಟರ್‌ಗಳು ಮತ್ತು ಮೋಟಾರ್‌ಸೈಕಲ್‌ಗಳ ಶ್ರೇಣಿಯನ್ನು ಹೊಂದಿದೆ. ಬರೋಬ್ಬರಿ 98 ದೇಶಗಳಲ್ಲಿ ತನ್ನ ಮಾರಾಟ ಕಾರ್ಯಾಚರಣೆಗಳನ್ನು ಹೊಂದಿದೆ. ಕಳೆದ ವರ್ಷ ಆದಿಶ್ವರ್ ಆಟೋ ರೈಡ್ ಇಂಡಿಯಾ ಮೂಲಕ ಭಾರತದಲ್ಲಿ ತನ್ನ ಮಾರಾಟವನ್ನು ಆರಂಭಿಸಿದೆ. ಸದ್ಯ ಸಿಕ್ಸ್ಟೀಸ್ 300i ರೆಟ್ರೊ ಸ್ಕೂಟರ್, K-ಲೈಟ್ 250V ಕ್ರೂಸರ್, Vieste 300 ಮ್ಯಾಕ್ಸಿ-ಸ್ಕೂಟರ್ ಮತ್ತು K300 ನಂತಹ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








