'ಕೀವೇ' ಕಂಪನಿಯಿಂದ ಕೈಗೆಟುಕುವ ಬೆಲೆಯ ದ್ವಿಚಕ್ರ ವಾಹನಗಳು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ

ಹಂಗೇರಿಯದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ 'ಕೀವೇ' ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಕೀವೇ SR125, ಸಿಕ್ಸ್ಟೀಸ್ 300i, ವಿಯೆಸ್ಟೆ 300, ಕೆ-ಲೈಟ್ 250ವಿ, ಕೆ300 ಎನ್ ಮತ್ತು ಕೆ300 ಆರ್ ದ್ವಿಚಕ್ರ ವಾಹನಗಳು ಸೇರಿವೆ.

ಕೀವೇ ಸಿಕ್ಸ್ಟೀಸ್ 300i:
ಇದೊಂದು ರೆಟ್ರೊ-ಥೀಮ್ ಸ್ಕೂಟರ್ ಆಗಿದ್ದು, ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯಿತು. ಅಷ್ಟು ಮಾತ್ರವಲ್ಲದೆ, ಕೀವೇ ಸಿಕ್ಸ್ಟೀಸ್ 300i ಅತ್ಯಾಧುನಿಕ ಸ್ಕೂಟರ್ ಎಂದು ಹೇಳಬಹುದು. ಇದು 278 ಸಿಸಿ, ಸಿಂಗಲ್ - ಸಿಲಿಂಡರ್, ಪೆಟ್ರೋಲ್ ಎಂಜಿನ್‌ ಹೊಂದಿದ್ದು, 18.4 bhp ಗರಿಷ್ಠ ಪವರ್ ಮತ್ತು 22 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ . ಈ ಕೀವೇ ಸಿಕ್ಸ್ಟೀಸ್ 300i ಬೆಲೆ ರೂ 2.99 ಲಕ್ಷ (ಎಕ್ಸ್ ಶೋರೂಂ, ದೆಹಲಿ) ಇದೆ.

ಕೀವೇ SR125:
ಭಾರತದ ಗ್ರಾಹಕರು ಖರೀದಿಸಬಹುದಾದ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಕೀವೇ SR125 ಆಗಿದೆ. ಇದರ ಬೆಲೆ 1.19 ಲಕ್ಷ (ಎಕ್ಸ್ ಶೋರೂಂ) ಇದ್ದು, 125 ಸಿಸಿ, ಸಿಂಗಲ್ - ಸಿಲಿಂಡರ್, 4-ಸ್ಟ್ರೋಕ್, SOHC ಎಂಜಿನ್ ಹೊಂದಿದ್ದು, 9.7 bhp ಗರಿಷ್ಠ ಪವರ್ ಮತ್ತು 8.2 Nm ಪೀಕ್ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಎಂಜಿನ್ ಅನ್ನು 5 - ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಅಲ್ಲದೆ, ಕೀವೇ SR125 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, LED DRLಗಳು, ಇಂಡಿಕೇಟರ್ ಸೆಟ್, LED ಟೈಲ್ ಲ್ಯಾಂಪ್‌ಗಳು, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಅತ್ಯಾಧುನಿಕವಾಗಿದೆ. 300 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 210 ಎಂಎಂ ರೇರ್ ಡಿಸ್ಕ್ ಬ್ರೇಕ್ ಮತ್ತು ಕಾಂಬಿ ಬ್ರೇಕ್ ಸಿಸ್ಟಮ್ ಅನ್ನು ಹೊಂದಿದೆ ಎಂದು ಹೇಳಬಹುದು.

ಕೀವೇ ವಿಯೆಸ್ಟೆ 300:
ಹಂಗೇರಿದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಕೀವೇ, ವಿಯೆಸ್ಟೆ 300 ಸ್ಕೂಟರ್ ಬಿಡುಗಡೆಯೊಂದಿಗೆ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು. ಈ ಸ್ಕೂಟರ್ ಬೆಲೆಯು 2.99 ಲಕ್ಷ ರೂ.(ಎಕ್ಸ್ ಶೋರೂಂ, ದೆಹಲಿ) ಇದ್ದು, ಕೇವಲ 1 ರೂಪಾಂತರ ಮತ್ತು 3 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇದು 278.2ಸಿಸಿ BS6 ಎಂಜಿನ್‌ ಹೊಂದಿದ್ದು, 18.4 bhp ಗರಿಷ್ಠ ಪವರ್ ಮತ್ತು 22 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫ್ರಂಟ್ ಹಾಗೂ ರೇರ್ ಎರಡೂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಕೀವೇ K-ಲೈಟ್ 250V:
ಇದೊಂದು ಕ್ರೂಸರ್ ಶೈಲಿಯ ಮೋಟಾರ್‌ಸೈಕಲ್ ಆಗಿದ್ದು, ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಕೀವೇ K-ಲೈಟ್ 250V, ವಿ-ಟ್ವಿನ್ ಎಂಜಿನ್ ಹೊಂದಿರುವ ಭಾರತದ ಮೊದಲ ಕ್ವಾರ್ಟರ್-ಲೀಟರ್ ಕ್ರೂಸರ್ ಮೋಟಾರ್‌ಸೈಕಲ್ ಆಗಿದೆ. ಇದು 18.5 bhp ಗರಿಷ್ಠ ಪವರ್ ಮತ್ತು 19 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಈ ಮೋಟಾರ್‌ಸೈಕಲ್ ಬೆಲೆ ರೂ.2.89 ಲಕ್ಷವಿದ್ದು, ಬುಕಿಂಗ್ ಮೊತ್ತ ರೂ.10,000 ಇದೆ.

ಕೀವೇ ಕೆ 300 ಎನ್/ಕೀವೇ ಕೆ 300 ಆರ್ ಮೋಟಾರ್‌ಸೈಕಲ್‌:
ಕೀವೇ ಕೆ 300 ಎನ್ ನೇಕೆಡ್ ಮೋಟಾರ್‌ಸೈಕಲ್ ಆಗಿದೆ. ಆದರೆ, ಕೀವೇ ಕೆ 300 ಆರ್ ಸಂಪೂರ್ಣ-ಫೇರ್ಡ್ ಮೋಟಾರ್‌ಸೈಕಲ್ ಆಗಿದೆ ಎಂದು ಹೇಳಬಹುದು. ಇವು 292 ಸಿಸಿ, 4-ಸ್ಟ್ರೋಕ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿದ್ದು, 27 bhp ಗರಿಷ್ಠ ಪವರ್ ಮತ್ತು 25 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಬೆಲೆಗೆ ಸಂಬಂಧಿಸಿದಂತೆ, ಕೀವೇ ಕೆ300 ಎನ್ ರೂ 2.65 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಆದರೆ, ಕೀವೇ ಕೆ 300 ಆರ್ ರೂ.34,000 ಹೆಚ್ಚು ದುಬಾರಿಯಾಗಿದೆ.

ಇನ್ನು, ಕೀವೇ' SR 250 ರೆಟ್ರೋ ಸ್ಟೈಲ್ ಬೈಕ್ ಅನ್ನು ಆಟೋ ಎಕ್ಸ್‌ಪೋ ಮೂಲಕ 1.49 ಲಕ್ಷ ರೂಪಾಯಿ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಇದು 223 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, 7,500 rpmನಲ್ಲಿ 16bhp ಗರಿಷ್ಠ ಪವರ್ ಮತ್ತು 6,500 rpmನಲ್ಲಿ 16Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 120 kg ತೂಕವಿದೆ. ಸರ್ಕ್ಯುಲರ್ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳು, ಕ್ರೋಮ್ ಸರೌಂಡ್‌ಗಳೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೈಲ್ ಲ್ಯಾಂಪ್‌ ಅಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
Auto expo 2023 keeway sr125 sixties 300i vieste 300 l details kannada
Story first published: Wednesday, January 18, 2023, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X