ಗ್ರಾಹಕನಿಗೆ ಹೊಸ ಕಾರು ಅಥವಾ ಬಡ್ಡಿ ಸಮೇತ ಹಣ ಹಿಂದಿರುಗಿಸುವಂತೆ ಕಿಯಾ ಡೀಲರ್‌ಗೆ ಆದೇಶ

ಹೊಸ ಫೇಸ್‌ ಲಿಫ್ಟ್ ಮಾದರಿಯನ್ನು ಬುಕ್ ಮಾಡಿದರೆ ಹಳೆಯ ಮಾದರಿಯನ್ನು ವಿತರಿಸಿದ ಕಿಯಾ ಡೀಲರ್‌ಗೆ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ತಾಕೀತು ಮಾಡಿದೆ. ಗ್ರಾಹಕರಿಗೆ ಬುಕ್ ಮಾಡಲಾದ ಅದೇ ಮಾದರಿಯನ್ನು ನೀಡಬೇಕು ಇಲ್ಲದಿದ್ದರೆ ಗ್ರಾಹಕ ಪಾವತಿಸಿದ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಆದೇಶಿಸಿದೆ.

ಮೇ 28, 2020 ರಂದು ಧಾರವಾಡದ JSS ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕ ನಾಗರಾಜ್ ಪಾಟೀಲ್ ಎಂಬುವರು ಇಲ್ಲಿನ ನಾಗಶಾಂತಿ ಕಿಯಾ ಡೀಲರ್‌ಶಿಪ್‌ನಲ್ಲಿ ಫೇಸ್‌ಲಿಫ್ಟ್ + ಮಫರ್ ಬಂಪರ್ ಹೊಂದಿರುವ ಕಿಯಾ ಸೆಲ್ಟೋಸ್ HTK+G ಸ್ಮಾರ್ಟ್ ಸ್ಟ್ರೀಮ್ 1.5 ಲೀ. ವಾಹನವನ್ನು ಬುಕ್ ಮಾಡಿದ್ದರು. ಆದರೆ 2020 ಜುಲೈ 2 ರಂದು ಡೀಲರ್ ಹಳೆಯ ಮಾದರಿಯಾದ ಸೆಲ್ಟೋಸ್ HTK+ 1.5 ಲೀಟರ್ ವಾಹನವನ್ನು ವಿತರಿಸಿದ್ದರು.

ಗ್ರಾಹಕನಿಗೆ ಹೊಸ ಕಾರು ಅಥವಾ ಬಡ್ಡಿ ಸಮೇತ ಹಣ ಹಿಂದಿರುಗಿಸುವಂತೆ ಕಿಯಾ ಡೀಲರ್‌ಗೆ ಆದೇಶ

ನಾಗರಾಜ್ ಅವರಿಗೆ ಮಾರಾಟ ಮಾಡಿದ ಕಾರು ತಾನು ಬುಕ್ ಮಾಡಿದ್ದಲ್ಲ ಎಂದು ತಿಂಗಳ ನಂತರ ಗೊತ್ತಾಗಿದೆ. ಅವರು ವಾಹನದ ಬದಲಿ ಕೋರಿ ಹಲವಾರು ಬಾರಿ ಡೀಲರ್‌ ಅನ್ನು ಸಂಪರ್ಕಿಸಿದ್ದರು. ಆದರೆ ನಾಗಶಾಂತಿ ಕಿಯಾ ಜನರಲ್ ಮ್ಯಾನೇಜರ್ ವಾಹನವನ್ನು ಬದಲಾಯಿಸಲು ನಿರಾಕರಿಸಿದ್ದರು. ಬದಲಾಗಿ, ಈಗಾಗಲೇ ವಿತರಿಸಲಾದ ವಾಹನಕ್ಕೆ ಹೊಸ ಮಾದರಿಯಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿ ಕೊಡಲಾಗುವುದು ಎಂದು ಅವರು ಗ್ರಾಹಕರಿಗೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಎಷ್ಟೇ ಕೇಳಿಕೊಂಡರು ತಮ್ಮ ಬೇಡಿಕೆಯನ್ನು ಈಡೇರಿಸದ ಡೀಲರ್ ವಿರುದ್ಧ ನ್ಯಾಯ ಪಡಿಯಲು ನಾಗರಾಜ್ ಪಾಟೀಲ ಅವರು ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ಮೊರೆ ಹೋಗಿದ್ದರು. ನಾಗಶಾಂತಿ ಕಿಯಾ ಡೀಲರ್ ದೂರನ್ನು ಪ್ರಶ್ನಿಸಿ ದೂರುದಾರರು ಸುಳ್ಳು ಹೇಳುತ್ತಿದ್ದಾರೆ ಎಂದು ವಾದಿಸಿದ್ದರು. ಕಂಪನಿಯು ಅವರು ಬುಕ್ ಮಾಡಿದ ಕಾರನ್ನು ನೀಡಿರುವುದಾಗಿ ಹೇಳಿದ್ದರು. ಎರಡೂ ಕಡೆಯ ವಾದವನ್ನು ಆಲಿಸಿ, ಲಭ್ಯವಾಗಿರುವ ದಾಖಲೆಗಳನ್ನು ಪರಿಶೀಲಿಸಿದ ವೇದಿಕೆ ಕೊನೆಗೂ ತೀರ್ಪನ್ನು ನೀಡಿದೆ.

ಗ್ರಾಹಕನಿಗೆ ಹೊಸ ಕಾರು ಅಥವಾ ಬಡ್ಡಿ ಸಮೇತ ಹಣ ಹಿಂದಿರುಗಿಸುವಂತೆ ಕಿಯಾ ಡೀಲರ್‌ಗೆ ಆದೇಶ

ದೂರುದಾರರು ಬುಕ್ ಮಾಡಿದ್ದ ವಾಹನವನ್ನು ನಾಗಶಾಂತಿ ಕಿಯಾ ತಲುಪಿಸಿಲ್ಲ ಎಂಬ ತೀರ್ಮಾನಕ್ಕೆ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ಬಂದಿದೆ. ಡೀಲರ್‌ ಶಿಪ್‌ನಿಂದ ಸೇವೆಯನ್ನು ಒದಗಿಸುವಲ್ಲಿ ಲೋಪವಾಗಿದೆ, ಗ್ರಾಹಕ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದ ಅವರು, ನಾಗಶಾಂತಿ ಕಿಯಾ ಡೀಲರ್‌ ಗ್ರಾಹಕರ ನಂಬಿಕೆಯನ್ನು ಉಲ್ಲಂಘಿಸಿದ್ದಾರೆ. ಹಳೆಯ ಮಾದರಿಯ ವಾಹನವನ್ನು ವಿತರಿಸುವ ಮೂಲಕ ಗ್ರಾಹಕರಿಗೆ ವಂಚಿಸಿದ್ದಾರೆ ಎಂದು ಡೀಲರ್ ವಿರುದ್ಧ ತೀರ್ಪು ನೀಡಲಾಯಿತು.

ಗ್ರಾಹಕರು ಬೆಲೆಬಾಳುವ ವಸ್ತುಗಳನ್ನು ಖರೀದಿಸಿದಾಗ, ಅವರಿಗೆ ತಲುಪಿಸಲಾದ ವಸ್ತುವಿನ ಗುಣಮಟ್ಟದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದ ವೇದಿಕೆಯು, ಫೇಸ್ ಲಿಫ್ಟ್ + ಮಫರ್ ಬಂಪರ್ ಸೌಲಭ್ಯದೊಂದಿಗೆ HTK+G ಸ್ಮಾರ್ಟ್ ಸ್ಟ್ರೀಮ್ 1.5 ಲೀಟರ್ ವಾಹನವನ್ನು ಒಂದು ತಿಂಗಳೊಳಗೆ ತಲುಪಿಸಲು ಡೀಲರ್‌ಗೆ ನಿರ್ದೇಶಿಸಿದೆ. ಆದೇಶವನ್ನು ಅನುಸರಿಸಲು ವಿಫಲವಾದರೆ, ನಾಗಶಾಂತಿ ಡೀಲರ್‌ ಅವರು ಗ್ರಾಹಕರಿಗೆ 2 ಜುಲೈ 2020 ರಿಂದ 8% ಬಡ್ಡಿಯೊಂದಿಗೆ ರೂ. 14.85 ಲಕ್ಷವನ್ನು ಹಿಂದಿರುಗಿಸಬೇಕು ಎಂದು ತಾಕೀತು ಮಾಡಿದೆ.

ಗ್ರಾಹಕನಿಗೆ ಹೊಸ ಕಾರು ಅಥವಾ ಬಡ್ಡಿ ಸಮೇತ ಹಣ ಹಿಂದಿರುಗಿಸುವಂತೆ ಕಿಯಾ ಡೀಲರ್‌ಗೆ ಆದೇಶ

ಗ್ರಾಹಕರಿಗೆ ಉಂಟಾದ ಅನಾನುಕೂಲತೆಗಾಗಿ ರೂ. 1 ಲಕ್ಷ ಪರಿಹಾರವನ್ನು ಪಾವತಿಸಬೇಕು. ತೀರ್ಪಿನ ಒಂದು ತಿಂಗಳೊಳಗೆ ವೆಚ್ಚಕ್ಕಾಗಿ ಇನ್ನೂ 10,000 ರೂಪಾಯಿಗಳನ್ನು ಪಾವತಿಸುವಂತೆ ಫೋರಂ ಡೀಲರ್‌ಗೆ ನಿರ್ದೇಶಿಸಿದೆ. ಒಟ್ಟಾರೆಯಾಗಿ ಎರಡು ವರ್ಷಗಳ ಬಳಿಕ ತಾವು ಬಯಸಿದಂತೆ ತಮ್ಮ ಕಾರನ್ನು ಹಿಂಪಡೆಯಲು ಗ್ರಾಹಕ ನಾಗರಾಜ್ ಪಾಟೀಲ್ ಯಶಸ್ವಿಯಾಗಿದ್ದಾರೆ. ಗ್ರಾಹಕರು ಯಾವುದೇ ಉತ್ಪನ್ನವಾಗಿರಲಿ ಮೊದಲು ಪರಿಶೀಲಿಸಿ ಪಡೆಯುವುದು ಉತ್ತಮ. ಇಲ್ಲದಿದ್ದರೇ ಹೀಗೆ ವರ್ಷಗಟ್ಟಲೇ ನ್ಯಾಯಕ್ಕಾಗಿ ಅಲೆಯಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, March 3, 2023, 16:40 [IST]
English summary
Kia dealer fined for giving old model to customer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+