ಮತ್ತೆ ಸದ್ದು ಮಾಡಲಿದೆ ಕೈನೆಟಿಕ್ ಲೂನಾ... ಹೊಸ ಡಿಸೈನ್‌ನಲ್ಲಿ ಭರ್ಜರಿ ರೀ ಎಂಟ್ರಿ ಖಚಿತವೆಂದ ಸಿಇಒ

80-90 ರ ದಶಕದ ಜನಪ್ರಿಯ ಐಕಾನಿಕ್ ಮೊಪೆಡ್ ಕೈನಾಟಿಕ್ ಲೂನಾ ಯಾರಿಗೆ ಗೊತ್ತಿಲ್ಲ ಹೇಳಿ? ಈಗಲೂ ಅದರೊಂದಿಗಿನ ಹಳೆಯ ನೆನಪುಗಳನ್ನು ಮೆಲಕು ಹಾಕಿಕೊಳ್ಳುವವರು ಇದ್ದಾರೆ. ಆ ನೆನಪುಗಳಿಂದ ಹೊರಬಂದು ನಿಜ ಜೀವನದಲ್ಲೂ ಹೊಸ ಡಿಸೈನ್‌ನೊಂದಿಗೆ ಈ ಮೊಪೆಡ್ ಖರಿದಿಸುವ ಅವಕಾಶವನ್ನು ಕೈನೆಟಿಕ್ ಗ್ರೀನ್ ಸಿಇಒ ಒದಗಿಸುತ್ತಿದ್ದಾರೆ.

ಈ ಐಕಾನಿಕ್ ಮೊಪೆಡ್ ಅನ್ನು ಮತ್ತೆ ಮಾರಾಟಕ್ಕೆ ತರಲು ಸಜ್ಜಾಗಿದ್ದಾರೆ. ಆದ್ರೆ ಹಿಂದಿದ್ದ 50cc ಎಂಜಿನ್‌ನೊಂದಿಗೆ ಅಲ್ಲ. ಬದಲಾಗಿ, ಕೈನೆಟಿಕ್‌ನಿಂದ ಮುಂಬರುವ ಲೂನಾವೂ ಎಲೆಕ್ಟ್ರಿಕ್ ಸ್ಕೂಟರ್ ಆಗಿರುತ್ತದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿವೆ. ಇದಕ್ಕೆ ಕಾರಣ ಕೈನೆಟಿಕ್ ಗ್ರೀನ್ ಸಿಇಒ ಸುಲಜ್ಜ ಫಿರೋಡಿಯಾ ಮೋಟ್ವಾನಿ ಅವರು.

kinetic-luna

ಅವರು ಇತ್ತೀಚೆಗೆ ಈ ವಾಹನದ ಬಗ್ಗೆ ವಿವರಿಸುತ್ತಾ, ಹೊಸ ಲೂನಾವನ್ನು 'ಇ ಲೂನಾ' ಎಂದು ಹೆಸರಿಸಿದ್ದಾರೆ. ನಮ್ಮ ಭಾರತೀಯರಿಗೆ ಹಳೆಯ ವಾಹನಗಳಾಗಲಿ, ವ್ಯಕ್ತಿಗಳಾಗಳನ್ನಾಗಲಿ ಗೌರವದಿಂದ ನೋಡುವುದು ಸಂಪ್ರದಾಯ. ಈಗ ಕೂಡ ಹಳೇ ಲೂನಾಗಿದ್ದ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅವರು ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಿ ಹೊಸ ಯುಗಕ್ಕೆ ಪರಿಚಯಿಸುತ್ತಿದ್ದಾರೆ.

ಟ್ವಿಟರ್‌ನಲ್ಲಿನ ಅವರ ಪೋಸ್ಟ್‌ ಹೀಗಿದೆ. '' ಎ ಬ್ಲಾಸ್ಟ್ ಫ್ರಂ ದ ಪಾಸ್ಟ್ ''ನಡಿ ನನ್ನ ಲೂನಾ''... ಇದರ ಸೃಷ್ಟಕರ್ತ ನಮ್ಮ ತಂದೆ ಪದ್ಮ ಶ್ರೀ ಅರುಣ್ ಫಿರೋಡಿಯಾ! ಈ ಅಂತರವನ್ನು ಹೊಸ ಕ್ರಾಂತಿಕಾರಿ ಮತ್ತು ಉತ್ತೇಜಕವಾದದ್ದನ್ನು ಕೈನೆಟಿಕ್ ಲೂನಾದಿಂದ ನೊಡಲಿದ್ದೀರಿ. ಹೌದು ಇದು ನಿಜ, ಇದು ''ಇ ಲೂನಾ !!! ಎಂದು ಬರೆದುಕೊಂಡಿದ್ದಾರೆ.

kinetic-luna

ಈ ಟ್ವೀಟ್ ಜೊತೆಗೆ, ಕೈನೆಟಿಕ್ ಗ್ರೂಪ್‌ನ ಅಧ್ಯಕ್ಷ ಅರುಣ್ ಫಿರೋಡಿಯಾ ಅವರು ಕೈನೆಟಿಕ್ ಲೂನಾವನ್ನು ಸವಾರಿ ಮಾಡುತ್ತಿರುವ ಚಿತ್ರ ಹಾಗೂ ಅದರೊಂದಿಗೆ ಹಳೆಯ "ಚಲ್ ಮೇರಿ ಲೂನಾ" ಎಂಬ ಜಾಹೀರಾತನ್ನು ಸಹ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ಫುಲ್ ವೈರಲ್ ಆಗಿದ್ದು, ಕೈನೆಟಿಕ್ ಲೂನಾ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಕೈನೆಟಿಕ್ ತನ್ನ ಐಕಾನಿಕ್ ''ಇ ಲೂನಾ''ಗೆ ಪ್ರತ್ಯೇಕ ಅಸೆಂಬ್ಲಿ ಲೈನ್ ಅನ್ನು ಹೊಂದಿಸುತ್ತಿದೆ. ಕಂಪನಿಯು ಅಸೆಂಬ್ಲಿ ಸಾಲಿನಲ್ಲಿ 30 ಹೊಸ ವೆಲ್ಡಿಂಗ್ ಯಂತ್ರಗಳನ್ನು ಸ್ಥಾಪಿಸಿದೆ. ಜೊತೆಗೆ ಇ ಲೂನಾಗಾಗಿ ವಿಶೇಷ ಪೇಂಟ್ ಬೂತ್‌ಗಳು ಮತ್ತು ಫ್ಯಾಬ್ರಿಕೇಶನ್ ಅಂಗಡಿಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೊಲ್ಯೂಷನ್ಸ್ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಇ ಲೂನಾವನ್ನು ತಯಾರಿಸಲಿದೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮದಲ್ಲಿಟ್ಟುಕೊಂಡು ಇ ಲೂನಾವನ್ನು ತರಲು ಕಂಪನಿ ಸಜ್ಜಾಗಿದೆ. ಆದ್ರೆ ಈಗಿನ ಮಾರುಕಟ್ಟೆಯಲ್ಲಿನ ಇತರ ಇವಿ ಸ್ಕೂಟರ್‌ಗಳಿಗೆ ಪೈಪೋಟಿಯಾಗಿ ಇ ಲೂನಾವನ್ನು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹಲವು ಫೀಚರ್‌ಗಳೊಂದಿಗೆ ತರುವಲ್ಲಿ ಕೈನೆಟಿಕ್ ಕಂಪನಿ ಯಾವಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Tuesday, May 30, 2023, 16:27 [IST]
English summary
Kinetic luna re entry confirms ceo sulajja firodia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+