ಭಾರತದಲ್ಲಿ ಆಕರ್ಷಕ ವೈಶಿಷ್ಟ್ಯದ ಕೊಮಾಕಿ LY Pro ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಯುಗಾರಂಭವಾಗಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಕಂಪನಿ ವಿವಿಧ ಎಲೆಕ್ಟ್ರಿಕ್ ಬೈಕ್, ಹಾಗೂ ಸ್ಕೂಟರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತವೆ. ಇದೀಗ, ಕೊಮಾಕಿ (Komaki) ತನ್ನ ಎಲೆಕ್ಟ್ರಿಕ್ ಸ್ಕೂಟರ್ 'LY Pro' ಅನ್ನು ಲಾಂಜ್ ಮಾಡಿದೆ. ಈ ಸ್ಕೂಟರ್ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಆ ಬಗ್ಗೆ ತಿಳಿಯೋಣ.
ಈ ಕೊಮಾಕಿ LY Pro ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುವ ಆಕರ್ಷಕ ವೈಶಿಷ್ಟ್ಯವೆಂದರೇ, ಡ್ಯೂಯಲ್ 62V32AH ಬ್ಯಾಟರಿ ಆಯ್ಕೆಯನ್ನು ಪಡೆದಿದೆ. ಇದರ ಬದಲಾಯಿಸಬಹುದಾದ ಬ್ಯಾಟರಿಗಳು 0 ಯಿಂದ 100% ಚಾರ್ಜ್ ಆಗಲು ಕೇವಲ 5 ಗಂಟೆ ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ರೂ 1,37,500 (ಎಕ್ಸ್ ಶೋ ರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕೊಮಾಕಿ ಕಂಪನಿ ಸ್ಥಾಪನೆಯಾಗಿ ಕೇವಲ ನಾಲ್ಕು ವರ್ಷಗಳು ಕಳೆದಿದ್ದು, ದೇಶಾದ್ಯಂತ 380ಕ್ಕೂ ಹೆಚ್ಚು ಡೀಲರ್ ಶಿಪ್ ಗಳನ್ನು ಹೊಂದಿದೆ.

ನೂತನ ಕೊಮಾಕಿ LY Pro ಸ್ಕೂಟರ್ ಮೂರು ರೈಡಿಂಗ್ ಮೋಡ್ ಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ (Eco), ಸ್ಪೋರ್ಟ್ಸ್ (Sports), ಹಾಗೂ ಟರ್ಬೊ (Turbo). ಈ ಸ್ಕೂಟರ್, 3kW ಹಬ್ ಮೋಟಾರ್ ನಿಂದ ಕಾರ್ಯ ನಿರ್ವಹಿಸಲಿದ್ದು, ಗಂಟೆಗೆ 62 ಕಿಲೋಮೀಟರ್ ವೇಗವನ್ನು ಹೊಂದಿದೆ.12 ಇಂಚಿನ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದುಕೊಂಡಿದೆ. ಸ್ಕೂಟರ್ ಅನ್ನು ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್ ಮಾಡಬಹುದು.
ಈ ಎಲೆಕ್ಟ್ರಿಕ್ ಸ್ಕೂಟರ್, ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಡ್ವಾನ್ಸ್ಡ್ ಆಂಟಿ ಸ್ಕಿಡ್ ಟೆಕ್ನಲಾಜಿ (ಇದು ಗುಡ್ಡಗಾಡು ರಸ್ತೆಯಲ್ಲಿ ಪ್ರಯಾಣಿಸುವಾಗ ಸ್ಕೂಟರ್ ಸ್ಕಿಡ್ ಆಗದಂತೆ ತಡೆಯುತ್ತದೆ) ಪಾರ್ಕಿಂಗ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ರಿವರ್ಸ್ ಅಸಿಸ್ಟ್, TFT ಇನ್ಸ್ಟ್ರುಮೆಂಟ್ ಪ್ಯಾನೆಲ್, ಬ್ಲೂಟೂತ್, ಆನ್‌ಬೋರ್ಡ್ ನ್ಯಾವಿಗೇಷನ್ ಹಾಗೂ ರೆಡಿ ಟು ರೈಡ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.
ಹೊಸ ಸ್ಕೂಟರ್ ಬಿಡುಗಡೆ ಬಗ್ಗೆ ಕಂಪನಿಯ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕ ಗುಂಜನ್ ಮಲ್ಹೋತ್ರಾ ಮಾತನಾಡಿ, 'ಭಾರತದಲ್ಲಿ ಹಸಿರು ಪರಿಸರ ನಿರ್ಮಾಣ ಮಾಡಲು ಕೊಮಾಕಿ ಕಂಪನಿ ಶ್ರಮಿಸುತ್ತಿದೆ. ಉತ್ತಮ ಗುಣಮಟ್ಟ, ಹೆಚ್ಚಿನ ಕಾರ್ಯಕ್ಷಮತೆ, ಸುರಕ್ಷತೆ, ಆಕರ್ಷಕ ವಿನ್ಯಾಸ, ಕಡಿಮೆ ನಿರ್ವಹಣೆ ವೆಚ್ಚ ಹಾಗೂ ದೀರ್ಘಾವಧಿ ಬಾಳಿಕೆ ಬರುವಂತಹ ಇವಿ ತಯಾರಿಕೆಯಿಂದ ನಮ್ಮ ಸಂಸ್ಥೆ ಖ್ಯಾತಿಗಳಿಸಿದೆ. ಜೊತೆಗೆ ಗ್ರಾಹಕರು ನಂಬಿದ್ದಾರೆ. ಈ ಕೊಮಾಕಿ LY Pro ಸ್ಕೂಟರ್ ಕೂಡ ಅತ್ಯುತ್ತಮವಾಗಿದೆ' ಎಂದು ಹೇಳಿದ್ದಾರೆ.
ಕೊಮಾಕಿ, ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅವುಗಳ ಟಾಪ್ ಸ್ವೀಡ್, ರೇಂಜ್ ಹಾಗೂ ವೈಶಿಷ್ಟ್ಯವನ್ನು ಆದರಿಸಿ, ಬೆಲೆ ಬೇರೆ-ಬೇರೆಯಾಗಿದೆ. ಕೊಮಾಕಿ XGT KM ರೂ.42,500 ದಿಂದ ರೂ.93,045, ಕೊಮಾಕಿ LY ರೂ.95,866, ಕೊಮಾಕಿ XGT X4 ರೂ.1.02 ದಿಂದ ರೂ.1.24 ಲಕ್ಷ, ಕೊಮಾಕಿ X2 Vogue ರೂ.47,000 ದಿಂದ 62,311, ಕೊಮಾಕಿ TN-95 ರೂ.98,000 ದಿಂದ ರೂ.1.31 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ಇನ್ನು, ಈ ನೂತನ ಕೊಮಾಕಿ LY Pro ವಿಶಿಷ್ಟ ವೈಶಿಷ್ಟ್ಯವಾದ ಡ್ಯೂಯಲ್ ಬ್ಯಾಟರಿ ಆಯ್ಕೆಯನ್ನು ಪಡೆದುಕೊಂಡಿರುವುದರಿಂದ ಹೆಚ್ಚಿನ ಗ್ರಾಹಕರು ಖರೀದಿಸಬಹುದು. ಜೊತೆಗೆ ಈ ಸ್ಕೂಟರ್, ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾ, ಎಥರ್ ಹಾಗೂ ಟಿವಿಎಸ್ ಸೇರಿದಂತೆ ಇತರೆ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಬಹುದು. ಈ ಬಗ್ಗೆ ಕೊಮಾಕಿ LY Pro ಸ್ಕೂಟರ್ ವಿತರಣೆಗಳು ಆರಂಭವಾದ ಮೇಲೆ ಖಚಿತ ಮಾಹಿತಿ ತಿಳಿಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








