Komaki Ranger: ಅತ್ಯುತ್ತಮ ರೇಂಜ್, ಹೊಸ ನವೀಕರಣಗಳೊಂದಿಗೆ ಲಗ್ಗೆಯಿಟ್ಟ ಎಲೆಕ್ಟ್ರಿಕ್ ಬೈಕ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕೊಮಾಕಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಅನ್ನು ಹೊಸ ನವೀಕರಣದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ (Komaki Ranger electric cruiser) ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.85 ಲಕ್ಷವಾಗಿದೆ.

ವಿಶೇಷವಾಗಿ, ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಮಾದರಿಯು ಹೆಚ್ಚಿನ ವೈಶಿಷ್ಟ್ಯಗಳು, ರೇಂಜ್ ಮತ್ತು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ. ರೇಂಜರ್ ಇ-ಕ್ರೂಸರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಈ ರೀತಿಯ ಏಕೈಕ ಕೊಡುಗೆಯಾಗಿದೆ.ಇದು ಇ-ಮೋಟಾರ್‌ಸೈಕಲ್ ಜಾಗದ ಪ್ರೀಮಿಯಂ ಆಗಿಯೂ ಸ್ಥಾನ ಪಡೆದಿದೆ. 2023ರ ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ನವೀಕರಣಗಳು ದೊಡ್ಡ ಗ್ರಾಸರ್ ವ್ಹೀಲ್ ಗಳು ಮತ್ತು ಕ್ರೋಮ್ ಅಸ್ಸೆಂಟ್ ಗಳೊಂದಿಗೆ ಹೊಸ ಬಣ್ಣದ ಯೋಜನೆಗಳನ್ನು ಒಳಗೊಂಡಿವೆ.

Komaki Ranger

ಮಾದರಿಯು ಆನ್‌ಬೋರ್ಡ್ ನ್ಯಾವಿಗೇಶನ್‌ನೊಂದಿಗೆ ನವೀಕರಿಸಿದ 7-ಇಂಚಿನ TFT ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದಲ್ಲದೆ, ಕ್ರೂಸರ್ ಬೈಕ್ ಸಿಂಗಲ್ ಚಾರ್ಜ್‌ನಲ್ಲಿ 200-250 ಕಿಮೀ ಓಡಬಹುದು ಎಂದು ಕಂಪನಿ ಹೇಳಿಕೊಂಡಿದೆ, ಆದರೆ ಹೆಚ್ಚುವರಿ ಬ್ಯಾಟರಿ ಸ್ಟೋರೇಜ್ ಸ್ಪೇಸ್ ಅನ್ನು 50 ಲೀಟರ್‌ಗೆ ಹೆಚ್ಚಿಸಲಾಗಿದೆ. ಈ ರೀತಿ ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಹೊಂದಿವೆ.

ನವೀಕರಿಸಿದ ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಕುರಿತು ಕೊಮಾಕಿ ಎಲೆಕ್ಟ್ರಿಕ್ ವಿಭಾಗದ ನಿರ್ದೇಶಕ ಗುಂಜನ್ ಮಲ್ಹೋತ್ರಾ ಅವರು ಮತನಾಡಿ, ನವೀಕರಿಸಿದ ಕೊಮಾಕಿ ರೇಂಜರ್, ಒರಟಾದ ಮತ್ತು ಸೊಗಸಾದ ಅಭಿವ್ಯಕ್ತಿಗಳೊಂದಿಗೆ ಸುಗಮ ಮತ್ತು ಪ್ರೀಮಿಯಂ ಪ್ರಯಾಣದ ಅನುಭವಗಳನ್ನು ಆದ್ಯತೆ ನೀಡುವ ಪ್ರಯಾಣಿಕರಿಗೆ ಪ್ರಯತ್ನವಿಲ್ಲದ ಸವಾರಿಗಾಗಿ ಪರಿಪೂರ್ಣ ಆಯ್ಕೆಯಾಗಿದೆ.

Komaki Ranger

ಹೊಸ ರೇಂಜರ್‌ನೊಂದಿಗೆ, ನಾವು ಭಾರತದ ಮೊದಲ ಎಲೆಕ್ಟ್ರಿಕ್ ಕ್ರೂಸರ್ ಅನ್ನು ರಚಿಸುವ ಮೂಲಕ ಇತಿಹಾಸದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಸುಧಾರಿತ ಇವಿ ಅನ್ನು ಅಪ್‌ಗ್ರೇಡ್ ಮಾಡುವಾಗ ರೇಂಜರ್ ಪ್ರೀಮಿಯಂ ಮಾಡುವುದು ನಮ್ಮ ಪ್ರಮುಖ ಗಮನಗಳಲ್ಲಿ ಒಂದಾಗಿದೆ. ಭಾರತೀಯ ಮಾರುಕಟ್ಟೆಯ ಎಲ್ಲಾ ವಿಭಾಗಗಳಿಗೆ ವಾಹನವನ್ನು ಲಭ್ಯವಾಗುವಂತೆ ನಾವು ಖಚಿತಪಡಿಸಿಕೊಂಡಿದ್ದೇವೆ ಎಂದು ಹೇಳಿದರು.

2023ರ ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಹಿಂದಿನ ಸಸ್ಪೆಕ್ಷನ್ ಮತ್ತು ಸ್ಮಾರ್ಟ್ ಬ್ಯಾಟರಿ ಅಪ್ಲಿಕೇಶನ್‌ನೊಂದಿಗೆ 4.5 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಲ್ಲಿ ಪ್ರಿ-ಲೋಡ್ ಹೊಂದಾಣಿಕೆಯನ್ನು ಸಹ ಪಡೆಯುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಪಾರ್ಕ್ ಅಸಿಸ್ಟ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಸೈಡ್ ಸ್ಟ್ಯಾಂಡ್ ಸೆನ್ಸಾರ್ ಅನ್ನು ಹೊಂದಿದೆ.

ಇದರೊಂದಿಗೆ ಎಕ್ಸಾಸ್ಟ್‌ಗಳಂತೆ ಕಾಣುವ ಡ್ಯುಯಲ್ ಸೌಂಡ್ ಪೈಪ್‌ಗಳು ಮತ್ತು ಎಕ್ಸಾಸ್ಟ್ ಟಿಪ್ಸ್‌ನಲ್ಲಿ ಲೈಟಿಂಗ್‌ನೊಂದಿಗೆ "ಫ್ಲೇಮ್ ಎಫೆಕ್ಟ್" ನೊಂದಿಗೆ ಬರುತ್ತದೆ. ಕೋಮಕಿ ರೇಂಜ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಗಂಟೆಗೆ 80 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು 2023ರ ಕೊಮಾಕಿ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಚಾರ್ಜಿಂಗ್ ಸಮಯವು 0-90 ಪ್ರತಿಶತಕ್ಕೆ ನಾಲ್ಕು ಗಂಟೆಗಳಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ನೀಡುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಅನ್ನು ಮಾಡುವುದನ್ನು ಮರಿಯದಿರಿ.

More from DriveSpark

Article Published On: Saturday, April 29, 2023, 10:58 [IST]
English summary
Komaki ranger electric cruiser updated with more range features details
Read more on ಕೊಮಾಕಿ komaki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+