200 ಕಿಮೀ ರೇಂಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೇವಲ 78000: ಹೀಗಾದರೆ ಎದುರಾಳಿಗಳು ಪಾಡೇನು?
ಎಲ್ಲಿ ನೋಡಿದರೂ ಎಲಕ್ಟ್ರಿಕ್ ವಾಹನಗಳ ಕಾರುಬಾರು ಜೋರಾಗಿರುವ ಇಂದಿನ ದಿನಗಳಲ್ಲಿ ಅವುಗಳ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಇದರ ನಡುವೆ ಇಲ್ಲೊಂದು ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿ ತನ್ನ ವಾಹನದ ಮೇಲೆ ಹಬ್ಬದ ಪ್ರಯುಕ್ತ ಭಾರೀ ಡಿಸ್ಕೌಂಟ್ ಅನ್ನು ಘೋಷಿಸಿದೆ.
ಹೌದು, ಕೋಮಾಕಿ ಎಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯೊಂದು ತನ್ನ ಸ್ಕೂಟರ್‌ಗಳ ಮೇಲರ ಭಾರೀ ಡಿಸ್ಕೌಂಟ್ ಘೋಷಿಸಿದೆ. ಕೋಮಾಕಿ ಎಲ್‌ವೈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಈ ಡಿಸ್ಕೌಂಟ್ ನೀಡಿದ್ದು ಇದು ಈಗ ಬರೀ 78000 ರೂಗಳಿಗೆ ಇದು ನಿಮ್ಮ ಕೈಸೇರಲಿದೆ.

ಮೂಲತಃ ಈ ಸ್ಕೂಟರ್ ಬೆಲೆ ಸುಮಾರು 96,968 ರೂಗಳು ಎಕ್ಸ್ ಶೋರೂಮ್. ಸುಮಾರು 19000 ರೂಗಳ ಡಿಸ್ಕಂಟ್ ನಂತರ ಈ ಬೆಲೆಗೆ ನಿಮಗೆ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿದೆ. ಕಡಿಮೆ ಬೆಲೆಗೆ ಹೆಚ್ಚು ರೇಂಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿದ್ದರೆ ಅಂತಹ ವ್ಯಕ್ತಿಗಳಿಗೆ ಇದೊಂದು ಹೇಳಿ ಮಾಡಿಸಿದ ಸ್ಕೂಟರ್ ಆಗುವುದರಲ್ಲಿ ಎರಡು ಮಾತಿಲ್ಲ.
ಇನ್ನು ಮಾಹಿತಿಗಳ ಪ್ರಕಾರ ಇದು ಲಿಮಿಟೆಡ್ ಅವಧಿಯ ಆಫರ್ ಆಗಿದ್ದು ಕೂಡಲೇ ಧಾವಿಸಿದರೆ ಕಡಿಮೆ ಬೆಲೆಗೆ ಈ ಸ್ಕೂಟರ್ ಅನ್ನು ಸ್ವಂತಗೊಳಿಸಬಹುದು. ಆದರೆ ಈ ಆಫರ್ ಎಂದಿನಿಂದ ಲಭ್ಯವಾಗಲಿದೆ ಎಂದು ಕಂಪನಿ ಇನ್ನೂ ಮಾಹಿತಿಯನ್ನು ಹೊರ ಹಾಕಿಲ್ಲ. ಕಡಿಮೆ ಬೆಲೆಯಾದರೂ ಇದು ಅಧಿಕ ರೇಂಜ್ ನೀಡುವ ಸ್ಕೂಟರ್ ಆಗಿದೆ.
ಕೋಮಾಕಿ ಎಲ್‌ವೈ ಸ್ಕೂಟರ್‌ನ ವಿಶೇಷತೆಗಳನ್ನು ನೋಡುವುದಾದರೆ ಈ ಸ್ಕೂಟರ್ ನಿಮಗೆ ಒಂದು ಚಾರ್ಜ್‌ಗೆ ಸುಮಾರು 85 ಕಿಮೀ ರೇಂಜ್ ನೀಡುತ್ತದೆ. ಆದರೆ ಇದೀ ಬೈಕ್‌ನ ಡ್ಯುಯಲ್ ಬ್ಯಾಟರಿಯ ಮಾದರಿಯಲ್ಲಿ ನಿಮಗೆ ಸುಮಾರು 200 ಕಿಮೀ ತನಕವೂ ರೇಂಜ್ ನೀಡುತ್ತಿದ್ದು ನೀವು ಯಾವುದೇ ಆತಂಕವಿಲ್ಲದೆ ದೂರದ ಪ್ರಯಾಣವನ್ನು ಮಾಡಬಹುದಾಗಿದೆ.
ಇನ್ನು ಇದರಲ್ಲಿ ರಿಮೂವಬಲ್ ಬ್ಯಾಟರಿಯ ಸೌಲಭ್ಯವನ್ನು ಕಂಪನಿ ನೀಡುತ್ತಿದ್ದು, ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ನಾಲ್ಕುಗಂಟೆ ಐವತ್ತೈದು ನಿಮಿಷಗಳು ಬೇಕಾಗುತ್ತದೆ. ಅಂದರೆ ಸುಮಾರು 5 ಗಂಟೆಯ ಅವಧಿಯಲ್ಲಿ ಈ ಸ್ಕೂಟರ್ ಫುಲ್ ಚಾರ್ಜ್ ಆಗಿ ಸವಾರಿಗೆ ಸಿದ್ದವಾಗಿ ನಿಲ್ಲುತ್ತದೆ. ಇನ್ನು ಸಿಂಗಲ್ ಬ್ಯಾಟರಿಯ ಮಾದರಿಗೆ ನಿಮಗೆ 19000 ರೂಗಳ ಡಿಸ್ಕೌಂಟ್ ಲಭ್ಯವಿದೆ.
ಇದು ಮಾತ್ರವಲ್ಲದೇ ಈ ಕೋಮಾಕಿ ಸ್ಕೂಟರ್‌ನಲ್ಲಿ ನಿಮಗೆ ಟಿಎಫ್‌ಟಿ ಡಿಸ್ಪ್ಲೇ ಇನ್ಸ್ಟ್ರುಮೆಂಟ್ ಕ್ಲಸ್ಟರ್ ದೊರಕುತ್ತಿದ್ದು, ಇದು ನಿಮ್ಮ ಸವಾರಿಯ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲಿದೆ. ಈ ಬೈಕ್‌ನಲ್ಲು ಬ್ಲೂಟೂತ್ ಮೂಲಕ ಹಾಡುಗಳನ್ನು ಕನೆಕ್ಟ್ ಮಾಡುವ ವ್ಯವಸ್ಥೆಯೂ ಸಹ ಇದೆ. ಇದರ ಲೈಟಿಂಗ್ ವ್ಯವಸ್ಥೆಯಲ್ಲಿ ಎಲ್ಲವೂ ಎಲ್‌ಇಡಿ ಲೈಟ್‌ಗಳಾಗಿದ್ದು ಹೆಚ್ಚಿನ ಪ್ರಕಾಶವನ್ನು ಹೊರ ಹಾಕುತ್ತದೆ.
ಕೋಮಾಕಿ ಸ್ಕೂಟರ್‌ನ ಬಣ್ಣಗಳ ಆಯ್ಕೆಗಳನ್ನು ನೋಡುವುದಾದರೆ ಚೆರ್ರಿ ರೆಡ್, ಮೆಟಲ್ ಗ್ರೇ, ಜೆಟ್ ಬ್ಲಾಕ್ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಆಯ್ಕೆಯಿದೆ. ಇನ್ನು ಕೋಮಾಕಿಯ ಎಲ್‌ವೈ ಬೈಕ್ ಅನ್ನು ಕಡಿಮೆ ಬೆಲೆಗೆ ನೀಡುತ್ತಿರುವುದರಿಂದ ಜನ ಸಾಮಾನ್ಯರಿಗೂ ಎಲೆಕ್ಟ್ರಿಕ್ ಬೈಕ್ ಕೈಗೆಟಕುವಂತೆ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








