Lectrix: ಚಂದ್ರಯಾನ ಯಶಸ್ಸು, ಕಡಿಮೆ ಬೆಲೆಯ ಲೆಕ್ಟ್ರಿಕ್ಸ್ LXS ಮೂನ್‌ಶೈನ್ ಇ-ಸ್ಕೂಟರ್ ಬಿಡುಗಡೆ

ಚಂದ್ರಯಾನ -3 (Chandrayaan-3) ಲ್ಯಾಂಡಿಂಗ್‌ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇಳಿಸಿದೆ. ಅದರ ಸವಿನೆನಪಿಗಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಲೆಕ್ಟ್ರಿಕ್ಸ್ ಇವಿ (Lectrix EV) ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಲಿಮಿಟೆಡ್ ಎಡಿಷನ್ ಇ-ಸ್ಕೂಟರ್ ಬಿಡುಗಡೆಗೊಳಿಸಿದೆ.

ನೂತನ ಲೆಕ್ಟ್ರಿಕ್ಸ್ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಲಿಮಿಟೆಡ್ ಎಡಿಷನ್ (Lectrix LXS Moonshine Limited Edition) ಭಾರತದಲ್ಲಿ ರೂ.97,999 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಕೇವಲ 384 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸಲು ಕಂಪನಿ ನಿರ್ಧರಿಸಿದೆ. ಹೊಸ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಎಲೆಕ್ಟ್ರಿಕ್ ಸ್ಕೂಟರ್, ಪ್ರಸ್ತುತ ಲೆಕ್ಟ್ರಿಕ್ಸ್ ಕಂಪನಿ ಮಾರಾಟ ಮಾಡುವ ಎಲ್‌ಎಕ್ಸ್‌ಎಸ್ 2.0 ಸ್ಕೂಟರ್ ಅನ್ನು ಆಧರಿಸಿದೆ.

Lectrix: ಚಂದ್ರಯಾನ ಯಶಸ್ಸು, ಕಡಿಮೆ ಬೆಲೆಯ ಲೆಕ್ಟ್ರಿಕ್ಸ್ LXS ಮೂನ್‌ಶೈನ್ ಇ-ಸ್ಕೂಟರ್ ಬಿಡುಗಡೆ

ಹೊಸ ಲೆಕ್ಟ್ರಿಕ್ಸ್ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಎಲೆಕ್ಟ್ರಿಕ್ ಸ್ಕೂಟರ್, ಆಕರ್ಷಕ ಲೋಗೋವನ್ನು ಹೊಂದಿದೆ. ಇದು, ಭಾರತದ ಉದಯೋನ್ಮುಖ ಬಾಹ್ಯಾಕಾಶ ಯುಗವನ್ನು ಪ್ರತಿನಿಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ವಾಸ್ತವವಾಗಿ ಲೆಕ್ಟ್ರಿಕ್ಸ್ ಕಂಪನಿಯ ಬದಲಾಯಿಸಿರುವ ನೂತನ ಲೋಗೋ ಇದಾಗಿದೆ. ಈ ಲೆಕ್ಟ್ರಿಕ್ಸ್ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಇ-ಸ್ಕೂಟರ್, 48ವಿ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.

ಜೊತೆಗೆ, 1200ಡಬ್ಲ್ಯೂ ಎಲೆಕ್ಟ್ರಿಕ್ ಮೋಟಾರ್ ಒಳಗೊಂಡಿದ್ದು, 50 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 5 ಸೆಕೆಂಡುಗಳಲ್ಲಿ 0 - 25 kmph ವೇಗವನ್ನು ಪಡೆಯಲಿದ್ದು, ಈ ಲೆಕ್ಟ್ರಿಕ್ಸ್ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಸ್ಕೂಟರ್, ಸಂಪೂರ್ಣ ಚಾರ್ಜಿನಲ್ಲಿ 89 km ರೇಂಜ್ ನೀಡಲಿದ್ದು, ಇದರ ಬ್ಯಾಟರಿ ಪ್ಯಾಕ್ ಮನೆಯ ವಿದ್ಯುತ್ ಬಳಕೆಯಲ್ಲಿ 3 - 4 ಗಂಟೆಯಲ್ಲಿ ಚಾರ್ಜ್ ಆಗುತ್ತದೆ.

ಲೆಕ್ಟ್ರಿಕ್ಸ್ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಎಲೆಕ್ಟ್ರಿಕ್ ಸ್ಕೂಟರ್, ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಬಗ್ಗೆ ತಿಳಿಯೋಣ. ಇದು, ಮುಂಭಾಗ, ಹಿಂಭಾಗ ಡ್ರಮ್ ಬ್ರೇಕ್‌ ಆಯ್ಕೆಯನ್ನು ಹೊಂದಿದೆ. ಜೊತೆಗೆ ಇದನ್ನು ಸಿಬಿಎಸ್ (ಕಾಂಬಿ-ಬ್ರೇಕಿಂಗ್ ಸಿಸ್ಟಮ್)ನೊಂದಿಗೆ ಜೋಡಿಸಲಾಗಿದೆ. ಸಸ್ಪೆನ್ಷನ್ ಸೆಟಪ್ ಹೇಳುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಕಾಯಿಲ್ ಸ್ಪ್ರಿಂಗ್‌ ಸೆಟಪ್ ಒಳಗೊಂಡಿದೆ.

ಈ ಬಗ್ಗೆ ಮಾತನಾಡಿರುವ ಲೆಕ್ಟ್ರಿಕ್ಸ್ ಇವಿಯ ಎಂಡಿ, ಸಿಇಒ ಕೆ.ವಿಜಯ ಕುಮಾರ್ ಅವರು, 'ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಖುಷಿ ತಂದಿದೆ. ಭಾರತವು ಉದಯೋನ್ಮುಖ ಬಾಹ್ಯಾಕಾಶ ಯುಗದತ್ತ ತೆರಳುತ್ತಿರುವುದು' ಖುಷಿ ನೀಡಿದೆ ಎಂದು ಹೇಳಿದ್ದಾರೆ. ಕಳೆದ ತಿಂಗಳು, ಕಂಪನಿಯು, ಎಲ್‌ಎಕ್ಸ್‌ಎಸ್ 2.0 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಾಂಚ್ ಮಾಡಿತ್ತು.

ಈ ಸ್ಕೂಟರ್, 36 ಸೇಫ್ಟಿ ಫೀಚರ್ಸ್, 24 ಸ್ಮಾರ್ಟ್ ಫೀಚರ್ಸ್ ಮತ್ತು 14 ಕಂಫರ್ಟ್ ಫೀಚರ್ಸ್ ಹೊಂದಿದೆ. ಇದರೊಟ್ಟಿಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಅವುಗಳೆಂದರೆ, ನ್ಯಾವಿಗೇಷನ್ ಸಿಸ್ಟಮ್, ವಾಯ್ಸ್ ಅಸಿಸ್ಟಂಟ್, ಒಟಿಎ ಅಪ್ಡೇಟ್ಸ್, ಆಟೋ ಇಂಡಿಕೇಟರ್ಸ್, ಸ್ಮಾರ್ಟ್ ಇಗ್ನಿಷನ್ ಪ್ರಮುಖವಾಗಿ ಸೇರಿವೆ.

ಈ ನೂತನ ಲೆಕ್ಟ್ರಿಕ್ಸ್ ಎಲ್‌ಎಕ್ಸ್‌ಎಸ್ 2.0 ಎಲೆಕ್ಟ್ರಿಕ್ ಸ್ಕೂಟರ್ 2.3 kW ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡುತ್ತದೆ. ಕಂಪನಿಯು ಈ ಸ್ಕೂಟರ್ ಅನ್ನು ದೇಶಾದ್ಯಂತ ನೂರಕ್ಕೂ ಹೆಚ್ಚು ನಗರಗಳಲ್ಲಿ ಮಾರಾಟ ಮಾಡಲಿದೆ. ಸದ್ಯ, ಚಂದ್ರಯಾನ -3 ಲ್ಯಾಂಡಿಂಗ್‌ ಯಶಸ್ವಿಯಾದ ಸವಿನೆನಪಿಗೆ ಎಲ್‌ಎಕ್ಸ್‌ಎಸ್ ಮೂನ್‌ಶೈನ್ ಲಿಮಿಟೆಡ್ ಎಡಿಷನ್ ಬಿಡುಗಡೆಗೊಳಿಸಿರುವುದು ಗ್ರಾಹಕರಿಗೆ ಖುಷಿ ತರಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, August 24, 2023, 18:13 [IST]
English summary
Lectrix launches lxs moonshine limited edition chandrayaan 3 success
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+