Lectrix: ಗೇಮ್ ಚೇಂಜಿಂಗ್ ವೈಶಿಷ್ಟ್ಯಗಳೊಂದಿಗೆ 'ಲೆಕ್ಟ್ರಿಕ್ಸ್ LXS G2.0' ಇ-ಸ್ಕೂಟರ್ ಬಿಡುಗಡೆ.. ವಿಶೇಷತೆಗಳೇನು?
ದೇಶದಲ್ಲಿ ದಿನದಿಂದ ದಿನಕ್ಕೆ ಜನರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ. ಬಹುತೇಕ ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರೊಂದಿಗೆ ನಿರ್ವಹಣಾ ವೆಚ್ಚವು ಕಡಿಮೆಯಿರುವುದರಿಂದ ಹಲವಾರು ದಿನನಿತ್ಯದ ಬಳಕೆಗೆ ಇವುಗಳನ್ನೇ ಆಯ್ದುಕೊಳ್ಳುತ್ತಾರೆ. ಸದ್ಯ, ಲೆಕ್ಟ್ರಿಕ್ಸ್ ಇವಿ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ.
ಭಾರತದ ಮಾರುಕಟ್ಟೆಯಲ್ಲಿ ಲೆಕ್ಟ್ರಿಕ್ಸ್ ಇವಿ (Lectrix EV), LXS G2.0 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಗೊಳಿಸಿದೆ. ಇದರೊಟ್ಟಿಗೆ LXS G3.0 ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕಂಪನಿಯು ಪರಿಚಯಿಸಿದ್ದು, ಅದರ ಬೆಲೆಯನ್ನು ಮುಂಬರುವ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಲೆಕ್ಟ್ರಿಕ್ಸ್ LXS G 2.0 ಹಾಗೂ LXS G 3.0 ಎಲೆಕ್ಟ್ರಿಕ್ ಸ್ಕೂಟರ್‌ಗಳು ದೇಶದಾದ್ಯಂತ 100 ಕ್ಕೂ ಹೆಚ್ಚು ನಗರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಅತ್ಯಂತ ಕಡಿಮೆ ದರಕ್ಕೆ ಬುಕ್ಕಿಂಗ್ ಕೂಡ ಆರಂಭವಾಗಿದೆ. ಪರಿಚಯಾತ್ಮಕ ಬೆಲೆಯು ಸೀಮಿತ ಅವಧಿಗೆ ಮಾತ್ರ ಇರಲಿದ್ದು, ಆ ಬಳಿಕ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಈ ಕುರಿತು ಲೆಕ್ಟ್ರಿಕ್ಸ್ ಇವಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ನೂತನ ಸ್ಕೂಟರ್ ವಿತರಣೆ ಆಗಸ್ಟ್ 16 ರೊಳಗೆ ಶುರುವಾಗಲಿದೆ. ಮುಖ್ಯವಾಗಿ, ಲೆಕ್ಟ್ರಿಕ್ಸ್ ಕಂಪನಿಯು ಇವೆರೆಡು ಸ್ಕೂಟರ್‌ಗಳಲ್ಲಿ ಭರ್ಜರಿ ವೈಶಿಷ್ಟ್ಯವನ್ನು ನೀಡಿದ್ದು, 93 ಅತ್ಯಾಧುನಿಕ ಫೀಚರ್ಸ್ ಒಳಗೊಂಡಿವೆ. ಅದರಲ್ಲಿ 36 ಸುರಕ್ಷತಾ ವೈಶಿಷ್ಟ್ಯಗಳು (safety features), 24 ಸ್ಮಾರ್ಟ್ ಫೀಚರ್ಸ್ (smart features) ಹಾಗೂ 14 ಕಂಫರ್ಟ್ ಫೀಚರ್ಸ್ (comfort features) ಸೇರಿವೆ.
ಇವರೆಡು ಸ್ಕೂಟರ್‌ಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ನೋಡುವುದಾದರೆ, ನ್ಯಾವಿಗೇಷನ್ ಸಿಸ್ಟಮ್, ವಾಯ್ಸ್ ಅಸಿಸ್ಟಂಟ್, ಓವರ್ ದಿ ಏರ್ (OTA) ಉಪ್ಡೇಟ್ಸ್, ಆಟೋ ಇಂಡಿಕೇಟರ್ಸ್, ಸ್ಮಾರ್ಟ್ ಇಗ್ನಿಷನ್, ಹೆಲ್ಮೆಟ್ ಅಲರ್ಟ್, ರೈಡ್ ಸ್ಟ್ಯಾಟಿಸ್ಟಿಕ್ಸ್, ಮೊಬೈಲ್ ಆಪ್ ಮೂಲಕ ರಿಮೋಟ್ ಸೀಟ್ ಆಪರೇಟಿಂಗ್, ಆಂಟಿ ಥೆಫ್ಟ್ ಮೆಕ್ಯಾನಿಸಂ, ಫೈಂಡ್ ಮೈ ವೆಹಿಕಲ್, ಎಮರ್ಜೆನ್ಸಿ SOS ಬಟನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ.
ಲೆಕ್ಟ್ರಿಕ್ಸ್ ಕಂಪನಿಯು ಇವೆರೆಡು ಸ್ಕೂಟರ್‌ಗಳನ್ನು ಸರಿ ಸುಮಾರು 2.6 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಓಡಿಸಿ, ಚಾಸಿಸ್ ಬಾಳಿಕೆಯನ್ನು ಪರೀಕ್ಷೆಗೆ ಒಳಪಡಿಸಿ, ಅದರಲ್ಲಿ ಯಶಸ್ವಿಯಾಗಿದೆ. LXS G 3.0 ಹಾಗೂ LXS G 2.0 ಎಲೆಕ್ಟ್ರಿಕ್ ಸ್ಕೂಟರ್‌ಗಳು ಕ್ರಮವಾಗಿ 3 kW ಹಾಗೂ 2.3 kW ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡುವ ಸಾಮರ್ಥ್ಯ ಹೊಂದಿವೆ.
ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಹೇಳಿಕೆ ಬಿಡುಗಡೆಗೊಳಿಸಿರುವ ಲೆಕ್ಟ್ರಿಕ್ಸ್ ಕಂಪನಿಯು, '20 ರಿಂದ 35 ವರ್ಷದ (Gen Z) ಯುವ ಜನರನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವೆರೆಡು, 93 ಗೇಮ್ ಚೇಂಜಿಂಗ್ ವೈಶಿಷ್ಟ್ಯಗಳನ್ನು ಹೊಂದಿವೆ. ಸ್ಮಾರ್ಟ್ ನ್ಯಾವಿಗೇಷನ್, ಫೈಂಡ್ ಮೈ ವೆಹಿಕಲ್ ಸೇರಿದಂತೆ ವಿವಿಧ ಫೀಚರ್ಸ್ ಪಡೆದಿವೆ' ಎಂದು ತಿಳಿಸಿದೆ.
ಇನ್ನು, ಲೆಕ್ಟ್ರಿಕ್ಸ್ ಇವಿ ತೀರಾ ಕಡಿಮೆ ಬೆಲೆಯಲ್ಲಿ LXS G 2.0 ಹಾಗೂ LXS G 3.0 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದ್ದು, ಇವೆರೆಡು ಭರಪೂರ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಇದೇ ಈ ಸ್ಕೂಟರ್‌ಗಳಿಗೆ ಪ್ಲಸ್ ಆಗಿದ್ದು, ದರವು ಅಗ್ಗವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








