Hero Destini: ಅತ್ಯಂತ ಕಡಿಮೆ ಬೆಲೆಗೆ ಹೀರೋ ಡೆಸ್ಟಿನಿ 125 ಪ್ರೈಮ್ ಸ್ಕೂಟರ್ ಬಿಡುಗಡೆ, ಆಕರ್ಷಕ ವಿಶೇಷತೆಗಳಿವೆ!
ಭಾರತದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಡೆಸ್ಟಿನಿ 125 (Destini 125 Prime) ಸ್ಕೂಟರ್‌ನ ಪ್ರೈಮ್ ರೂಪಾಂತರವನ್ನು ಬಿಡುಗಡೆಗೊಳಿಸಿದೆ. ಸದ್ಯ, ಖರೀದಿಗೆ ಲಭ್ಯವಿರುವ ಟಾಪ್ ಎಂಡ್ ಮಾದರಿ ಡೆಸ್ಟಿನಿ 125 Xtecಗೆ ಹೋಲಿಸಿದರೆ ಕಡಿಮೆ ಬೆಲೆಯನ್ನು ಹೊಂದಿದೆ.
ನೂತನ ಹೀರೋ ಡೆಸ್ಟಿನಿ 125 ಪ್ರೈಮ್ ರೂ.71,499 ಎಕ್ಸ್ ಶೋರೂಂ ದರದಲ್ಲಿ ದೊರೆಯಲಿದೆ. ಡೆಸ್ಟಿನಿ 125 Xtec ಸ್ಕೂಟರ್‌ನ ಎಲ್ಎಕ್ಸ್, ಹಾಗೂ ವಿಎಕ್ಸ್ ರೂಪಾಂತರಕ್ಕೆ ಹೋಲಿಸಿದರೆ, ಹೊಸ ಸ್ಕೂಟರ್ ರೂ.14,239 ಕಡಿಮೆ ಬೆಲೆಯನ್ನು ಹೊಂದಿದೆ. ಡೆಸ್ಟಿನಿ 125 Xtecಗೆ ಹೋಲಿಸಿದರೆ ಡೆಸ್ಟಿನಿ 125 ಪ್ರೈಮ್ ನೋಡಲು ಸಿಂಪಲ್ ಆಗಿದ್ದು, ಹೆಚ್ಚು ಆಕರ್ಷಕವಾಗಿದೆ.

ಹೊಸ ಹೀರೋ ಡೆಸ್ಟಿನಿ 125 ಪ್ರೈಮ್ ಸ್ಕೂಟರ್ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ದೊಡ್ಡದಾದ ಹೆಡ್‌ಲ್ಯಾಂಪ್, ಬಾಡಿ ಕಲರ್ ಮಿರರ್, ಸಿಂಗಲ್ ಪೀಸ್ ಗ್ರಾಬ್ ರೈಲ್ ಮತ್ತು ಸಿಂಗಲ್ ಟೋನ್ ಸೀಟ್ ಅನ್ನು ಪಡೆದಿದೆ. ಟಾಪ್ ಎಂಡ್ ಮಾದರಿ ಡೆಸ್ಟಿನಿ 125 Xtec ಸ್ಕೂಟರ್ ಕ್ರೋಮ್ ಫಿನಿಶ್ಡ್ ಮಿರರ್, ಬ್ಯಾಕ್ ರೆಸ್ಟ್ ಮತ್ತು ಡ್ಯುಯಲ್ ಟೋನ್ ಸೀಟ್‌ನ್ನು ಒಳಗೊಂಡಿದೆ.
ನೂತನ ಹೀರೋ ಡೆಸ್ಟಿನಿ 125 ಪ್ರೈಮ್ ಸ್ಕೂಟರ್ ಗ್ರಾಹಕರನ್ನು ಸೆಳೆಯುವ ಅತ್ಯಾಧುನಿಕ ಫೀಚರ್ಸ್ ಪಡೆದಿದೆ. ಆಟೋ ಸ್ಟಾರ್ಟ್/ಸ್ಟಾಪ್ ಹಾಗೂ ಸೆಮಿ ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದೆ. ಆದರೆ, ಡೆಸ್ಟಿನಿ 125 Xtec ಸ್ಕೂಟರ್‌ಗೆ ಹೋಲಿಕೆ ಮಾಡಿದರೆ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಫ್ರಂಟ್ ಮೊಬೈಲ್ ಚಾರ್ಜಿಂಗ್ ಪೋರ್ಟ್ ಅನ್ನು ಪಡೆದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಹೀರೋ ಡೆಸ್ಟಿನಿ 125 ಪ್ರೈಮ್ ಸ್ಕೂಟರ್, ಅಲಾಯ್ ವೀಲ್ಸ್ ಬದಲಿಗೆ ಸ್ಟೀಲ್ ವೀಲ್ಸ್ ಒಳಗೊಂಡಿದೆ. 10 ಇಂಚಿನ ರಿಮ್ಸ್ ಅನ್ನು ಪಡೆದಿದೆ. ಇದರ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಮೊನೊಶಾಕ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಮಾತನಾಡುವುದಾದರೆ, ಎರಡು ತುದಿಯಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಡೆಸ್ಟಿನಿ 125 Xtec ನಂತೆಯೇ ಪ್ರೈಮ್ ಕೂಡ ಅದೇ ಎಂಜಿನ್ ಅನ್ನು ಹೊಂದಿದೆ. ಇದರ 124.6 ಸಿಸಿ, ಏರ್ ಕೊಲ್ಡ್ ಎಂಜಿನ್, 9 bhp ಗರಿಷ್ಠ ಪವರ್ ಹಾಗೂ 10.36 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. CVT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಒಟ್ಟು 115 ಕೆಜಿ ತೂಕವಿದ್ದು, 5 ಲೀಟರ್ ಸಾಮರ್ಥ್ಯದ ಪ್ಯೂಯೆಲ್ ಟ್ಯಾಂಕ್ ಹೊಂದಿದೆ.
ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಡೆಸ್ಟಿನಿ 125 Xtec ಸ್ಕೂಟರ್, ಬೆಂಗಳೂರಿನಲ್ಲಿ ರೂ.1,00,011 ಆನ್-ರೋಡ್ ಬೆಲೆಯಲ್ಲಿ ದೊರೆಯುತ್ತದೆ. 124.6 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 45 kmpl ಮೈಲೇಜ್ ನೀಡುತ್ತದೆ. ಡೆಸ್ಟಿನಿ 125 ಸ್ಕೂಟರ್‌ಗೆ ದೇಶದಲ್ಲಿ ಟಿವಿಎಸ್ ಜುಪಿಟರ್ 125, ಯಮಹಾ ಫ್ಯಾಸಿನೊ 125 ಹಾಗೂ ಸುಜುಕಿ ಆಕ್ಸೆಸ್ 125 ಸ್ಕೂಟರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಈಗಾಗಲೇ, ಹೀರೋ ದೇಶದಲ್ಲಿ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದು, ಡೆಸ್ಟಿನಿ 125 ಪ್ರೈಮ್ ಸ್ಕೂಟರ್ ಅನ್ನು ಅಗ್ಗದ ಬೆಲೆಗೆ ಬಿಡುಗಡೆಗೊಳಿಸಿದೆ. ದರಕ್ಕೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಕೂಟರ್‌ನ್ನು ಗ್ರಾಹಕರು ಖರೀದಿಸಬಹುದು. ಇದರಿಂದ ಒಟ್ಟು ಮಾರಾಟ ಪ್ರಮಾಣ ದ್ವಿಗುಣಗೊಂಡು ಕಂಪನಿಗೆ ಹೆಚ್ಚಿನ ಲಾಭ ತಂದುಕೊಂಡಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








