Matter Aera: ಭಾರತದ ಮೊದಲ ಇವಿ ಗೇರ್ ಬೈಕ್‌ಗೆ ಫ್ಲಿಪ್ ಕಾರ್ಟ್‌ನಲ್ಲಿ ಪ್ರಿ ಬುಕಿಂಗ್... ಇಲ್ಲಿದೆ ಲಿಂಕ್

ಭಾರತದ ಮೊದಲ ಎಲೆಕ್ಟ್ರಿಕ್ ಗೇರ್ ಬೈಕ್ ತಯಾರಕ ಕಂಪನಿಯಾದ ಮ್ಯಾಟರ್ ಇವಿ, ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ. ಈ ಮೂಲಕ ಗ್ರಾಹಕರಿಗೆ MATTER AERA ಮೋಟಾರ್‌ ಸೈಕಲ್ ಅನ್ನು ಮುಂಗಡ ಬುಕಿಂಗ್ ಮಾಡಲು ಮತ್ತು ಖರೀದಿಸಲು ಅನುಕೂಲಕರ ಮಾರ್ಗವನ್ನು ಒದಗಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಆನ್‌ಲೈನ್, ಮೊಬೈಲ್ ಮತ್ತು ಭೌತಿಕ ಡೀಲರ್‌ಶಿಪ್‌ಗಳು ಸೇರಿದಂತೆ ಸ್ಥಿರ ಮತ್ತು ಸಮಗ್ರ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಫ್ಲಿಪ್ ಕಾರ್ಟ್‌ನ ವ್ಯಾಪಕ ವ್ಯಾಪ್ತಿಯು, ಗ್ರಾಹಕರ ಒಳನೋಟಗಳು ಮತ್ತು ಆನ್‌ಲೈನ್ ಮಾರುಕಟ್ಟೆ ಅನುಭವದ ಮೂಲಕ, ಮ್ಯಾಟರ್ ತನ್ನ ಗ್ರಾಹಕರಿಗೆ MATTER AERA ಎಲೆಕ್ಟ್ರಿಕ್ ಗೇರ್ ಬೈಕ್‌ನ ಹೊಸ ಖರೀದಿ ಅನುಭವವನ್ನು ನೀಡಲು ಸಜ್ಜಾಗಿದೆ. ಈ ಹೊಸ ಅನುಭವವು ಬುಕಿಂಗ್ ಅನ್ನು ಸರಳ ಮತ್ತು ತ್ವರಿತಗೊಳಿಸುತ್ತದೆ ಎಂದು ಕಂಪನಿ ತಿಳಿಸಿದೆ.

Matter collaborates with Flipkart for the pre booking for its Matter AERA Bike

ಮ್ಯಾಟರ್ ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ಆದ ಮ್ಯಾಟರ್ ಏರಾವನ್ನು ಪರಿಚಯ ಮಾಡಿದೆ. ಮ್ಯಾಟರ್ ನ ಉತ್ಪನ್ನಗಳ ಎಲ್ಲಾ ಘಟಕಗಳನ್ನು ಅದರ ತಂಡವು ಆಂತರಿಕವಾಗಿ ವಿನ್ಯಾಸಗೊಳಿಸಿ, ಭಾರತದಲ್ಲಿ ತಯಾರಿಸಿದೆ ಎಂಬುದು ವಿಶೇಷ. ಗ್ರಾಹಕರು ಫ್ಲಿಪ್ ಕಾರ್ಟ್ ನ MATTER ಸ್ಟೋರ್‌ ನಲ್ಲಿ (https://flipkart.com/matter-store (App Store) MATTER AERA ಮೋಟಾರ್‌ ಸೈಕಲ್‌ ಅನ್ನು ಮುಂಗಡವಾಗಿ ಬುಕ್ ಮಾಡಬಹುದು.

ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕ್ 4000, 5000, 5000+ ಮತ್ತು 6000+ ಎಂಬ ನಾಲ್ಕು ಟ್ರಿಮ್ ಆಯ್ಕೆಗಳನ್ನು ಹೊಂದಿದೆ. ಹೊಸ ಮ್ಯಾಟರ್ Aera ಎಲೆಕ್ಟ್ರಿಕ್ ಬೈಕ್ ಆರಂಭಿಕ ಬೆಲೆಯು ರೂ.1.44 ಲಕ್ಷವಾಗಿದೆ. ಮ್ಯಾಟರ್ Aera ಎಲೆಕ್ಟ್ರಿಕ್ ಬೈಕಿನ 6000+ ಹೊರತುಪಡಿಸಿ ಎಲ್ಲಾ ರೂಪಾಂತರಗಳು ಸಿಂಗಲ್ ಚಾರ್ಜ್‌ನಲ್ಲಿ 125 ಕಿ.ಮೀ ವರೆಗೆ ರೇಂಜ್ ಅನ್ನು ನೀಡುತ್ತವೆ. 6000+ ರೂಪಾಂತರವು 150 ಕಿ.ಮೀ ವರೆಗೆ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಈ ಹೊಸ ಎಲೆಕ್ಟ್ರಿಕ್ ಬೈಕಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಇಂಧನ ಚಾಲಿತ ಮೋಟಾರ್‌ಸೈಕಲ್‌ಗಳಂತೆ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬಂದಿದೆ. ಇದು ಭಾರತದ ಮೊದಲ ಮ್ಯಾನುವಲ್ ಗೇರ್ ಬಾಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದೆ. ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಇದು ಮನ ಸೆಳೆಯುವ ವಿನ್ಯಾಸ ಮತ್ತು 4G ಕನೆಕ್ಟಿವಿಟಿಯೊಂದಿಗೆ 7.0-ಇಂಚಿನ ಸಂಪೂರ್ಣ-ಡಿಜಿಟಲ್ LCD ನಂತಹ ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಬರುತ್ತದೆ.

ಜೊತೆಗೆ ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ರಿಮೋಟ್ ಲಾಕ್/ ಅನ್‌ಲಾಕ್, ಜಿಯೋ ಫೆನ್ಸಿಂಗ್ ಮತ್ತು ಲೈವ್ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇದರೊಂದಿಗೆ ವಾಹನ ಆರೋಗ್ಯ ಮೇಲ್ವಿಚಾರಣೆ ಮತ್ತು ವಿವರವಾದ ಸವಾರಿ ಅಂಕಿಅಂಶಗಳ ವೈಶಿಷ್ಟ್ಯಗಳಂತಹ ಕಾರ್ಯಗಳೊಂದಿಗಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಕೀ ಫೋಬ್ ಮತ್ತು ಕೀಲೆಸ್ ಎಂಟ್ರಿ ಸಿಸ್ಟಂನೊಂದಿಗೆ ಬರುತ್ತದೆ.

ಮ್ಯಾಟರ್‌ನ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಮೊಹಲ್ ಲಾಲ್‌ಭಾಯ್ ಮಾತನಾಡಿ, ಸ್ಮಾರ್ಟ್‌ ಫೋನ್‌ಗಳು ಮತ್ತು ಇಂಟರ್ನೆಟ್ ಯುಗದಲ್ಲಿ, ಫ್ಲಿಪ್‌ಕಾರ್ಟ್‌ನೊಂದಿಗಿನ ನಮ್ಮ ಸಹಯೋಗ ಹೊಸ ಯುಗದ ಚಲನಶೀಲತೆ ಮತ್ತು ಸುಸ್ಥಿರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವುದರ ಜೊತೆಗೆ ದೇಶದ ಪ್ರತಿ ಮೂಲೆಯ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಲಿದೆ. ಹಾಗೆಯೇ ಹೊಸ ಪೀಳಿಗೆಗೆ ನಾಂದಿ ಹಾಡಲಿದೆ ಎಂದು ಮ್ಯಾಟರ್‌ನ ಸಿಇಒ ಮೊಹಲ್ ಲಾಲ್‌ಭಾಯ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ ಫಾರ್ಮ್‌ಗಳು ಮತ್ತು ಶಕ್ತಿ ಸಂಗ್ರಹ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು "ಇನ್ನೋವೇಟ್ ಇನ್ ಇಂಡಿಯಾ" ವಿಧಾನದೊಂದಿಗೆ ಮ್ಯಾಟರ್ ಇವಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡಿದೆ. ಒಂದು ಸ್ವದೇಶಿ ಮಾರುಕಟ್ಟೆಯಾಗಿ, ಫ್ಲಿಪ್ ಕಾರ್ಟ್ ನಾವೀನ್ಯತೆಗೆ ಉತ್ತೇಜನ ನೀಡುವಲ್ಲಿ ಮತ್ತು ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಫ್ಲಿಪ್ ಕಾರ್ಟ್‌ನ ಆಟೊಮೊಬೈಲ್ಸ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಬಿಎಸ್ ಹೇಳಿದರು.

More from DriveSpark

Article Published On: Thursday, April 27, 2023, 16:43 [IST]
English summary
Matter aera flipkart pre booking details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+