mXmoto: 85,000 ರೂಪಾಯಿಗೆ ಎಂಎಕ್ಸ್‌ವಿ ಇಕೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳಿವೆ!
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದ್ದು, ವಿವಿಧ ಕಂಪನಿಗಳು ಹಲವು ಇ-ಬೈಕ್ ಹಾಗೂ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ, ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಎಂಎಕ್ಸ್‌ಮೊಟೊ (mXmoto) ಎಂಎಕ್ಸ್‌ವಿ ಇಕೋ (mXv Eco) ಇ-ಸ್ಕೂಟರ್ ಲಾಂಚ್ ಮಾಡಿದೆ.
ನೂತನ ಎಂಎಕ್ಸ್‌ವಿ ಇಕೋ ಎಲೆಕ್ಟ್ರಿಕ್ ಸ್ಕೂಟರ್ ಎರಡು ರೂಪಾಂತರ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಬೇಸ್-ಸ್ಪೆಕ್ ಟ್ರಿಮ್ ಹಾಗೂ ಎಕ್ಸ್ಟೆಂಡೆಡ್ ರೇಂಜ್ ಟ್ರಿಮ್. ಇವು ಕ್ರಮವಾಗಿ ರೂ.85,000 ಮತ್ತು ರೂ.95,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ರೇಂಜ್, ಟಾಪ್ ಸ್ವೀಡ್ ವಿಷಯವಾಗಿ ಹೇಳುವುದಾದರೆ, ಬೇಸ್-ಸ್ಪೆಕ್ ಟ್ರಿಮ್ ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಲೋಮೀಟರ್ ಕ್ರಮಿಸುತ್ತದೆ. ಜೊತೆಗೆ 70 kmph ಟಾಪ್ ಸ್ವೀಡ್ ಹೊಂದಿದೆ.

ಎಕ್ಸ್ಟೆಂಡೆಡ್ ರೇಂಜ್ ಟ್ರಿಮ್ ಫುಲ್ ಚಾರ್ಜ್‌ನಲ್ಲಿ 120 ಕಿಲೋಮೀಟರ್ ರೇಂಜ್ ಕೊಡಲಿದ್ದು, 100 kmph ಟಾಪ್ ಸ್ವೀಡ್ ಪಡೆದಿದೆ. ರೆಟ್ರೋ ಶೈಲಿನ ವಿನ್ಯಾಸ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್, ಇಕೋ (Eco), ಕಂಪರ್ಟ್ (Comfort), ಸ್ಪೋರ್ಟ್ಸ್ (Sport) ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದೆ. ಜೆಟ್ ಬ್ಲಾಕ್, ರಾಯಲ್ ಬ್ಲೂ, ಗಾರ್ನೆಟ್ ರೆಡ್, ಸ್ಯಾಕ್ರಮೆಂಟೊ ಗ್ರೀನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಎಂಎಕ್ಸ್‌ವಿ ಇಕೋ ಎಲೆಕ್ಟ್ರಿಕ್ ಸ್ಕೂಟರ್, 3.2 kWh LiFePO4 ಬ್ಯಾಟರಿ ಪ್ಯಾಕ್ ಹೊಂದಿದೆ. 3,000 ವಾಲ್ಟ್ ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ ಕಾರ್ಯನಿವಹಿಸಲಿದ್ದು, 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಬ್ರೇಕಿಂಗ್ ವಿಷಯವಾಗಿ ಮಾತನಾಡುವುದಾದರೆ, ಫ್ರಂಟ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ರೇಕ್ ಅನ್ನು ಒಳಗೊಂಡಿದೆ.

ಈ ಎಂಎಕ್ಸ್‌ವಿ ಇಕೋ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರನ್ನು ಆಕರ್ಷಿಸುವ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಖ್ಯವಾಗಿ 6 - ಇಂಚಿನ TFT ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆನ್-ಬೋರ್ಡ್ ನ್ಯಾವಿಗೇಶನ್, ಕಾಲಿಂಗ್ ಮತ್ತು ಬ್ಲೂಟೂತ್ ಸಿಸ್ಟಮ್ ಅನ್ನು ಪಡೆದಿದೆ. ಇದರೊಟ್ಟಿಗೆ ಎಲ್ಇಡಿ ಲೈಟಿಂಗ್, ಕ್ರೂಸ್ ಕಂಟ್ರೋಲ್, ರಿವರ್ಸ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ವಿವಿಧ ಫೀಚರ್ಸ್ ಒಳಗೊಂಡಿದೆ.
ಇತ್ತೀಚೆಗೆ, ಎಂಎಕ್ಸ್‌ಮೊಟೊ ಕಂಪನಿಯು ಎಂಎಕ್ಸ್9 ಹೆಸರಿನ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿತ್ತು. ಇದು, ರೂ.1.46 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಈ ಬೈಕ್, ಸಂಪೂರ್ಣ ಚಾರ್ಜ್‌ನಲ್ಲಿ 110 ಕಿಲೋಮೀಟರ್ ನಿಂದ 140 ಕಿಲೋಮೀಟರ್ ರೇಂಜ್ ನೀಡಲಿದ್ದು, 80 kmph ಟಾಪ್ ಸ್ವೀಡ್ ಒಳಗೊಂಡಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ 0 - 90% ಚಾರ್ಜ್ ಆಗಲು 3 ಗಂಟೆ ಬೇಕಾಗುತ್ತದೆ.

ಎಂಎಕ್ಸ್9 ಬೈಕಿನಲ್ಲಿ 4,000 ವಾಲ್ಟ್ BLDC ಹಬ್ ಮೋಟಾರ್ ಬಳಕೆ ಮಾಲಾಗಿದ್ದು, 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. USB ಪೋರ್ಟ್, LED ಟರ್ನ್ ಇಂಡಿಕೇಟರ್ಸ್, TFT ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿ, ಕ್ರೂಸ್ ಕಂಟ್ರೋಲ್, ಪಾರ್ಕ್ ಅಸಿಸ್ಟ್, ಹಿಲ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.
ಇನ್ನು, ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ ಎಂಎಕ್ಸ್‌ಮೊಟೊ ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದ ಇ-ಬೈಕ್ ಹಾಗೂ ಇ-ಸ್ಕೂಟರ್ ಬಿಡುಗಡೆಗೊಳಿಸುತ್ತಿದೆ. ಇದು, ಕಂಪನಿಗೆ ಹೊಸ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಲಿದ್ದು, ಹಬ್ಬದ ಋತುವಿನಲ್ಲಿ ಇವುಗಳಿಗೆ ಮತ್ತಷ್ಟು ಬೇಡಿಕೆ ಬರಬಹುದು. ಜೊತೆಗೆ ದೊಡ್ಡ ಕಂಪನಿಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








