ಮುಂಬರುವ Royal Enfield Bullet 350 ಬೈಕ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?

ರಾಯಲ್‌ ಎನ್‌ಫಿಲ್ಡ್ ಕಂಪನಿಯು ತನ್ನ 350 ಸಿಸಿ ವಿಭಾಗದಲ್ಲಿನ ಒಂದೊಂದೆ ಮಾದರಿಯನ್ನು ನವೀಕರಿಸಲು ಹೊರಟಿದೆ. ಸದ್ಯ ಬುಲೆಟ್ 350 ಮೋಟಾರ್‌ಸೈಕಲ್ ಹೊಸ ಆವೃತ್ತಿಯನ್ನು ತರಲು ಸಜ್ಜಾಗಿರುವ ಕುರಿತು ಮಾಹಿತಿ ತಿಳಿದುಬಂದಿದೆ. ಮೂಲಗಳ ಪ್ರಕಾರ ರಾಯಲ್ ಎನ್‌ಫೀಲ್ಡ್ ಆಗಸ್ಟ್ 30 ರಂದು ಭಾರತದಲ್ಲಿ ಹೊಸ ಬುಲೆಟ್ 350 ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದೆ.

ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕಂಪನಿಯ ಜೆ-ಸಿರೀಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಪರಿಣಾಮವಾಗಿ ಮುಂಬರುವ ಬುಲೆಟ್ 350 ಈಗಿರುವ ಕ್ಲಾಸಿಕ್ 350 ಮೋಟಾರ್‌ಸೈಕಲ್‌ನಿಂದ ಡಬಲ್ ಕ್ರೇಡಲ್ ಫ್ರೇಮ್ ಮತ್ತು ಸ್ವಿಚ್‌ಗಿಯರ್‌ನೊಂದಿಗೆ ಬರುತ್ತದೆ. ಇದಲ್ಲದೇ ಇನ್ನೂ ಪ್ರಮುಖವಾಗಿ ಯಾವೆಲ್ಲಾ ಬದಲಾವಣೆಗಳ ನಿರೀಕ್ಷೆಯಿದೆ ಎಂಬುದನ್ನು ಇಲ್ಲಿ ನೋಡೋಣ.

new-2023-royal-enfield-bullet-350-expectations

ವಿನ್ಯಾಸ: ಮುಂಬರುವ ಹೊಸ 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಟೆಸ್ಟಿಂಗ್ ವೇಳೆ ತೆಗೆದ ಫೊಟೋಗಳು ಸೋರಿಕೆಯಾಗಿವೆ. ರಾಯಲ್ ಎನ್‌ಫೀಲ್ಡ್‌ ಎಂಜಿನಿಯರ್‌ಗಳು ಸಿಂಗಲ್-ಪೀಸ್ ಸ್ಟೆಪ್ಡ್ ಸೀಟ್, ರೆಟ್ರೊ-ಸ್ಟೈಲ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲೈಟ್‌ಗಳಂತಹ ಪ್ರಮುಖ ರೆಟ್ರೊ ವಿನ್ಯಾಸಗಳನ್ನು ಹಾಗೇ ಉಳಿಸಿಕೊಂಡಿರುವುದು ಸೋರಿಕೆಯ ಚಿತ್ರಗಳಲ್ಲಿ ಕಂಡುಬಂದಿದೆ.

ವೈಶಿಷ್ಟ್ಯಗಳು: ರಾಯಲ್ ಎನ್‌ಫೀಲ್ಡ್ ಬುಲೆಟ್ ಎಂಟ್ರಿ ಲೆವಲ್ 350 ಮೋಟಾರ್‌ಸೈಕಲ್ ಆಗಿರುವುದರಿಂದ, ಕ್ಲಾಸಿಕ್ 350 ಗಿಂತ ಹೆಚ್ಚು ಕೈಗೆಟುಕುವ ಮೋಟಾರ್‌ಸೈಕಲ್ ಆಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 'ಟ್ರಿಪ್ಪರ್' ಮಾಡ್ಯೂಲ್ ಅಥವಾ ಎಲ್ಇಡಿ ಲೈಟಿಂಗ್ ಅಂಶಗಳಂತಹ ವೈಶಿಷ್ಟ್ಯಗಳ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದ್ದು, ಕೆಲ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿರಬಹುದಾಗಿದೆ.

new-2023-royal-enfield-bullet-350-expectations

ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಎಬಿಎಸ್ ಘಟಕ, ಮುಂಭಾಗದ ಡಿಸ್ಕ್ ಬ್ರೇಕ್‌ಗಳು, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಗ್ಯಾಸ್-ಚಾರ್ಜ್ಡ್ ರಿಯರ್ ಸಸ್ಪೆನ್ಷನ್ ಮತ್ತು ಮೂಲ ಅನಾಲಾಗ್ ಪಾರ್ಟ್ ಜೊತೆಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಹೆಚ್ಚು ಅಗತ್ಯ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಪವರ್‌ಟ್ರೇನ್: ಪವರ್‌ಟ್ರೇನ್ ವಿಷಯಕ್ಕೆ ಬಂದರೆ, ಮುಂಬರುವ 2023 ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಅದೇ 349cc, ಸಿಂಗಲ್-ಸಿಲಿಂಡರ್, ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಜೆ-ಸಿರೀಸ್ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಾದ ಕ್ಲಾಸಿಕ್ 350, ಮೀಟಿಯೊರ್ 350 ಮತ್ತು ಹಂಟರ್‌ 350ಗಳಿಗೆ ಪವರ್ ನೀಡುತ್ತದೆ.

new-2023-royal-enfield-bullet-350-expectations

ಈ ಎಂಜಿನ್ 20.2bhp ಪವರ್ ಮತ್ತು 27Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಈ ಎಂಜಿನ್ ಇತರ ರಾಯಲ್ ಎನ್‌ಫೀಲ್ಡ್ ಜೆ-ಸಿರೀಸ್ ಮೋಟಾರ್‌ಸೈಕಲ್‌ಗಳಂತೆ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಮುಂಬರುವ ಬುಲೆಟ್ ಮೋಟಾರ್‌ಸೈಕಲ್‌ಗಾಗಿ ಕಂಪನಿಯು ಗೇರ್ ಅನುಪಾತಗಳನ್ನು ಟ್ಯೂನ್ ಮಾಡಿದೆಯೇ ಎಂಬುದು ಖಚಿತವಿಲ್ಲ.

ನಿಮಗೆ ಹೊಸ ಬೈಕ್‌ ಮೇಲೆ ಏನೆಲ್ಲಾ ನಿರೀಕ್ಷೆಗಳಿವೆ ಕಮೆಂಟ್‌ನಲ್ಲಿ ತಿಳಿಸಿ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

More from DriveSpark

Article Published On: Monday, July 24, 2023, 16:44 [IST]
English summary
New 2023 royal enfield bullet 350 expectations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+