New Bajaj Pulsar 220F ಭಾರತದಲ್ಲಿ ಈಗ ನಾಲ್ಕು ಸ್ಪೋರ್ಟಿ ಬಣ್ಣಗಳಲ್ಲಿ ಲಭ್ಯ
ಬಜಾಜ್ ಪಲ್ಸರ್ ಈ ಹೆಸರಿಗೆ ಭಾರತದಲ್ಲಿ ಪರಿಚಯದ ಅಗತ್ಯವಿಲ್ಲ. ಕಂಪನಿಯು ಬರೋಬ್ಬರಿ 11 ವಿವಿಧ ವಿಭಾಗಗಳಲ್ಲಿ ಮೋಟಾರ್ ಸೈಕಲ್‌ಗಳನ್ನು ಉತ್ಪಾದನೆ ಮಾಡುತ್ತಿದೆ. ಕಂಪನಿಯು ಈ ಹಿಂದೆಯೂ ಕೆಲ ಮಾದರಿಗಳನ್ನು ಸ್ಥಗಿತಗೊಳಿಸಿ ಮತ್ತೆ ಮಾರುಕಟ್ಟೆಗೆ ತಂದ ಉದಾಹರಣೆಗಳು ಇವೆ. ಅದೇ ರೀತಿ ಹೊಸ 2023 ಪಲ್ಸರ್ 220F ಅನ್ನು ತರುವುದಾಗಿ ಈಗಾಗಲೇ ಘೋಷಿಸಿದೆ.
ಇದೀಗ ಈ ಮೋಟಾರ್ ಸೈಕಲ್ ಅನ್ನು ಯಾವೆಲ್ಲಾ ಬಣ್ಣಗಳಲ್ಲಿ ತರಲಿದೆ ಎಂಬುದನ್ನು ಈಗ ಬಹಿರಂಗಪಡಿಸಿದೆ. ಕಂಪನಿಯು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ತರಲು ಸಜ್ಜಾಗಿದೆ, ಅವುಗಳನ್ನು ನೋಡುವುದಾದರೆ ವೋಲ್ಕಾನಿಕ್ ರೆಡ್, ಪರ್ಲ್ ವೈಟ್, ಸ್ಪಾರ್ಕಲ್ ಬ್ಲಾಕ್ ಮತ್ತು ಸಫೈರ್ ಬ್ಲೂ ಬಣ್ಣಗಳ ಆಯ್ಕೆಗಳನ್ನು ಕಂಪನಿ ನೀಡುತ್ತಿದೆ. ಹಾಗೆಯೇ ಈ ಎಲ್ಲಾ ಬಣ್ಣಗಳಿಗೂ ಒಂದೇ ರೀತಿಯ ಗ್ರಾಫಿಕ್ಸ್ ನೀಡಲಿದ್ದು, ಹೆಚ್ಚು ಸ್ಪೋರ್ಟಿಯಾಗಿ ಕಾಣಲು ಅಲ್ಲಲ್ಲಿ ಕಾರ್ಬನ್ ಫೈಬರ್ ಅಂಶಗಳನ್ನು ಸೇರಿಸಿದೆ.

ವಿನ್ಯಾಸದ ವಿಷಯಕ್ಕೆ ಬಂದರೆ, New Bajaj pulsar 220F ಸೆಮಿ-ಫೇರಿಂಗ್ ವಿನ್ಯಾಸ, ಟ್ವಿನ್ DRL ಗಳೊಂದಿಗೆ ಟ್ವಿನ್-ಪಾಡ್ ಹೆಡ್‌ಲೈಟ್, ಎಂಜಿನ್ ಕೌಲ್, ಫೇರಿಂಗ್-ಮೌಂಟೆಡ್ ರಿಯರ್-ವ್ಯೂ ಮಿರರ್‌ಗಳು, ಮಸ್ಕುಲರ್ ಪೆಟ್ರೋಲ್ ಟ್ಯಾಂಕ್, ಕ್ಲಿಪ್ ಆನ್ ಹ್ಯಾಂಡಲ್‌ಬಾರ್, ಟು-ಪೀಸ್ ಪಿಲಿಯನ್ ಗ್ರಾಬ್ರೇಲ್, ಸ್ಪ್ಲಿಟ್ ಸೀಟ್, ಸೈಡ್-ಸ್ಲಂಗ್ ಎಕ್ಸಾಸ್ಟ್ ಮತ್ತು ಎರಡೂ ತುದಿಗಳಲ್ಲಿ 17-ಇಂಚಿನ ಅಲಾಯ್ ವೀಲ್‌ಗಳನ್ನು ನೋಡಬಹುದು. ಹಾಗೆಯೇ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ತುಸು ಪರಿಷ್ಕರಿಸಲಾಗಿದೆ.
ನವೀಕರಿಸಿದ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಈಗ ಫ್ಯೂಯಲ್ ಎಫಿಷಿಯನ್ಸಿ ಕುರಿತು ವಿವರಗಳನ್ನು ತೋರಿಸುತ್ತದೆ. ಹಾಗೆಯೇ 2023 ಬಜಾಜ್ ಪಲ್ಸರ್ 220F ಹೊಸ ಮಾನದಂಡಗಳಿಗೆ ಒಳಪಟ್ಟಿರುತ್ತದೆ. ಎಂಜಿನ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, 220F 220cc, ಸಿಂಗಲ್-ಸಿಲಿಂಡರ್, ಏರ್/ಆಯಿಲ್-ಕೂಲ್ಡ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ ಅನ್ನು 20.11bhp ಪವರ್ ಮತ್ತು 18.55 ಟಾರ್ಕ್ ಅನ್ನು ನೀಡಲು ಟ್ಯೂನ್ ಮಾಡಲಾಗಿದೆ. ಹಾಗೆಯೇ ಎಂಜಿನ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ.

ಪಲ್ಸರ್ NS200 ಮತ್ತು NS160 ನವೀಕರಣ:
ಬಜಾಜ್‌ನಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಪಲ್ಸರ್ ಶ್ರೇಣಿಯ ಎರಡು ಮಾದರಿಗಳಾದ NS 160 ಮತ್ತು NS 200 ಮಾದರಿಗಳಿಗೆ ಕಂಪನಿಯು ಇತ್ತೀಚೆಗೆ ಹೊಸ ನವೀಕರಣಗನ್ನು ನೀಡಿದೆ. USD ಫೋರ್ಕ್‌ಗಳೊಂದಿಗೆ ಪಲ್ಸರ್ NS 160 ಮತ್ತು NS 200 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ನವೀಕರಣವು ಈಗಾಗಲೇ ಇರುವ ಮಸ್ಕುಲರ್ NS200 ಮತ್ತು NS160 ಗೆ ಇನ್ನೂ ಹೆಚ್ಚಿನ ಮಸ್ಕುಲರ್ ಲುಕ್ ಕೊಡುತ್ತದೆ.
NS 200 ಅನ್ನು ಲಿಕ್ವಿಡ್ ಕೂಲಿಂಗ್ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್‌ನಂತಹ ದುಬಾರಿ ವೈಶಿಷ್ಟ್ಯಗಳೊಂದಿಗೆ ಸ್ಪೋರ್ಟಿ ಯಂತ್ರವಾಗಿ ನಿರ್ಮಿಸಲಾಗಿದೆ. USD ಫೋರ್ಕ್‌ಗಳ ಹೊರತಾಗಿ, ಬಜಾಜ್ ಡ್ಯುಯಲ್-ಚಾನೆಲ್ ABS ಅನ್ನು ಕೂಡ ನೀಡುತ್ತಿದೆ. ಇದು ತುಂಬಾ ಅಗತ್ಯವಿರುವ ನವೀಕರಣವಾಗಿದ್ದು, ಬಜಾಜ್ ಈಗಾಗಲೇ ಪಲ್ಸರ್ RS200 ಜೊತೆಗೆ ಡ್ಯುಯಲ್ ABS ಅನ್ನು ನೀಡುತ್ತಿದೆ. ಈ ಹೊಸ ಸೇರ್ಪಡೆಗಳೊಂದಿಗೆ, ಪಲ್ಸರ್ NS200 TVS Apache RTR 200 4V ಗೆ ಅಸಾಧಾರಣ ಸ್ಪರ್ಧಿಯಾಗಲಿದೆ.
ಮುಂಬರಲಿರುವ NS 160 USD ಮತ್ತು ಪಲ್ಸರ್ NS 200 USD ಬೆಲೆಗಳು ಈಗ ಮಾರಾಟದಲ್ಲಿರುವ ಆವೃತ್ತಿಗಳಿಗಿಂತ ಸುಮಾರು 5-10 ಸಾವಿರ ರೂ. ಹೆಚ್ಚಾಗಿದೆ. ಪ್ರಸ್ತುತ ಮಾರಾಟದಲ್ಲಿರುವ ಪಲ್ಸರ್ ಕ್ರಮವಾಗಿ ರೂ. 1.25 ಲಕ್ಷ ಮತ್ತು ರೂ. 1.4 ಲಕ್ಷ (ಎಕ್ಸ್ ಶೋ ರೂಂ) ಬೆಲೆಗಳನ್ನು ಹೊಂದಿವೆ. ಇನ್ನು ಹೊಸ ಪಲ್ಸರ್ ಆವೃತ್ತಿಗಳು ಕ್ರಮವಾಗಿ ರೂ. 1.34 ಲಕ್ಷ ಮತ್ತು ರೂ. 1.47 ಲಕ್ಷ ಎಕ್ಸ್‌ಶೋರೂಂ ಬೆಲೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








