ಮತ್ತೆ ಬರುತ್ತಿದೆ ಯುವಕರ ಹಾಟ್ ಫೇವರೆಟ್ ಬಜಾಜ್ ಪಲ್ಸರ್ 220F ಬೈಕ್: ಬುಕ್ಕಿಂಗ್ ಪ್ರಾರಂಭ

ಒಂದು ಕಾಲದಲ್ಲಿ ಬಜಾಜ್ ಪಲ್ಸರ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸುತ್ತಿತ್ತು. ಈ ಬಜಾಜ್ ಪಲ್ಸರ್ ಹೆಚ್ಚಿನ ಯುವಕರ ಫೇವರೆಟ್ ಮತ್ತು ಕನಸಿನ ಬೈಕ್ ಆಗಿತ್ತು. ಆದರೆ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳ ಆಗಮನದ ಬಳಿಕ ಜನಪ್ರಿಯ ಪಲ್ಸರ್ ಬೈಕ್‌ಗಳ ಬೇಡಿಕೆಯು ಕುಸಿಯತೊಡಗಿತು.

ಬಜಾಜ್ ಆಟೋ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಪಲ್ಸರ್ 220F ಬೈಕ್ ಅನ್ನು ಮತ್ತೆ ಬಿಡುಗಡೆಗೊಳಿಸಲಿದೆ. ಇದೀಗ ಬಜಾಜ್ ಕಂಪನಿಯು ಈ ಹೊಸ ಪಲ್ಸರ್ 220F ಬೈಕಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಬೈಕ್ ಅನ್ನ್ ಖರೀದಿಸಲು ಬಯಸುವ ಆಸಕ್ತ ಗ್ರಾಹಕರು ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಬಜಾಜ್ ಪಲ್ಸರ್ 220F ಬೈಕಿನ ಉತ್ತರಾಧಿಕಾರಿಯಾಗಿ ಹೊಸ ಬಜಾಜ್ ಪಲ್ಸರ್ F250 ಅನ್ನು ಬಿಡುಗಡೆಗೊಳಿಸಿತ್ತು.

ಮತ್ತೆ ಬರುತ್ತಿದೆ ಯುವಕರ ಹಾಟ್ ಫೇವರೆಟ್ ಬಜಾಜ್ ಪಲ್ಸರ್ 220F ಬೈಕ್

ಆದರೆ ಆ ಹೊಸ ಬೈಕ್ ಹಿಂದಿನ ಮಾದರಿಯ ರೀತಿಯಲ್ಲಿ ಅಷ್ಟು ದೊಡ್ಡ ಯಶಸ್ಸನ್ನು ಕಂಡಿಲ್ಲ, ಮಾರಾಟದಲ್ಲಿಯೂ ಕೂಡ ಯಾವುದೇ ಏರಿಕೆಯನ್ನು ಕಂಡಿಲ್ಲ. ಈ ಬಜಾಜ್ ಪಲ್ಸರ್ 220F ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಗಳೊಂದಿಗೆ ಸ್ಪರ್ಧಿಸಲು ಸ್ವಲ್ಪ ಹೆಣಗಾಡಬಹುದು. ಇನ್ನು ಭಾರತದಲ್ಲಿ ಸ್ಥಗಿತವಾಗಲಿದೆ ಎಂದು ಹೇಳುವ ವೇಳೆ ಬಜಾಜ್ ಪಲ್ಸರ್ 220F ಬೈಕ್ ಯೋಗ್ಯ ಸಂಖ್ಯೆಯಲ್ಲಿ ಮಾರಾಟವನ್ನು ಕಂಡಿತು ಎಂಬ ಅಂಶವನ್ನು ಕೂಡ ಗಮನಾರ್ಹ ಅಂಶವಾಗಿದೆ.

ಬಜಾಜ್ ಕಂಪನಿಯು ಈ ಪಲ್ಸರ್ 220F ಬೈಕ್ ಅನ್ನು ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿ ಗ್ರಾಹಕರ ಸೆಳೆಯುವ ಪ್ರಯತ್ನವನ್ನು ಮಾಡಬಹುದು. ಹೊಸದಾಗಿ ಬಜಾಜ್ ಪಲ್ಸರ್ 220F ಬೈಕ್ ಎರಡೂ ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಬರುತ್ತದೆ. ಇದು ಬ್ಲ್ಯಾಕ್ ಜೊತೆ ರೆಡ್ ಹಾಗೂ ಬ್ಲ್ಯಾಕ್ ಜೊತೆ ಬ್ಲೂ ಬಣಗಳ ಆಯ್ಕೆಗಳಾಗಿವೆ. ಇನ್ನು ಈ ಹೊಸ ಬಜಾಜ್ ಪಲ್ಸರ್ 220F ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕ್ ಕೆಲವು ವಿನ್ಯಾಸ ಬದಲಾವಣೆಗಳನ್ನು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಈ ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಸ್ಪ್ಲಿಟ್ ಸೀಟ್‌ಗಳು, ಫೇರಿಂಗ್-ಮೌಂಟೆಡ್ ORVM ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ (ಲೋ ಬೀಮ್) ಮತ್ತು ಇನ್ನೂ ಕೆಲವು ಐಕಾನಿಕ್ ವಿನ್ಯಾಸ ಅಂಶಗಳನ್ನು ಹೊಂದಿರಲಿದೆ .ಈ ಹೊಸ ಬಜಾಜ್ ಪಲ್ಸರ್ 220F ಬೈಕಿನ ಎಂಜಿನ್ ಬಗ್ಗೇ ಹೇಳುವುದಾದರೆ, ಈ ಹೊಸ ಬೈಕಿನಲ್ಲಿ ನವೀಕರಿಸಿದ ಎಂಜಿನ್ ನೊಂದಿಗೆ ಬರುತ್ತದೆ. ಈ ಹೊಸ ಎಂಜಿನ್ ಬಿಎಸ್6 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಮಾದರಿಯಲ್ಲಿ 220cc, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿರಲಿದೆ.

ಈ ಎಂಜಿನ್ 21 ಬಿಹೆಚ್‍ಪಿ ಪವರ್ ಮತ್ತು 19 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗುತ್ತದೆ. ಇನ್ನು ಬಜಾಜ್ ಆಟೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಳೆಯದಾದ ಪಲ್ಸರ್ 150 ಬೈಕ್ ಅನ್ನು ಇತೀಚೆಗೆ ಸ್ಥಗಿತಗೊಳಿಸಿತು. ಬಜಾಜ್ ಪಲ್ಸರ್ 150 ಮೋಟಾರ್‌ಸೈಕಲ್‌ನ ಸ್ಥಾನವನ್ನು ಹೊಸದಾಗಿ ಬಿಡುಗಡೆ ಮಾಡಲಾದ ಪಲ್ಸರ್ ಪಿ150 ಮೋಟಾರ್‌ಸೈಕಲ್ ಆಗಿದೆ. ಬಜಾಜ್ ಇತ್ತೀಚೆಗೆ 2021ರ ಆಗಸ್ಟ್ ತಿಂಗಳಿನಲ್ಲಿ ಪಲ್ಸರ್ 180 ಮೋಟಾರ್‌ಸೈಕಲ್ ಅನ್ನು ಸ್ಥಗಿತಗೊಳಿಸಿರುವುದನ್ನು ಪರಿಗಣಿಸಿ ಇದು ಆಶ್ಚರ್ಯವೇನಿಲ್ಲ.

ಈ ಬಜಾಜ್ ಪಲ್ಸರ್ ಇನ್ನೂ ಬಜಾಜ್‌ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಬಜಾಜ್ ಪಲ್ಸರ್ 150 ಬೈಕ್ ಪಲ್ಸರ್ 150 ನಿಯಾನ್, ಪಲ್ಸರ್ 150 ಎಸ್‌ಡಿ (ಸಿಂಗಲ್ ಡಿಸ್ಕ್), ಮತ್ತು ಬಜಾಜ್ ಪಲ್ಸರ್ 150 ಟಿಡಿ (ಟ್ವಿನ್ ಡಿಸ್ಕ್) ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಈ ಬಜಾಜ್ ಪಲ್ಸರ್ 150 ಬೈಕಿನ ಮೂರು ರೂಪಾಂತರಗಳಲ್ಲಿ, ನಿಯಾನ್ ರೂಪಾಂತರವು ಅತ್ಯಂತ ಕೈಗೆಟುಕುವ ಬೆಲೆಯಾಗಿದೆ.

ಇನ್ನು ಬಜಾಜ್ ಪಲ್ಸರ್ 150 ಬೈಕಿನ ಸ್ಥಾನಕ್ಕೆ ಬಂದ ಹೊಸ ಬಜಾಜ್ ಪಲ್ಸರ್ ಪಿ150 ಬೈಕ್ ಮಾರುಕಟ್ಟೆಯಲ್ಲಿ ಸಿಂಗಲ್ ಡಿಸ್ಕ್ (ಸಿಂಗಲ್ ಸೀಟ್) ಮತ್ತು ಟ್ವಿನ್ ಡಿಸ್ಕ್ (ಸ್ಪ್ಲಿಟ್ ಸೀಟ್) ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಪಲ್ಸರ್ ಪಿ150 ಬೈಕ್ 149.68cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಈ ಎಂಜಿನ್ 8,500rpm ನಲ್ಲಿ 14.5 bhp ಮತ್ತು 6,000rpm ನಲ್ಲಿ 13.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Saturday, February 18, 2023, 14:15 [IST]
English summary
New bajaj pulsar 220f to be launched soon bookings open details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+