ದ್ವಿಚಕ್ರ ವಾಹನ ಸವಾರರಿಗಾಗಿ ಹೊಸ ಏರ್‌ಬ್ಯಾಗ್... ಹೆಲ್ಮೆಟ್ ಜೊತೆಗೆ ಧರಿಸಿದ್ರೆ ಕಾರಿನಷ್ಟೇ ಸೇಫ್ಟಿ

ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಿಗೆ ಸುರಕ್ಷತೆ ತೀರಾ ಕಡಿಮೆಯಾಗಿರುತ್ತದೆ. ಹೆಲ್ಮೆಟ್ ಧರಿಸದ ಮಾತ್ರಕ್ಕೆ ನಾವು ಸಂಪೂರ್ಣ ಸುರಿಕ್ಷಿತವಲ್ಲ. ಒಂದು ವೇಳೆ ಅಪಘಾತವಾದರೆ ತಲೆ ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಾನಿಯಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೆಲೈಟ್ (HELITE) ಎಂಬ ಫ್ರೆಂಚ್ ಕಂಪನಿ ದ್ವಿಚಕ್ರ ವಾಹನ ಸವಾರರಿಗಾಗಿ ಏರ್‌ಬ್ಯಾಗ್ ಅಭಿವೃದ್ಧಿಪಡಿಸಿದ್ದಾರೆ.

ಬಹುತೇಕ ದೇಶದ ಎಲ್ಲಾ ರಾಜ್ಯಗಳಲ್ಲೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ದ್ವಿಚಕ್ರ ವಾಹನ ಸವಾರರಷ್ಟೇ ಅಲ್ಲ, ಅವರ ಹಿಂದೆ ಕುಳಿತುಕೊಳ್ಳುವವರೂ ಹೆಲ್ಮೆಟ್ ಧರಿಸಬೇಕು ಎಂದು ಸಂಚಾರ ನಿಯಮಗಳು ಹೇಳುತ್ತವೆ. ಇದರ ಮೂಲ ಉದ್ದೇಶ ದ್ವಿಚಕ್ರ ವಾಹನ ಸವಾರರ ಅಪಘಾತದಿಂದಾಗುವ ಸಾವುಗಳನ್ನು ನಿಯಂತ್ರಿಸುವುದಾಗಿದೆ. ಆದರೆ ತಲೆ ಮಾತ್ರವಲ್ಲದೇ ದೇಹದ ಇತರ ಭಾಗಗಳಿಗೂ ರಕ್ಷಣೆ ಅತ್ಯವಸರವಾಗಿದೆ. ಈ ನಿಟ್ಟಿನಲ್ಲಿ ಹೆಲ್ಮೆಟ್‌ನಷ್ಟೇ ರಕ್ಷಣೆಯನ್ನು ನೀಡಬಲ್ಲ ಹೊಸ ಸುರಕ್ಷತಾ ಸಾಧನವಾದ ಏರ್‌ಬ್ಯಾಗ್ ಬಂದಿದೆ.

ದ್ವಿಚಕ್ರ ವಾಹನ ಸವಾರರಿಗಾಗಿ ಹೊಸ ಏರ್‌ಬ್ಯಾಗ್... ಹೆಲ್ಮೆಟ್ ಜೊತೆಗೆ ಧರಿಸಿದ್ರೆ ಕಾರಿನಷ್ಟೇ ಸೇಫ್ಟಿ

ಈ ಏರ್‌ಬ್ಯಾಗ್‌ಗಳನ್ನು ಕೇವಲ ಕಾರುಗಳಲ್ಲಿ ಮಾತ್ರ ಈ ಹಿಂದೆ ನೋಡುತ್ತಿದ್ದೆವು. ಆದರೆ ಈಗ ಏರ್‌ಬ್ಯಾಗ್‌ಗಳನ್ನು ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ದ್ವಿಚಕ್ರ ವಾಹನ ಚಾಲಕರಿಗೆ ಏರ್‌ಬ್ಯಾಗ್ ಬ್ಯಾಕ್‌ಪ್ಯಾಕ್ ಹಿಂದೆ ಅಂಟಿಕೊಂಡಿರುವ ಬ್ಯಾಗ್‌ನ ರೂಪದಲ್ಲಿ ರಚಿಸಲಾಗಿದೆ. ಎಷ್ಟೇ ದೊಡ್ಡ ಅಪಘಾತ ಸಂಭವಿಸಿದರೂ ಅದು ನಿಮ್ಮನ್ನು ರಕ್ಷಿಸುವಂತೆ ಬ್ಯಾಕ್‌ಪ್ಯಾಕ್ ಮಾದರಿಯ ಏರ್‌ಬ್ಯಾಗ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಫ್ರೆಂಚ್ ರೈಡಿಂಗ್ ಗೇರ್ ತಯಾರಿಕಾ ಕಂಪನಿಯಾಗಿರುವ ಹೆಲೈಟ್ ವಿನ್ಯಾಸಗೊಳಿಸಿದೆ.

ಇದನ್ನು ನಾವು ಸಾಮಾನ್ಯವಾಗಿ ಧರಿಸುವ ಬ್ಯಾಗ್‌ನಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು H-Moov (HELITE H-MOOV) ಎಂದು ಕರೆಯಲಾಗುತ್ತದೆ. ಇದು ಸಿಇ ಪ್ರಮಾಣೀಕೃತ ಸುರಕ್ಷತಾ ಶೀಲ್ಡ್ ಆಗಿದೆ. ಸಾಮಾನ್ಯ ಬ್ಯಾಗ್ ಪ್ರಕಾರದ ಏರ್‌ಬ್ಯಾಗ್ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ. ಒಂದು ಸಂವೇದಕಗಳೊಂದಿಗೆ (ಸೆನ್ಸಾರ್) ಆಟೋಮ್ಯಾಟಿಕ್ ಆಗಿ ತೆರೆದುಕೊಳ್ಳುವುದು ಮತ್ತು ಇನ್ನೊಂದು ಸಾಂಪ್ರದಾಯಿಕ ಟೆಥರ್ ವ್ಯವಸ್ಥೆಯನ್ನು ಹೊಂದಿದೆ. ಟೆಥರ್ ಸಿಸ್ಟಮ್ ಬೈಕ್ ಅಪಘಾತಕ್ಕೀಡಾದ ಕ್ಷಣದಲ್ಲಿ ಏರ್ ಬ್ಯಾಗ್ ಅನ್ನು ಸಕ್ರಿಯಗೊಳಿಸುತ್ತದೆ.

ದ್ವಿಚಕ್ರ ವಾಹನ ಸವಾರರಿಗಾಗಿ ಹೊಸ ಏರ್‌ಬ್ಯಾಗ್... ಹೆಲ್ಮೆಟ್ ಜೊತೆಗೆ ಧರಿಸಿದ್ರೆ ಕಾರಿನಷ್ಟೇ ಸೇಫ್ಟಿ

ಆದರೆ ವೈರ್‌ಲೆಸ್ ಏರ್‌ಬ್ಯಾಗ್ ಡಿಕ್ಕಿಯ ಕುಸಿತವನ್ನು ಗ್ರಹಿಸಿ ಪರಿಣಾಮ ಸಂಭವಿಸುವ ಮೊದಲು ಏರ್-ಬ್ಯಾಗ್ ಅನ್ನು ಸಕ್ರಿಯಗೊಳಿಸುತ್ತದೆ. ಎರಡೂ ತ್ವರಿತ ಏರ್‌ಬ್ಯಾಗ್ ನಿಯೋಜನೆಗೆ ಸಮರ್ಥವಾಗಿವೆ ಎಂಬುದು ಗಮನಿಸಬೇಕಾದ ಸಂಗತಿ. ಆಕಸ್ಮಿಕ ಏರ್‌ಬ್ಯಾಗ್ ನಿಯೋಜನೆಯನ್ನು ತಡೆಯಲು ಅವು ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಸಹ ಹೊಂದಿವೆ. ಟೆಥರ್ ಸಿಸ್ಟಮ್ ಹೊಂದಿರುವ ಏರ್ ಬ್ಯಾಗ್ ಬಳಕೆದಾರರು ಬೈಕ್ ಅನ್ನು ಇಳಿಯುವ ಮೊದಲು ಟೆಥರ್ ಸಿಸ್ಟಮ್ ಅನ್ನು ಡಿಸ್‌ಎಂಗೇಜ್ ಮಾಡಬೇಕು.

ಒಂದು ವೇಳೆ ಗೊತ್ತಿಲ್ಲದೆ ಏರ್ ಬ್ಯಾಗ್ ಹಾಗೆಯೇ ಇಟ್ಟರೆ ಹಾಳಾಗುತ್ತದೆಯೇ ಎಂಬ ಅನುಮಾನ ನಿಮಗಿದ್ದರೇ, ಹಾಳಾದರು ಇದನ್ನು ಮರುಬಳಕೆ ಮಾಡುವ ಆಯ್ಕೆಯಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಇದು ಕಾರ್ಟ್ರಿಡ್ಜ್ ಮಾದರಿಯ ಏರ್‌ಬ್ಯಾಗ್ ಆಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಮಾತ್ರ ಬದಲಾಯಿಸಬಹುದು ಎಂದು ಹೆಲೈಟ್ ಕಂಪನಿ ತಿಳಿಸಿದೆ. ಈ ಏರ್‌ಬ್ಯಾಗ್ ಬೆನ್ನು, ಹೊಟ್ಟೆ, ಎದೆ, ದವಡೆ ಇತ್ಯಾದಿಗಳಿಗೆ ಗರಿಷ್ಠ ರಕ್ಷಣೆ ನೀಡುತ್ತದೆ. ಕೇವಲ ದೇಹದ ಈ ಭಾಗಗಳಿಗೆ ರಕ್ಷಣೆ ನೀಡುವುದರಿಂದ ಇದರ ಜೊತೆಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿರುತ್ತದೆ.

ದ್ವಿಚಕ್ರ ವಾಹನ ಸವಾರರಿಗಾಗಿ ಹೊಸ ಏರ್‌ಬ್ಯಾಗ್... ಹೆಲ್ಮೆಟ್ ಜೊತೆಗೆ ಧರಿಸಿದ್ರೆ ಕಾರಿನಷ್ಟೇ ಸೇಫ್ಟಿ

ಈ ಏರ್‌ಬ್ಯಾಗ್ ಅನ್ನು ಶೇಖರಣಾ ಚೀಲವಾಗಿಯೂ ಬಳಸಬಹುದು. ಇದು 18 ಲೀಟರ್‌ಗಳಷ್ಟು ವಸ್ತುಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಲ್ಯಾಪ್ ಟಾಪ್, ನೋಟ್ ಬುಕ್, ಪ್ರಮುಖ ದಾಖಲೆಗಳನ್ನು ಇದರಲ್ಲಿ ಇಡಬಹುದು. Helite H-Move ಏರ್ ಬ್ಯಾಗ್‌ನ ಬೆಲೆ €689 ರಿಂದ €849 ಇದೆ. ಅಂದರೆ ಮ್ಯಾನುವಲ್ ರೂಪಾಂತರದ ಬೆಲೆ ರೂ. 60 ಸಾವಿರ ಮತ್ತು ವೈರ್‌ಲೆಸ್ ಬೆಲೆ ರೂ. 74 ಸಾವಿರವಿದೆ. ಮೊದಲನೆಯದಾಗಿ ಈ ಏರ್‌ಬ್ಯಾಗ್ ಬ್ಯಾಕ್‌ಪ್ಯಾಕ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತದೆ.

ಇದರ ನಂತರ, ಈ ರಕ್ಷಣಾ ಕವಚವನ್ನು ವಿಶ್ವದ ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತ್ತದೆ. ಭಾರತದ ಆಗಮನದ ಬಗ್ಗೆ ಇನ್ನೂ ಮಾಹಿತಿ ಬಿಡುಗಡೆಯಾಗಿಲ್ಲ. ಆದ್ದರಿಂದ, ಈ ರಕ್ಷಾಕವಚ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅದೇ ಸಮಯದಲ್ಲಿ, ಇದು ಒಂದು ಪ್ರಮುಖ ಭದ್ರತಾ ಸಮಸ್ಯೆ ಆಗಿರುವುದರಿಂದ Helite H-Move ಏರ್ ಬ್ಯಾಗ್‌ ಸಾಧ್ಯವಾದಷ್ಟು ಬೇಗ ಪ್ರಪಂಚದ ಎಲ್ಲಾ ದೇಶಗಳಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

More from DriveSpark

Article Published On: Monday, February 27, 2023, 18:05 [IST]
English summary
New h moov air bag for two wheeler riders
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+