Hero: ಆಲ್ - ಟೈಮ್ ಫೆವರೇಟ್ ಹೀರೋ ಕರಿಜ್ಮಾ ವಿತರಣೆ ಶುರು.. ಬೆಲೆ ಎಷ್ಟು, ವಿಶೇಷತೆಗಳೇನು?
ಹೀರೋ (Hero) ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಕೆಲವೇ ತಿಂಗಳ ಹಿಂದೆ, ಯುವಕರ ಆಲ್ - ಟೈಮ್ ಫೆವರೇಟ್ ಕರಿಜ್ಮಾ ಎಕ್ಸ್ಎಂಆರ್ (Karizma XMR) ಬೈಕ್‌ನ್ನು ಮತ್ತೆ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಈ ಕರಿಜ್ಮಾ ಬುಕ್ಕಿಂಗ್‌ನಲ್ಲಿಯೂ ಅಬ್ಬರಿಸುತ್ತಿದೆ.
ಪ್ರಮುಖ ನಗರಗಳಲ್ಲಿ ಹೀರೋ ಮೋಟೊಕಾರ್ಪ್ (Hero MotoCorp), ಕರಿಜ್ಮಾ ಎಕ್ಸ್ಎಂಆರ್ ವಿತರಣೆಯನ್ನು ಆರಂಭಿಸಿದೆ. ಕಂಪನಿಯು ಈಗಾಗಲೇ ಈ ಮೋಟಾರ್‌ಸೈಕಲ್‌ಗಾಗಿ 13,000 ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಸ್ವೀಕರಿಸಿದೆ. ಪ್ರಾರಂಭದಲ್ಲಿ ಕರಿಜ್ಮಾ ಬೈಕ್‌ನ್ನು ರೂ.1,72,900 ಬೆಲೆಯಲ್ಲಿ ಲಾಂಚ್ ಮಾಡಲಾಗಿತ್ತು. ನಂತರ ದರವನ್ನು ಹೆಚ್ಚು ಮಾಡಲಾಗಿತ್ತು. ಸದ್ಯ, ರೂ.1,79,900 ಎಕ್ಸ್ ಶೋರೂಂ ದರವನ್ನು ಹೊಂದಿದೆ.

ಕಂಪನಿಯು ಕರಿಜ್ಮಾ ಎಕ್ಸ್ಎಂಆರ್ ಮೋಟಾರ್‌ಸೈಕಲ್‌ಗಾಗಿ ಹೊಸ ಬುಕ್ಕಿಂಗ್ ವಿಂಡೋವನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ ಎಂದು ಘೋಷಣೆ ಮಾಡಿದೆ. 'ಕರಿಜ್ಮಾ' ಹೀರೋ ಕಂಪನಿಯ ಜನಪ್ರಿಯ ಬೈಕ್ ಮಾತ್ರವಲ್ಲದೆ, ಅದರ ಮುಕುಟಮಣಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದು, ಹೊಸ ಲಿಕ್ವಿಡ್ - ಕೂಲ್ಡ್ ಎಂಜಿನ್ ಪಡೆದ ಕಂಪನಿಯ ಮೊದಲ ಮೋಟಾರ್‌ಸೈಕಲ್ ಆಗಿದೆ.
ಹೀರೋ ಕರಿಜ್ಮಾ ಎಕ್ಸ್ಎಂಆರ್ (Hero Karizma XMR) ಬೈಕ್ ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಇದು 210 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್ ಕೂಲ್ಡ್ DOHC ಎಂಜಿನ್ ಹೊಂದಿದ್ದು, 9,250 rpmನಲ್ಲಿ 25.15 bhp ಗರಿಷ್ಠ ಪವರ್, 7,250 rpmನಲ್ಲಿ 20.4 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಈ ಮೋಟಾರ್‌ಸೈಕಲ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಮುಂಭಾಗ ವೈ - ಆಕಾರದ ಎಲ್ಇಡಿ ಡಿಆರ್‌ಎಲ್, ಆಕರ್ಷಕ ಎಲ್ಇಡಿ ಹೆಡ್‌ಲೈಟ್ ಸೆಟಪ್ ಪಡೆದಿದೆ. ಅಡ್ಜಸ್ಟ್ಏಬಲ್ ವಿಂಡ್‌ಸ್ಕ್ರೀನ್, ರೇರ್ ವ್ಯೂ ಮಿರರ್ಸ್, ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್, ಸ್ಪ್ಲಿಟ್ ಸೀಟ್ ಸೆಟಪ್ ಹಾಗೂ ಹಿಂಭಾಗ ಕೂಡ ಅತ್ಯಾಧುನಿಕ ಎಲ್ಇಡಿ ಲೈಟಿಂಗ್ ಪಡೆದಿದೆ.
ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್, ಮೂರು ನವೀನ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಐಕಾನಿಕ್ ಯೆಲ್ಲೋ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲಾಕ್. ವೈಶಿಷ್ಟ್ಯದ ವಿಚಾರವಾಗಿ ತಿಳಿಸುವುದಾದರೆ, ಫುಲ್ ಡಿಜಿಟಲ್ LCD ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಟರ್ನ್ - ಬೈ - ಟರ್ನ್ ನ್ಯಾವಿಗೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಬೈಕ್, ಬ್ರೇಕಿಂಗ್ ಸಿಸ್ಟಮ್ ವಿಚಾರವಾಗಿ ಹೇಳುವುದಾದರೆ, ಮುಂಭಾಗ ಹಾಗೂ ಹಿಂಭಾಗ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. ಸಸ್ಪನ್ಷನ್ ಸೆಟಪ್ ಕುರಿತು ಮಾತನಾಡುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ ಮೊನೊಶಾಕ್ ಸೆಟಪ್ ಹೊಂದಿದೆ. ಜೊತೆಗೆ ಡ್ಯುಯಲ್ - ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), 17 - ಇಂಚಿನ ಆಕರ್ಷಕ ಅಲಾಯ್ ವೀಲ್ಸ್ ಪಡೆದಿದೆ.
ಇನ್ನು, ಹೀರೋ ಮೋಟೊಕಾರ್ಪ್ ಕರಿಜ್ಮಾ ಎಕ್ಸ್ಎಂಆರ್ ವಿತರಣೆಯನ್ನು ಆರಂಭಿಸಿರುವುದು ಅದರ ಗ್ರಾಹಕರಿಗೆ ಖುಷಿ ತಂದಿದೆ. ಮುಂಬರುವ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು, ಈ ಬೈಕ್ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯ ಪಡೆದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸಬಹುದು. ನಿಮಗೆ ಗೊತ್ತಿರಲಿ.. ಈಗಾಗಲೇ ಕರಿಜ್ಮಾಗಾಗಿ 13,000 ಕ್ಕೂ ಹೆಚ್ಚು ಗ್ರಾಹಕರು ಆರ್ಡರ್ ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








