ಮೊದಲೇ ಗಿನ್ನಿಸ್ ರೆಕಾರ್ಡ್ ನಿರ್ಮಾಣ: ಮುಂದಿನ ವರ್ಷವೇ ಹೊಸ Hero ವಿಡಾ ಇ-ಸ್ಕೂಟರ್ ಬರುತ್ತೆ!

ಹೀರೋ ಮೋಟೊಕಾರ್ಪ್, ತನ್ನ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು 2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಸದ್ಯದ ವರದಿ ಪ್ರಕಾರ, ಕಂಪನಿಯು ಮುಂಬರುವ ವರ್ಷಗಳಲ್ಲಿ ನೂತನ ಇ-ಸ್ಕೂಟರ್‌ಗಳ ಬಿಡುಗಡೆ ಹಾಗೂ ಡೀಲರ್ ಶಿಪ್ ನೆಟ್‌ವರ್ಕ್ ವಿಸ್ತರಣೆ ಕಾರ್ಯದಲ್ಲಿ ನಿರತವಾಗಲಿದೆ.

ಇತ್ತೀಚೆಗೆ ನಡೆದ ಹೂಡಿಕೆದಾರರ ಸಭೆಯಲ್ಲಿ, ಹೀರೋ (Hero) ತನ್ನ ಮುಂದಿನ ಯೋಜನೆಗಳ ಸಂಬಂಧ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದರ ಭಾಗವಾಗಿ 2024ರ ವೇಳೆಗೆ ಹೀರೋ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ದೇಶಾದ್ಯಂತ 100 ಹೊಸ ನಗರಗಳಿಗೆ ವಿಸ್ತರಣೆ ಮಾಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ದೇಶದ ಟೈರ್ 2 - 3 ನಗರಗಳಲ್ಲಿ ಹೀರೋ ದ್ವಿಚಕ್ರ ವಾಹನಗಳು ಖರೀದಿಗೆ ಸಿಗಲಿವೆ.

ಮೊದಲೇ ಗಿನ್ನಿಸ್ ರೆಕಾರ್ಡ್ ನಿರ್ಮಾಣ: ಮುಂದಿನ ವರ್ಷವೇ ಹೊಸ Hero ವಿಡಾ ಇ-ಸ್ಕೂಟರ್ ಬರುತ್ತೆ!

ಇದನ್ನು ಹೊರತುಪಡಿಸಿದರೆ, ಹೀರೋ ಕಂಪನಿ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡುವ ಮೂಲಕ ತನ್ನ ಲೈನ್-ಅಪ್ ಅನ್ನು ಮತಷ್ಟು ಬಲಗೊಳಿಸಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ವಿಡಾ ವಿ1 ಪ್ಲಾಟ್ ಫಾರಂ ಆಧರಿಸಿರುವ ಹೊಸ ಸ್ಕೂಟರ್ ವೊಂದನ್ನು ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ಹಲವಾರು, ಇದು ವಿಡಾ ಸ್ಕೂಟರ್‌ನ ಹೊಸ ರೂಪಾಂತರವಾಗಿದ್ದು, ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಅಂದಾಜಿಸಿದ್ದಾರೆ.

ಆದರೆ, ಹೀರೋ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪ್ರಸ್ತುತ ಹೀರೋ ಭಾರತದ ಮಾರುಕಟ್ಟೆಯಲ್ಲಿ ಸೇಲ್ ಮಾಡುವ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿಯೋಣ. ಕೆಲವೇ ದಿನಗಳ ಹಿಂದೆ 'ವಿಡಾ ವಿ1 ಪ್ರೊ' ಎಲೆಕ್ಟ್ರಿಕ್ ಸ್ಕೂಟರ್ ದರ ಹೆಚ್ಚಳವಾಗಿದ್ದು, ರೂ.1,25,900 ಎಕ್ಸ್ ಶೋರೂಂ (ನವ ದೆಹಲಿ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಹೀರೋ ವಿಡಾ ವಿ1 ಪ್ಲಸ್ ವೇರಿಯೆಂಟ್ 3.44 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ವಿಡಾ ವಿ1 ಪ್ರೊ ವೇರಿಯೆಂಟ್ 3.94 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. ಸಂಪೂರ್ಣ ಚಾರ್ಜಿನಲ್ಲಿ ವಿಡಾ ವಿ1 ಪ್ಲಸ್ 143 km ರೇಂಜ್, ಟಾಪ್ ಎಂಡ್ ಮಾದರಿ ವಿಡಾ ವಿ1 ಪ್ರೊ 165 km (ರಿಯಲ್ ವರ್ಲ್ಡ್ ರೇಂಜ್ 110 km) ರೇಂಜ್ ಕೊಡಲಿದೆ.

ಹೀರೋ ವಿಡಾ ವಿ1 ರೂಪಾಂತರಗಳು 80 kmph ಟಾಪ್ ಸ್ವೀಡ್ ಪಡೆದಿದ್ದು, ಇಕೋ, ರೈಡ್, ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿವೆ. ವಿಡಾ ವಿ1 ಪ್ಲಸ್ ಕೇವಲ 3.4 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಹೊಂದಲಿದ್ದು, ವಿಡಾ ವಿ1 ಪ್ರೊ 3.2 ಸೆಕೆಂಡುಗಳಲ್ಲಿ 0-40 kmph ಸ್ವೀಡ್ ಅನ್ನು ಪಡೆಯಲಿದೆ.

ಹೀರೋ ವಿಡಾ ವಿ1 ಸ್ಕೂಟರ್ TFT ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್, ರಿವರ್ಸ್ ಮೋಡ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ವಿಡಾ ವಿ1 ರೂಪಾಂತರಗಳು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್, ಗ್ಲೋಸ್ ಬ್ಲ್ಯಾಕ್.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹೀರೋ ಕಂಪನಿ 'ವಿಡಾ ಎಲೆಕ್ಟ್ರಿಕ್ ಸ್ಕೂಟರ್' ಹೆಸರಿನಲ್ಲಿ ವಿಶ್ವ ಗಿನ್ನೆಸ್ ರೆಕಾರ್ಡ್ ನಿರ್ಮಿಸಿತ್ತು. ರಾಜಸ್ಥಾನದ ಜೈಪುರದಲ್ಲಿರುವ ತನ್ನದೇ ಟ್ರ್ಯಾಕ್‍ನಲ್ಲಿ, ಜಸ್ಟ್ 24 ಗಂಟೆಯಲ್ಲಿ 6 ರೈಡರ್‌ ನೆರವಿನಿಂದ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ 1,780 ಕಿಲೋಮೀಟರ್ ಕ್ರಮಿಸಿ, ಈ ಐತಿಹಾಸಿಕ ದಾಖಲೆ ಮಾಡಿತ್ತು.

ದೇಶೀಯ ಮಾರುಕಟ್ಟೆಯಲ್ಲಿ ಹೀರೋ ವಿಡಾ ವಿ 1 ಸ್ಕೂಟರ್ ಗೆ ಓಲಾ, ಎಥರ್, ಟಿವಿಎಸ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಕಂಪನಿಯು ಮುಂದಿನ ವರ್ಷವೇ ವಿಡಾ ವಿ 1 ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಲು ಸಕಲ ಸಿದ್ದತೆ ನಡೆಸುತ್ತಿದೆ. ಮುಂಬರಲಿರುವ ಹೊಸ ಸ್ಕೂಟರ್ ರೇಂಜ್, ವೈಶಿಷ್ಟ್ಯದ ವಿಚಾರದಲ್ಲಿ ಅತ್ಯಾಧುನಿಕವಾಗಿರಲಿದೆ ಎಂದು ಹೇಳಲಾಗಿದೆ.

Article Published On: Monday, June 26, 2023, 16:18 [IST]
English summary
New hero vida electric scooter launch next year details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+