ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಹೊಸ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಬಹುನಿರೀಕ್ಷಿತ ಕವಾಸಕಿ ಡಬ್ಲ್ಯು175 ಸ್ಟ್ರೀಟ್ (Kawasaki W175 Street) ಬೈಕ್ ಅನ್ನು 2023ರ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕಿನ ಪರಿಚಯಾತ್ಮಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.35 ಲಕ್ಷವಾಗಿದೆ.

ಹೊಸ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕ್ ಮೊದಲ ನೋಟದಲ್ಲೇ ಗಮನ ಸೆಳೆಯುವ ರೆಟ್ರೊ ಕ್ಲಾಸಿಕ್ ಶೈಲಿಯನ್ನು ಒಳಗೊಂಡಿದೆ. ಈ ಹೊಸ ಕವಾಸಕಿ ಬೈಕ್ ಕಾಂಪ್ಯಾಕ್ಟ್ 177 ಸಿಸಿ ಎಂಜಿನ್‌ನೊಂದಿಗೆ ಬರುತ್ತದೆ. ಇದು ಭಾರತದಲ್ಲಿನ ಅತ್ಯಂತ ಕೈಗೆಟುಕುವ ಕವಾಸಕಿ ಬೈಕ್ ಗಳಲ್ಲಿ ಒಂದಾಗಿದೆ. ಈ ಹೊಸ ಹೊಸ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕಿನ ವಿತರಣೆಯು ಈ ತಿಂಗಳಿನಿಂದಲೇ ಪ್ರಾರಂಭವಾಗಲಿದೆ.

Kawasaki W175 Street

ಹೊಸ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕಿನಲ್ಲಿ 177 cc ಸಿಂಗಲ್-ಸಿಲಿಂಡರ್, ಫ್ಯುಯಲ್-ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7,000 rpm ನಲ್ಲಿ 12.82 bhp ಪವರ್ ಮತ್ತು 6,000 rpm ನಲ್ಲಿ 13.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

ಈ ಕೈಗೆಟುಕುವ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಬೈಕಿನಲ್ಲಿ ಸ್ಟ್ರೀಟ್ ವೃತ್ತಾಕಾರದ ಹೆಡ್‌ಲೈಟ್ ಮತ್ತು ಟಿಯರ್ ಆಕಾರದ ಫ್ಯೂಯಲ್ ಟ್ಯಾಂಕ್, ಸಿಂಗಲ್-ಪೀಸ್ ಸೀಟ್ ಮತ್ತು W175 ನಿಂದ ದಪ್ಪನಾದ ಎಕ್ಸಾಸ್ಟ್ ಅನ್ನು ಉಳಿಸಿಕೊಂಡಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಸ್ಟ್ರೀಟ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಭಿನ್ನವಾಗಿರುವ ವ್ಹೀಲ್ ಗಳು ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬರುತ್ತವೆ.

Kawasaki W175 Street

ಈ ಕವಾಸಕಿ W175 ಸ್ಟ್ರೀಟ್ ಬೈಕಿನಲ್ಲಿ W175 ಮಾದರಿಯಂತೆ ಸ್ಟೀಲ್, ಡಬಲ್-ಕ್ರೇಡಲ್ ಫ್ರೇಮ್ ಸೆಟಪ್ ಅನ್ನು ಸಹ ಉಳಿಸಿಕೊಂಡಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬಕ್ಕಿನ ಮುಂಭಾಗದಲ್ಲಿ ಸಾಂಪ್ರದಾಯಿಕ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೊಸ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು (ಮುಂಭಾಗ) ಮತ್ತು 100/90 (ಹಿಂಭಾಗ) ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ ಬರುತ್ತವೆ.

ಹೊಸ ಕವಾಸಕಿ W175 ಸ್ಟ್ರೀಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 245mm ಡಿಸ್ಕ್‌ ಬ್ರೇಕ್ ಅನ್ನು ಅಳವಡಿಸಿದ್ದು, ಇದು ಎರಡು-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ಗಳಿಂದ ಕೂಡಿವೆ. ಇನ್ನು ಈ ಬೈಕಿನ ಹಿಂಭಾಗವು 110mm ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ABS ಅನ್ನು ಹೊಂದಿದೆ.

ಹೊಸ ಕವಾಸಕಿ W175 ಸ್ಟ್ರೀಟ್ ಬೈಕ್ 2,007mm ಉದ್ದ, 806mm ಅಗಲಮತ್ತು 1,050mm ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ ಸೀಟ್ ಎತ್ತರ 786.5 mm ಆಗಿದೆ. ಎಲ್ಲಾ ತರಹದ ಜನರಿಗೆ ಆರಾಮದಾಯಕವಾಗಿ ಈ ಬೈಕಿನ ಕುಳಿತುಕೊಳ್ಳಬಹುದು. ಇನ್ನು ಈ W175 ಸ್ಟ್ರೀಟ್ ಬೈಕ್ 152mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಈ ಬೈಕ್ 135.2 ಕೆಜಿ ತೂಕವನ್ನ್ ಹೊಂದಿದೆ.

ಅಲ್ಲದೇ ಈ ಬೈಕ್ 12.1 ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಕವಾಸಕಿ W175 ಸ್ಟ್ರೀಟ್‌ನ ಬಿಡುಗಡೆಯು ಜಪಾನಿನ ರೆಟ್ರೊ ಮೋಟಾರ್‌ಸೈಕಲ್ ಸ್ಟ್ರೀಟ್ ಮೊನಿಕರ್ ಹೊಸ ಸೇರ್ಪಡೆಯಾಗಿದೆ. ಇದರ ಸ್ಪೋಕ್ಡ್ ವೀಲ್‌ಗಳು ಮತ್ತು ಟ್ಯೂಬ್ಡ್ ಟೈರ್‌ಗಳನ್ನು ಅಲಾಯ್ ವ್ಹೀಲ್ ಗಳು ಮತ್ತು ಟ್ಯೂಬ್‌ಲೆಸ್ ರಬ್ಬರ್‌ಗೆ ಬದಲಾಗಿದೆ. ಇನ್ನು ಕೈಗೆಟುಕುವ ಬೆಲೆಯಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Friday, December 8, 2023, 17:36 [IST]
English summary
New kawasaki w175 street launched specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+