ಬಿಡುಗಡೆಗೂ ಮುನ್ನ ಹೊಸ ಕೈನೆಟಿಕ್ ಲೂನಾ ಚಿತ್ರಗಳು ಸೋರಿಕೆ... ನಿರೀಕ್ಷೆ ಹೆಚ್ಚಿಸಿದ ಫೋಟೋಗಳು!

ಕೈನೆಟಿಕ್ ಲೂನಾ ಯಾರಿಗೆ ಗೊತ್ತಿಲ್ಲ ಹೇಳಿ? ಇತ್ತೀಚಿನ ಮಕ್ಕಳಿಗೆ ಬಿಟ್ಟರೇ 80-90 ರ ದಶಕದವರಿಗೆ ಇದರ ಪರಿಚಯ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಸಿಇಒ ಸುಲಜ್ಜ ಫಿರೋಡಿಯಾ ಮೋಟ್ವಾನಿ ಅವರು ಕೈನೆಟಿಕ್ ಲೂನಾವನ್ನು ಮರಳಿ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿದ್ದರು. ಇದೀಗ ಈ ಮೊಪೆಡ್‌ನ ಫೋಟೋಗಳು ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೊಲ್ಯೂಷನ್ಸ್ ಹೊಸ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡುವ ಮೂಲಕ ಐಕಾನಿಕ್ ಲೂನಾ ಹೆಸರನ್ನು ಮರಳಿ ತರುತ್ತಿದೆ. ಮುಂಬರುವ ಹೊಸ ಕೈನೆಟಿಕ್ ಲೂನಾಗೆ ಹೊಸ ಹೆಸರನ್ನು ಕೂಡ ನಾಮಕರಣ ಮಾಡಲಾಗಿದೆ. ಸಿಇಒ ಸುಲಜ್ಜ ಫಿರೋಡಿಯಾ ಮೋಟ್ವಾನಿ ಅವರು "ಇ ಲೂನಾ" ಎಂಬ ಹೆಸರನ್ನು ಬಹಿರಂಗಪಡಿಸಿದ್ದರು.

new kinetic luna

ಅಂದರೆ ಹೊಸ ಲೂನಾ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿದೆ. ಹೊಸ ಡಿಸೈನ್ ಹಾಗೂ ಆಧುನಿಕ ಫೀಚರ್‌ಗಳನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಸೋರಿಕೆಯಾಗಿರುವ ಫೋಟೋಗಳ ಪ್ರಕಾರ ಇ ಲೂನಾವು ತನ್ನ ಹಳೆಯ ಕೈನೆಟಿಕ್ ಲೂನಾದಂತೆ ಬಹುತೇಕ ಅದೇ ವಿನ್ಯಾಸವನ್ನು ಹೊಂದಿದೆಯಾದರೂ ಈಗಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಒಂದಷ್ಟು ಆಧುನಿಕ ಬದಲಾವಣೆಗಳನ್ನು ಪಡೆದಿದೆ.

ಟ್ವಿಟರ್‌ನಲ್ಲಿ ಸುಲಜ್ಜ ಫಿರೋಡಿಯಾ ಮೋಟ್ವಾನಿ ಅವರು ಹಳೆಯ "ಚಲ್ ಮೇರಿ ಲೂನಾ" ಜಾಹೀರಾತಿನೊಂದಿಗೆ ಅವರ ತಂದೆ ಮೊಪೆಡ್ ಮೇಲೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದು ಹಿಂದಿನ ಸಾಂಪ್ರದಾಯಿಕ ಲೂನಾ ಹೊಸ ಕೈನೆಟಿಕ್ ಇ ಲೂನಾಗೆ ಸ್ಫೂರ್ತಿಯ ಪ್ರಾಥಮಿಕ ಮೂಲವಾಗಿದೆ ಎಂದು ಹೇಳಬಹುದು. ಈಗ ಸೋರಿಕೆಯಾದ ಚಿತ್ರಗಳು ಇ ಲೂನಾ ಕೂಡ ಹೆಸರು ಮಾತ್ರವಲ್ಲದೇ ವಿನ್ಯಾಸ ಕೂಡ ಪಡೆದರೆ ತನ್ನ ಪರಂಪರೆ ಉಳಿಸಿಕೊಳ್ಳಲಿದೆ.

new kinetic luna

ಸೋರಿಕೆಯಾದ ಫೋಟೋಗಳಲ್ಲಿ ಹೇಗಿದೆ ಹೊಸ ಲೂನಾ? ಮೊದಲಿನಂತೆ ಕಪ್ಪಿ ಬಣ್ಣದಲ್ಲಿ ಅಲ್ಲದೇ ಈಗ ಕೆಂಪು ಕಾಂಟ್ರಾಸ್ಟ್‌ನೊಂದಿಗೆ ಕೈನೆಟಿಕ್ ಅತ್ಯಾಧುನಿಕ ಡ್ಯಾಶ್ ಅನ್ನು ಪಡೆದಿದೆ. ಎರಡೂ ತುದಿಗಳಲ್ಲಿ ಕ್ರೋಮ್ ವೈರ್-ಸ್ಪೋಕ್ ರಿಮ್‌ಗಳಿವೆ. TVS XL100 ನಂತೆಯೇ ಇವುಗಳು 16 ಇಂಚಿನಲ್ಲಿ ಇರಬಹುದಾಗಿದೆ. ಹೆಡ್‌ಲೈಟ್ ಒಂದು ಸರ್ಕ್ಯೂಲರ್ ಘಟಕವಾಗಿದ್ದು, ಅದರ ಸುತ್ತ ಹೌಸಿಂಗ್ ನೀಡಲಾಗಿದೆ.

ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು, ತೂಕವನ್ನು ಹೊರುವ ಸಾಮರ್ಥ್ಯಕ್ಕಾಗಿ ಹಿಂಭಾಗವು ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಪಡೆದಿದೆ. ಇ ಲೂನಾದಲ್ಲಿ ಸ್ಪ್ಲಿಟ್ ಸೀಟ್‌ಗಳು (ತೆಗೆಯಬಹುದಾದ) ಇರಬಹುದು ಎನ್ನಿಸುತ್ತಿದೆ. ಉಳಿದಂತೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (LCD), ಮುಂಭಾಗದಲ್ಲಿ ಕ್ರ್ಯಾಶ್ ಗಾರ್ಡ್, ಹಿಂಭಾಗದಲ್ಲಿ ಗ್ರ್ಯಾಬ್ ರೈಲ್, ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಟೈಲ್ ಲೈಟ್‌ಗಳು ಮತ್ತು ಟರ್ನ್ ಇಂಡಿಕೇಟರ್‌ಗಳು, ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳೊಂದಿಗೆ ಬರಲಿದೆ.

new kinetic luna

ಎಲೆಕ್ಟ್ರಿಕ್ ಪವರ್‌ಟ್ರೇನ್: ಕೈನೆಟಿಕ್ ಬ್ಯಾಟರಿ ಮತ್ತು ಮೋಟಾರ್ ಸ್ಪೆಕ್ಸ್ ಅನ್ನು ಬಹಿರಂಗಪಡಿಸಿಲ್ಲವಾದರೂ, ಇದು ಎಲೆಕ್ಟ್ರಿಕ್ ಪವರ್‌ಟ್ರೇನ್ ಹೊಂದಿರಲಿದೆ. ಹೋಂಡಾ ಬೆನ್ಲಿ ಇ ಗಿಂತ ಭಿನ್ನವಾಗಿ ಇದು ಸ್ಥಿರ ಬ್ಯಾಟರಿ ಹೊಂದಿರಲಿದೆ, ಇದು ತೆಗೆಯಬಹುದಾದ ಬ್ಯಾಟರಿಯನ್ನು ಸಹ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 50 ರಿಂದ 100 ಕಿ.ಮೀ ರೇಂಜ್ ನೀಡುವ ಸಣ್ಣ ಬ್ಯಾಟರಿಯನ್ನು ಹೊಂದುವ ಸಾಧ್ಯತೆಯಿದೆ. ಸುಮಾರು ರೂ. 50,000 ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Source: Bikewale
Link: https://www.bikewale.com/news/electric-luna-first-image-leaked/

More from DriveSpark

Article Published On: Saturday, June 3, 2023, 10:00 [IST]
English summary
New kinetic luna images leaked photos raise expectations
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+