160 ಕಿ.ಮೀ ರೇಂಜ್, ಆಕರ್ಷಕ ಬೆಲೆಯಲ್ಲಿ ಬೆಂಗಳೂರಿನ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ತಯಾರಕರಾದ ಸಿಂಪಲ್ ಎನರ್ಜಿ ತನ್ನ ಹೊಸ ಸಿಂಪಲ್ಡಾಟ್ ಒನ್ (Simple Dot One) ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಬೆಂಗಳೂರಿನ ಎಕ್ಸ್ ಶೋರೂಂ ಪ್ರಕಾರ ರೂ.1.39,999 ಆಗಿದೆ. ಎಲ್ಲಾ ಗ್ರಾಹಕರಿಗಾಗಿ ಜನವರಿ 27 ರಿಂದ ಪ್ರಿ-ಬುಕ್ಕಿಂಗ್ ಪ್ರಾರಂಭವಾಗಲಿದೆ.

ಗ್ರಾಹಕರಿಗೆ ಜನವರಿ 1 ರಿಂದ ಸಿಂಪಲ್ ಡಾಟ್ ಒನ್ ಬದಲಾಯಿಸಲು ಅನುಮತಿಸಲಾಗುತ್ತದೆ. ಬುಕಿಂಗ್ ಮತ್ತು ಡೆಲಿವರಿಗಳು ಮೊದಲು ಬೆಂಗಳೂರಿನಲ್ಲಿ ಪ್ರಾರಂಭವಾಗುವಂತೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ.1,947 ಟೋಕನ್ ಮೊತ್ತ ಪಾವತಿಸಬೇಕಾಗುತ್ತದೆ. ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸಣ್ಣ ಬ್ಯಾಟರಿ ಪ್ಯಾಕ್ ಅನ್ನು ಪ್ಯಾಕ್ ಅನ್ನು ಪಡೆಯುತ್ತದೆ.

Simple Dot One Electric Scooter

ಈ ತಿಂಗಳ ಆರಂಭದಲ್ಲಿ, ಡಾಟ್ ಒನ್ ಅನ್ನು ರೂ 99,999 ನಲ್ಲಿ ನೀಡಲಾಯಿತು. ಆದರೆ ಈ ಪರಿಚಯಾತ್ಮಕ ಬೆಲೆಯು ಬೆಂಗಳೂರಿನಿಂದ ಸಿಂಪಲ್ ಒನ್ ಅನ್ನು ಮುಂಗಡ ಬುಕ್ ಮಾಡಿದ ಕೆಲವು ಗ್ರಾಹಕರಿಗೆ ಮಾತ್ರ. ಇದರ ಬ್ಯಾಟರಿ ಪ್ಯಾಕ್ ಕುರಿತು ಹೇಳುವುದಾದರೆ, ಸಿಂಪಲ್ ಡಾಟ್ ಒನ್‌ನ IDC ಕ್ಲೈಮ್ ಮಾಡಿದ ರೇಂಜ್ 160 ಕಿಮೀ ಆಗಿದೆ.

ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 3.7 kWh ಬ್ಯಾಟರಿ ಪ್ಯಾಕ್ ಅನ್ನು ರೀಚಾರ್ಜ್ ಮಾಡಲು750W ಚಾರ್ಜರ್ ಅನ್ನು ನೀಡುತ್ತಾರೆ. ಡಾಟ್ ಒನ್ ರೇಂಜ್ ಹೆಚ್ಚಿಸಲು ಸಹಾಯ ಮಾಡುವ ವಿಶೇಷ ಟೈರ್‌ಗಳನ್ನು ಬಳಸುತ್ತದೆ ಎಂದು ಸಿಂಪಲ್ ಎನರ್ಜಿ ಹೇಳುತ್ತಾರೆ. ಟೈರ್‌ಗಳು 90-90 ಅಳತೆ ಮತ್ತು 12-ಇಂಚಿನ ವ್ಹೀಲ್ ಗಳನ್ನು ಸುತ್ತುವ ಟ್ಯೂಬ್‌ಲೆಸ್-ಟೈಪ್ ಆಗಿರುತ್ತವೆ.

Simple Dot One Electric Scooter

ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ರೆಡ್, ಬ್ರೆಜೆನ್ ಬ್ಲಾಕ್, ಗ್ರೇಸ್ ವೈಟ್, ಲೈಟ್ಎಕ್ಸ್, ಬ್ರೆಜೆನ್ಎಕ್ಸ್ ಮತ್ತು ಅಜುರೆ ಬ್ಲೂ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಕಾಂಬಿ-ಬ್ರೇಕಿಂಗ್ ಸಿಸ್ಟಮ್, ಕನೆಕ್ಟಿವಿಟಿ ಅಪ್ಲಿಕೇಶನ್ ಅನ್ನು ಬೆಂಬಲಿಸುವ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್. 35-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ಕೂಡ ಇದೆ, ಇದನ್ನು ವಸ್ತುಗಳನ್ನು ಸಂಗ್ರಹಿಸಲು ಬಳಸಬಹುದು.

ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿವೆ. ಅದರಲ್ಲಿಯೂ ಬಹಳ ವರ್ಷಗಳ ಕಾಯುವಿಕೆ ಬಳಿಕ, ಬೆಂಗಳೂರಿನ ಸಿಂಪಲ್ ಎನರ್ಜಿ (Simple Energy) ತನ್ನ ಬಹುನೀರಿಕ್ಷಿತ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನ್ನು ಬಿಡುಗಡೆಗೊಳಿಸಿದೆ. ಸಿಂಪಲ್ ಎನರ್ಜಿ ದೇಶದ 40 ರಿಂದ 50 ನಗರಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಲು ತೀರ್ಮಾನಿಸಿದೆ.

ಕೆಲವು ತಿಂಗಳ ಹಿಂದೆ, ತಮಿಳುನಾಡಿನ ಶೂಲಗಿರಿಯಲ್ಲಿ 'ಸಿಂಪಲ್ ವಿಷನ್ 1.0' ಹೆಸರಿನ ಬೃಹತ್ ಉತ್ಪಾದನಾ ಘಟಕವನ್ನು ಆರಂಭಿಸಿತ್ತು. ಅಲ್ಲಿ ವಾರ್ಷಿಕ 10 ಲಕ್ಷ ಯುನಿಟ್ ಸ್ಕೂಟರ್ ತಯಾರಿಸಬಹುದು. ನಿಮಗೆ ಗೊತ್ತಿರಲಿ. ಸಿಂಪಲ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Wednesday, December 27, 2023, 17:13 [IST]
English summary
New simple dot one electric scooter launched price specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+