Toyota: ಸದ್ದಿಲ್ಲದೇ ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ, ಬೆಲೆ ಎಷ್ಟು?
ಭಾರತದಲ್ಲಿ ಟೊಯೊಟಾ (Toyota) ಇನ್ನೋವಾ ಸರಣಿ ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಭಾರೀ ಖ್ಯಾತಿ ಗಳಿಸಿದೆ. ಇದೀಗ, ಸದ್ದಿಲ್ಲದೇ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆಗೊಳಿಸಿದೆ. ಇದು, ರೂ.20.07 ಲಕ್ಷದಿಂದ ರೂ. 20.22 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ (Toyota Innova Hycross GX Limited Edition), ಈಗಿರುವ ಸ್ಟ್ಯಾಂಡರ್ಡ್ ಜಿಎಕ್ಸ್ ರೂಪಾಂತರಕ್ಕಿಂತ ರೂ.40,000 ಹೆಚ್ಚುವರಿ ಬೆಲೆಯನ್ನು ಹೊಂದಿದ್ದು, ಹೊರ (Exterior) ಹಾಗೂ ಒಳ (Interior) ಭಾಗದಲ್ಲಿ ಕೆಲವೊಂದು ಕಾಸ್ಮೆಟಿಕ್ ಬದಲಾವಣಿಗಳನ್ನು ಪಡೆದುಕೊಂಡಿದೆ. 7 - 8 - ಆಸನ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.

ಈ ಲಿಮಿಟೆಡ್ ಎಡಿಷನ್ ಹೆಚ್ಚು-ಕಮ್ಮಿ ಇತರೆ ಟೊಯೊಟಾ ಇನ್ನೋವಾ ಹೈಕ್ರಾಸ್ ರೂಪಾಂತರದಂತೆಯೇ ಇದ್ದು, ಕೆಲವೊಂದು ಸೂಕ್ಶ್ಮ ಬದಲಾವಣೆಯನ್ನು ಮಾತ್ರ ಪಡೆದುಕೊಂಡಿದೆ. ಗ್ರಿಲ್ ಕೊಂಚ ಆಕರ್ಷಕವಾಗಿದ್ದು, ಮುಂಭಾಗ ಮತ್ತು ಹಿಂಭಾಗ ಬಂಪರ್ ಹೊಸ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಆದರೆ, ಟಾಪ್ ಎಂಡ್ ಮಾದರಿಗಳಂತೆ ಅಲಾಯ್ ವೀಲ್ಸ್ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.
ನೂತನ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ ಒಳಭಾಗದಲ್ಲಿ ಕೆಲವೊಂದು ಪ್ರಮುಖ ನವೀಕರಣಗಳನ್ನು ಪಡೆದಿದೆ. ಡ್ಯಾಶ್‌ಬೋರ್ಡ್ ಹಾಗೂ ಡೋರ್ ಟ್ರಿಮ್ ನವೀನವಾದ ಸಾಫ್ಟ್-ಟಚ್, ಚೆಸ್ಟ್‌ನಟ್ ಬ್ರೌನ್ ಫಿನಿಷಿಂಗ್ ಒಳಗೊಂಡಿದೆ. ವಿಂಡೋ ಕಂಟ್ರೋಲ್ ಸುತ್ತಲೂ ಹೊಸದಾದ ಫಾಕ್ಸ್ ವುಡ್ ಟ್ರಿಮ್ ಇದೆ. ಜೊತೆಗೆ ಫ್ಯಾಬ್ರಿಕ್ ಸೀಟ್ ಕವರ್‌ನಲ್ಲಿ ಡ್ಯುಯಲ್-ಟೋನ್ ಬ್ಲ್ಯಾಕ್ & ಬ್ರೋನ್ ಫಿನಿಷಿಂಗ್ ಇದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 2.0 - ಲೀಟರ್ ನ್ಯಾಚುರಲ್ ಪೆಟ್ರೋಲ್ ಎಂಜಿನ್ ಹೊಂದಿದೆ. 172 hp ಗರಿಷ್ಠ ಪವರ್ ಹಾಗೂ 205 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿದಾರಿಗೆ ಸಿಗುತ್ತದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಇತರೆ ರೂಪಾಂತರಗಳು ರೂ.18.82 ಲಕ್ಷದಿಂದ 30.26 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಜೊತೆಗೆ ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಇನ್ನೋವಾ ಹೈಕ್ರಾಸ್, 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿದೆ.
ನೂತನ ಟೊಯೊಟಾ ಇನ್ನೋವಾ ಹೈಕ್ರಾಸ್ ಜಿಎಕ್ಸ್ ಲಿಮಿಟೆಡ್ ಎಡಿಷನ್, ಹೆಬ್ರಿಡ್ ಆವೃತ್ತಿಯಾಗಿರಾದ ಹಿನ್ನೆಲೆ, ಕಡಿಮೆ ಬೆಲೆಯನ್ನು ಹೊಂದಿದ್ದು, ಇದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿ ಮಾಡಬಹುದು. ಈ ಮಾದರಿಯು ಡಿಸೆಂಬರ್ ತಿಂಗಳವರೆಗೆ ಇಲ್ಲವೇ ಸ್ಟಾಕ್ ಇರುವವರೆಗೆ ಮಾತ್ರ ಖರೀದಿದಾರರಿಗೆ ಲಭ್ಯವಿರುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications