ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಟ್ರಯಂಫ್ ಸ್ಪೀಡ್ 400 ಬೈಕ್ ವಿತರಣೆ ಪ್ರಾರಂಭ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ಭಾರತದಲ್ಲಿ ಹೊಸದಾಗಿ ಬಿಡುಗಡೆಗೊಳಿಸಿದ ಟ್ರಯಂಫ್ ಸ್ಪೀಡ್ 400 ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಮುಂಬೈ, ಹೈದರಾಬಾದ್, ಮತ್ತು ಪುಣೆಯಂತಹ ನಗರಗಳಲ್ಲಿ ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ವಿತರಣೆ ಪ್ರಾರಂಭಿಸಿದ್ದಾರೆ. ಆದರೆ ಇತರ ನಗರಗಳಲ್ಲಿ ವಿತರಣೆಗಳು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಪ್ರಸ್ತುತ, ಈ ಹೊಸ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.33 ಲಕ್ಷವಾಗಿದೆ. ಈ ಟ್ರಯಂಫ್ ಸ್ಪೀಡ್ 400 ಬೈಕಿನ ಆನ್-ರೋಡ್ ಬೆಲೆ ದೆಹಲಿಯಲ್ಲಿ ರೂ.2.63 ಲಕ್ಷವಾಗಿದೆ. ಟ್ರಯಂಫ್ ಪ್ರಸ್ತುತ ಭಾರತದಲ್ಲಿ 15 ಡೀಲರ್‌ಶಿಪ್‌ಗಳನ್ನು ಹೊಂದಿದೆ. ಈ ಅಂಕಿಅಂಶವು ಅಕ್ಟೋಬರ್ ವೇಳೆಗೆ 50 ಡೀಲರ್‌ಶಿಪ್‌ಗಳಿಗೆ ಮತ್ತು ಮಾರ್ಚ್ 2024 ರ ವೇಳೆಗೆ 100 ಡೀಲರ್‌ಶಿಪ್‌ಗಳಿಗೆ ಏರುವ ನಿರೀಕ್ಷೆಯಿದೆ.

Triumph Speed 400

ಟ್ರಯಂಫ್ ಮೋಟಾರ್‌ಸೈಕಲ್‌ಗಳ ಈ 100 ಡೀಲರ್‌ಶಿಪ್‌ಗಳು ಭಾರತದ 80 ನಗರಗಳಲ್ಲಿ ಹರಡಿಕೊಂಡಿವೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಹೊಸ ಟ್ರಯಂಫ್ ಸ್ಪೀಡ್ 400 ಬೈಕಿಗೆ ಹೆಚ್ಚಿನ ಬೇಡಿಕೆಯಿದೆ ಮತ್ತು ಈ ಮೋಟಾರ್‌ಸೈಕಲ್‌ಗಾಗಿ ತಿಂಗಳಿಗೆ 5,000 ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ಬಜಾಜ್ ಹೇಳಿಕೊಂಡಿದೆ. ಬೈಕಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಬಜಾಜ್ ಉತ್ಪಾದನೆಯನ್ನು ಹೆಚ್ಚಿಸಲು ಸಜ್ಜಾಗಿದೆ.

ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ಈ ಬೈಕ್ ತನ್ನ 'ಟಿಯರ್-ಡ್ರಾಪ್' ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವೃತ್ತಾಕಾರದ ವಿನ್ಯಾಸದ ಅಂಶಗಳೊಂದಿಗೆ ಆಕರ್ಷಕವಾದ ನಿಯೋ-ರೆಟ್ರೊ ಥೀಮ್ ಅನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಸಾಕಷ್ಟು ಟ್ರಯಂಫ್ ವಿನ್ಯಾಸದ ಅಂಶಗಳೊಂದಿಗೆ ಆಕಷಕವಾಗಿದೆ.

Triumph Speed 400

ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ.

ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಸಸ್ಪೆಕ್ಷನ್ ಸಂಬಂಧಿಸಿದಂತೆ,ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಮತ್ತು ಟ್ವಿನ್-ಸೈಡೆಡ್ ಅಲ್ಯೂಮಿನಿಯಂ ಸ್ವಿಂಗರ್ಮ್‌ನೊಂದಿಗೆ ಫ್ರೇಮ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43mm USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್‌ನಿಂದ ಒಳಗೊಂಡಿದೆ.

Triumph Speed 400

ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಸಹಾಯವನ್ನು ಸಹ ಹೊಂದಿದೆ.ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನಲ್ಲಿ 17 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ.

ಈ ಬೈಕ್, ಫ್ರಂಟ್ 110/70 ಹಾಗೂ ರೇರ್ 150/60 ಅಳತೆಯ ಮೆಟ್ಜೆಲರ್ Sportec M9RR ಟೈಯರ್ಸ್ ಹೊಂದಿರುವುದು ವಿಶೇಷವಾಗಿದೆ. ಇನ್ನು ಟ್ರಯಂಫ್ ಕಂಪನಿಯೊಂದಿಗೆ ಬಜಾಬ್ ಕಂಪನಿ ಪಾಲುದಾರಿಕೆ ಹೊಂದಿರುವುದು ಗೊತ್ತೇ ಇದೆ. ಇನ್ನು ಮಹಾರಾಷ್ಟ್ರದ ಚಕನ್ ನಲ್ಲಿ ಬಜಾಬ್ ಆಟೋ ನೂತನವಾಗಿ ನಿರ್ಮಿಸಿರುವ 'ಚೇತಕ್ 2' ಎಂಬ ಹೆಸರಿನ ತಯಾರಿಕಾ ಘಟಕದಲ್ಲಿ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ನ 5000 ಯುನಿಟ್ ಗಳನ್ನು ಉತ್ಪಾದಿಸಲಾಗುತ್ತದೆ.

ಈ ಪ್ಲಾಂಟ್ 25,000 ಬೈಕ್ ರೆಡಿ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಟ್ರಯಂಫ್ ಕಂಪನಿ ಇವೆರೆಡು ಬೈಕ್‌ಗಳಿಗೆ ಎರಡು ವರ್ಷಗಳ ಅನ್-ಲಿಮಿಟೆಡ್ ಮೈಲೇಜ್ ವಾರಂಟಿಯನ್ನು ನೀಡುತ್ತಿದೆ. ಇನ್ನು ಅಂತರಾಷ್ಟ್ರೀಯ ಬ್ರಾಂಡ್ Triumph ಭಾರತೀಯ ಮಾರುಕಟ್ಟೆಗಾಗಿ ಮೊದಲ ಬಾರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಪೀಡ್ 400 ಬೈಕ್ ಅನ್ನು ಪರಿಚಯಿಸಿದ್ದು, ಟ್ರಯಂಫ್ ಅಭಿಮಾನಿಗಳಿಗಳಲ್ಲಿ ನಿರೀಕ್ಷೆಗಳು ಕೂಡ ಹೆಚ್ಚಾಗಿವೆ.

More from DriveSpark

Article Published On: Friday, August 4, 2023, 8:30 [IST]
English summary
New triumph speed 400 deliveries commence in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+