ಡೀಲರ್ ಬಳಿ ತಲುಪಿದ ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಟ್ರಯಂಫ್ ಸ್ಪೀಡ್ 400

ಬಜಾಜ್ ಜೊತೆಗೆ ಟ್ರಯಂಫ್ ಮೋಟಾರ್‌ಸೈಕಲ್ಸ್ ಲಿಮಿಟೆಡ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಎರಡು ಹೊಸ ಬೈಕ್ ಗಳನ್ನು ಬಿಡುಗಡೆಗೊಳಿಸಿತು. ಇದು ಟ್ರಯಂಫ್ ಸ್ಪೀಡ್ 400 ಮತ್ತು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಆಗಿದೆ. ಇವುಗಳಲ್ಲಿ ಸ್ಪೀಡ್ 400 ಬೈಕ್ ಈಗಾಗಲೇ ಡೀಲರ್ ಬಳಿ ತಲುಪಲು ಪ್ರಾರಂಭವಾಗಿದ್ದು, ಆದರೆ ಸ್ಕ್ರ್ಯಾಂಬ್ಲರ್ 400X ಅಕ್ಟೋಬರ್ ತಿಂಗಳಿನಿಂದ ಲಭ್ಯವಿರುತ್ತದೆ.

ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕಿನ ಬೆಲೆಯು ರೂ.2.33 ಲಕ್ಷವಾಗಿದೆ. ಇನ್ನು ಈ ಬೈಕಿನ ಪರಿಚಯಾತ್ಮಕ ಬೆಲೆಯು ರೂ.2.23 ಲಕ್ಷವಾಗಿತ್ತು. ಟ್ರಯಂಫ್ ಸ್ಪೀಡ್ 400 ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟ್ರಯಂಫ್ ಇಂಡಿಯಾದ ಅಧಿಕೃತ ಸೈಟ್‌ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹಿಂದೆ ಬೈಕಿನ ಬುಕ್ಕಿಂಗ್ ಟೋಕನ್ ಮೊತ್ತ ರೂ.2,000 ಆಗಿತ್ತು ಇತ್ತೀಚೆಗೆ ರೂ.10,000ಕ್ಕೆ ಹೆಚ್ಚಿಸಿದೆ.

Triumph Speed 400

ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ.

ಇನ್ನು ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ಈ ಬೈಕ್ ತನ್ನ 'ಟಿಯರ್-ಡ್ರಾಪ್' ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವೃತ್ತಾಕಾರದ ವಿನ್ಯಾಸದ ಅಂಶಗಳೊಂದಿಗೆ ಆಕರ್ಷಕವಾದ ನಿಯೋ-ರೆಟ್ರೊ ಥೀಮ್ ಅನ್ನು ಹೊಂದಿದೆ. ಇನ್ನು ಈ ಹೊಸ ಬೈಕ್ ಸಾಕಷ್ಟು ಟ್ರಯಂಫ್ ವಿನ್ಯಾಸದ ಅಂಶಗಳನ್ನು ಸಹ ಒಳಗೊಂಡಿದೆ.

ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನ ಸಸ್ಪೆಕ್ಷನ್ ಸಂಬಂಧಿಸಿದಂತೆ,ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಮತ್ತು ಟ್ವಿನ್-ಸೈಡೆಡ್ ಅಲ್ಯೂಮಿನಿಯಂ ಸ್ವಿಂಗರ್ಮ್‌ನೊಂದಿಗೆ ಫ್ರೇಮ್ ಅನ್ನು ಹೊಂದಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 43mm USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್‌ನಿಂದ ನೋಡಿಕೊಳ್ಳಲಾಗುತ್ತದೆ.

ಇನ್ನು ಟ್ರಯಂಫ್ ಸ್ಪೀಡ್ 400 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ABS ಸಹಾಯವನ್ನು ಸಹ ಹೊಂದಿದೆ.ಈ ಹೊಸ ಟ್ರಯಂಫ್ ಸ್ಪೀಡ್ 400 ಬೈಕಿನಲ್ಲಿ 17 ಇಂಚಿನ ಅಲಾಯ್ ವೀಲ್ಸ್ ಪಡೆದಿದೆ.

ಈ ಬೈಕ್, ಫ್ರಂಟ್ 110/70 ಹಾಗೂ ರೇರ್ 150/60 ಅಳತೆಯ ಮೆಟ್ಜೆಲರ್ Sportec M9RR ಟೈಯರ್ಸ್ ಹೊಂದಿರುವುದು ವಿಶೇಷವಾಗಿದೆ. ಇನ್ನು ಟ್ರಯಂಫ್ ಕಂಪನಿಯೊಂದಿಗೆ ಬಜಾಬ್ ಕಂಪನಿ ಪಾಲುದಾರಿಕೆ ಹೊಂದಿರುವುದು ಗೊತ್ತೇ ಇದೆ. ಇನ್ನು ಮಹಾರಾಷ್ಟ್ರದ ಚಕನ್ ನಲ್ಲಿ ಬಜಾಬ್ ಆಟೋ ನೂತನವಾಗಿ ನಿರ್ಮಿಸಿರುವ 'ಚೇತಕ್ 2' ಎಂಬ ಹೆಸರಿನ ತಯಾರಿಕಾ ಘಟಕದಲ್ಲಿ ಟ್ರಯಂಫ್ ಸ್ಪೀಡ್ 400, ಸ್ಕ್ರ್ಯಾಂಬ್ಲರ್ 400 X ಬೈಕ್ ನ 5000 ಯುನಿಟ್ ಗಳನ್ನು ಉತ್ಪಾದಿಸಲಾಗುತ್ತದೆ.

ಈ ಪ್ಲಾಂಟ್ 25,000 ಬೈಕ್ ರೆಡಿ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಟ್ರಯಂಫ್ ಕಂಪನಿ ಇವೆರೆಡು ಬೈಕ್‌ಗಳಿಗೆ ಎರಡು ವರ್ಷಗಳ ಅನ್-ಲಿಮಿಟೆಡ್ ಮೈಲೇಜ್ ವಾರಂಟಿಯನ್ನು ನೀಡುತ್ತಿದೆ. ಇನ್ನು ಅಂತರಾಷ್ಟ್ರೀಯ ಬ್ರಾಂಡ್ Triumph ಭಾರತೀಯ ಮಾರುಕಟ್ಟೆಗಾಗಿ ಮೊದಲ ಬಾರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಪೀಡ್ 400 ಬೈಕ್ ಅನ್ನು ಪರಿಚಯಿಸಿದ್ದು, ಟ್ರಯಂಫ್ ಅಭಿಮಾನಿಗಳಿಗಳಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

More from DriveSpark

Article Published On: Wednesday, July 26, 2023, 11:42 [IST]
English summary
New triumph speed 400 first batch dispatched to dealers details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+