Okaya EV benefits: ಒಕಾಯಾದಿಂದ ಭರ್ಜರಿ ಸಿಹಿಸುದ್ದಿ.. ಕ್ಯಾಶ್‌ಬ್ಯಾಕ್, ವಿದೇಶಿ ಪ್ರವಾಸಕ್ಕೆ ಆಫರ್

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದ್ದು, ವಿವಿಧ ಕಂಪನಿಗಳು ತಮ್ಮ ಮಾರಾಟವನ್ನು ದ್ವಿಗುಣಗಳಿಸಲು ಆಕರ್ಷಕ ರಿಯಾಯಿತಿ ಪ್ರಯೋಜನ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತವೆ. ಅದರಲ್ಲಿಯೂ ಈಗಷ್ಟೇ ಮುನ್ನೆಲೆಗೆ ಬರುತ್ತಿರುವ 'ಒಕಾಯಾ' ಕೂಡ ಹಿಂದೆ ಬಿದ್ದಿಲ್ಲ.

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಳ್ಳುತ್ತಿರುವ ಒಕಾಯಾ ಇವಿ (Okaya EV) ಏಪ್ರಿಲ್ ತಿಂಗಳ ರಿಯಾಯಾತಿ ಪ್ರಯೋಜನಗಳನ್ನು ಘೋಷಿಸಿದೆ. ಒಕಾಯಾದ ಇ-ಸ್ಕೂಟರ್‌ನ ಟೆಸ್ಟ್ ಡ್ರೈವ್‌ನೊಂದಿಗೆ ಡಿಸ್ಕೌಂಟ್ ಕೂಪನ್‌ ದೊರೆಯಲಿದ್ದು, ಅದು ರೂ.1,750 ವರೆಗೆ ಪ್ರಯೋಜನವನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ಅರ್ಹ ಗ್ರಾಹಕರಿಗೆ ರೂ.5000 ವರೆಗೆ ಕ್ಯಾಶ್‌ಬ್ಯಾಕ್ ಅಥವಾ ಥೈಲ್ಯಾಂಡ್ ಪ್ರವಾಸಕ್ಕೆ ತೆರಳುವ ಅವಕಾಶ ದೊರೆಯಲಿದೆ.

Okaya EV benefits: ಒಕಾಯಾದಿಂದ ಭರ್ಜರಿ ಸಿಹಿಸುದ್ದಿ.. ಕ್ಯಾಶ್‌ಬ್ಯಾಕ್, ವಿದೇಶಿ ಪ್ರವಾಸಕ್ಕೆ ಆಫರ್

ಸದ್ಯ, ಈ ರಿಯಾಯಿತಿ ಪ್ರಯೋಜನಗಳನ್ನು ಒಕಾಯಾ ಕಂಪನಿ, ತನ್ನೆಲ್ಲ ಸ್ಕೂಟರ್‌ ಮಾದರಿಗಳಿಗೆ ನೀಡುತ್ತಿದೆ. ಇವೆಲ್ಲ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಟ್ಟು ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿವೆ. ಅವುಗಳೆಂದರೆ, ಮೆಟಾಲಿಕ್ ಬ್ಲಾಕ್, ಮೆಟಾಲಿಕ್ ಸಯಾನ್, ಮ್ಯಾಟ್ ಗ್ರೀನ್, ಮೆಟಾಲಿಕ್ ಗ್ರೇ, ಮೆಟಾಲಿಕ್ ಸಿಲ್ವರ್ ಹಾಗೂ ಮೆಟಾಲಿಕ್ ವೈಟ್. ಬೆಲೆ ವಿಚಾರವಾಗಿ ಹೇಳುವುದಾದರೆ, ಒಕಾಯಾ ಸ್ಕೂಟರ್‌ಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿಯೇ ಸಿಗಲಿವೆ.

ಟೆಸ್ಟ್ ಡ್ರೈವ್‌ ಆಫರ್‌ಗಳು ಏಪ್ರಿಲ್ 30 ರವರೆಗೆ ಮಾತ್ರ ದೊರೆಯಲಿದೆ. ಆಸಕ್ತರು, ಫೇಸ್‌ಬುಕ್/ಇನ್‌ಸ್ಟಾಗ್ರಾಮ್ ಮೂಲಕ ಟೆಸ್ಟ್ ಡ್ರೈವ್ ಅಪ್ಲಿಕೇಶನ್ ಸಲ್ಲಿಸಿದರೆ ಮಾತ್ರ ಅದು ಮಾನ್ಯವಾಗಿರುತ್ತದೆ. ಜೊತೆಗೆ ಗ್ರಾಹಕರು ಡೀಲರ್ ಜೊತೆ ಟೆಸ್ಟ್ ಡ್ರೈವ್‌ನ ಸೆಲ್ಫಿ ತೆಗೆದುಕೊಳ್ಳಬೇಕು. #ridewithokayaev ಹ್ಯಾಶ್ ಟ್ಯಾಗ್ ಬಳಸಿ, ತಮ್ಮ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಬೇಕು.

ಇದಲ್ಲದೆ, ದೇಶಾದ್ಯಂತ ಒಕಾಯಾ ಕಾರ್ನೀವಲ್ ಆಫರ್ಸ್ ಸಹ ನಡೆಯುತ್ತಿದ್ದು, ಕಂಪನಿಯ ಯಾವುದೇ ಅಧಿಕೃತ ಡೀಲರ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಮೂಲಕ ನೀವು ಭಾಗವಹಿಸಬಹುದು. ಒಕಾಯಾ ಕಡೆಯಿಂದ ಪ್ರತಿಯೊಬ್ಬ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸಲಾಗುತ್ತದೆ. ಅದರಲ್ಲಿ ಮಾಹಿತಿ ನಮೂದಿಸಿದರೆ, ಬಹುಮಾನದ ವಿವರದ ಸ್ಕ್ರ್ಯಾಚ್ ಕಾರ್ಡ್ ದೊರೆಯುತ್ತದೆ. ಅದೃಷ್ಟಶಾಲಿಗಳಿಗೆ ವಿದೇಶಿ ಪ್ರವಾಸಕ್ಕೆ ಅವಕಾಶ ಅಥವಾ ಕ್ಯಾಶ್‌ಬ್ಯಾಕ್ ಸಿಗುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಒಕಾಯಾ ಮಾರಾಟ ಮಾಡುತ್ತಿರುವ ವಿವಿಧ ಸ್ಕೂಟರ್‌ಗಳ ಬಗ್ಗೆ ಒಂದಷ್ಟು ವಿವರವನ್ನು ತಿಳಿಯೋಣ. ಫಾಸ್ಟ್ ಎಫ್4 ಇ-ಸ್ಕೂಟರ್ ರೂ.1,13,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 140-160 Km ರೇಂಜ್ ನೀಡಲಿದೆ. ಫಾಸ್ಟ್ ಎಫ್3 ಇ-ಸ್ಕೂಟರ್, ರೂ.99,999ಕ್ಕೆ ಸಿಗಲಿದ್ದು, 3.53 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿದ್ದು, 125 Km ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ.

ಒಕಾಯಾ ಎಫ್2ಎಫ್ ಎಲೆಕ್ಟ್ರಿಕ್ ಸ್ಕೂಟರ್ ರೂ.83,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, 70-80 km ರೇಂಜ್ ನೀಡಲಿದೆ. 55 km/h ಟಾಪ್ ಸ್ವೀಡ್ ಹೊಂದಿದೆ. ಕ್ಲಾಸಿಕ್ ಕ್ಯೂ ಪ್ಲಸ್ ಇ-ಸ್ಕೂಟರ್ ರೂ.74,500 ದರದಲ್ಲಿ ದೊರೆಯಲಿದ್ದು, 60-70 km ರೇಂಜ್ ನೀಡಲಿದೆ. 4-5 ಗಂಟೆಗಳಲ್ಲಿ ಇದರ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುತ್ತದೆ. ಫ್ರೀಡಮ್ ಇ-ಸ್ಕೂಟರ್, ರೂ.74,900 ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 70-75 km ರೇಂಜ್ ನೀಡಲಿದೆ.

ಒಟ್ಟಾರೆ ದೇಶೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ಉತ್ತಮ ರೇಂಜ್ ನೀಡುವ ಸ್ಕೂಟರ್ ಮಾರಾಟ ಮಾಡುವ ಒಕಾಯಾ, ಇದೀಗ, ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಈ ತಿಂಗಳಲ್ಲಿಯೂ ಟೆಸ್ಟ್ ಡ್ರೈವ್‌, ಕ್ಯಾಶ್‌ಬ್ಯಾಕ್ ಸೇರಿದಂತೆ ವಿವಿಧ ಆಫರ್ಸ್ ಘೋಷಿಸಿದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಒಕಾಯಾ ಡೀಲರ್ ಶಿಪ್ ಗೆ ಭೇಟಿ ನೀಡಿರಿ.

More from DriveSpark

Article Published On: Thursday, April 13, 2023, 13:12 [IST]
English summary
Okaya ev announces benefits in april
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+