Ola: 89 ಸಾವಿರ ರೂ. ಇವಿಗೆ ಮನಸೋತ ಜನ.. ಹಬ್ಬಕ್ಕೆ ಸರಿಯಾದ ಬುಕಿಂಗ್ಸ್ ಬಾಚಿಕೊಂಡ ಓಲಾ!

ಭಾರತದ ಜನಪ್ರಿಯ EV ತಯಾರಕ ಕಂಪನಿಯಾದ Ola ಎಲೆಕ್ಟ್ರಿಕ್ ನವೆಂಬರ್ ತಿಂಗಳ ಮಾರಾಟವನ್ನು ಪ್ರಕಟಿಸಿದೆ. ಹಬ್ಬದ ಬೇಡಿಕೆಯ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ಪ್ರಕಟಿಸಿದೆ. ನವೆಂಬರ್ ತಿಂಗಳಲ್ಲಿ ಬರೋಬ್ಬರಿ 30 ಸಾವಿರ ಬುಕಿಂಗ್‌ಗಳನ್ನು (ವಾಹನ್ ಡೇಟಾದ ಪ್ರಕಾರ) ಗಳಿಸಿದೆ.

ಶೇ 30 ರಷ್ಟು ಪ್ರಭಾವಶಾಲಿ ತಿಂಗಳ ಬೆಳವಣಿಗೆ ಮತ್ತು ಶೇ 82 ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ, ಕಂಪನಿಯು ನವೆಂಬರ್‌ನಲ್ಲಿ ಶೇ35 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ EV ಸ್ಕೂಟರ್ ವಿಭಾಗದಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ. ಒಟ್ಟಾರೆ ಇತರ ಎಲೆಕ್ಟ್ರಿಕ್ ವಾಹನ ಕಂಪನಿಗಳನ್ನು ಹಿಂದಿಕ್ಕಿ ಎಂದಿನಂತೆ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ola-achieves-all-time-high-registrations-of-30k-units-in-november

Ola ಎಲೆಕ್ಟ್ರಿಕ್ ಕಂಪನಿಯು ಸೆಪ್ಟೆಂಬರ್ 2022 ರಿಂದ ಕಳೆದ ಐದು ಸತತ ತ್ರೈಮಾಸಿಕಗಳಲ್ಲಿ ತನ್ನ ಅಗ್ರ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ. ಕಂಪನಿಯ ಎಲ್ಲಾ ಹೊಸ ಮತ್ತು ವಿಸ್ತರಿತ S1 ಸ್ಕೂಟರ್ ಪೋರ್ಟ್‌ಫೋಲಿಯೊ ಪ್ರಾರಂಭವಾದಾಗಿನಿಂದ ಪ್ರಚಂಡ ಪ್ರತಿಕ್ರಿಯೆಯನ್ನು ಕಂಡಿರುವುದಾಗಿ ಓಲಾ ಹೇಳಿಕೊಂಡಿದೆ.

ಇದಲ್ಲದೆ, Ola S1 Pro ಮತ್ತು S1 ಏರ್ ಉತ್ತಮ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ನೆಚ್ಚಿನ ಆಯ್ಕೆಯಾಗಿ ಹೊರಹೊಮ್ಮಿದೆ. ಪ್ರಭಾವಶಾಲಿ ಕಾರ್ಯಕ್ಷಮತೆ ಮತ್ತು ಕೊಡುಗೆಗಳೊಂದಿಗೆ, S1 Pro ಮತ್ತು S1 ಏರ್ ಎರಡೂ ಆಯಾ ವಿಭಾಗಗಳಲ್ಲಿ ಅತ್ಯುತ್ತಮ EV ಪ್ರತಿಪಾದನೆಗಳಾಗಿವೆ. ಭಾರತದ EV ಅಳವಡಿಕೆಗೆ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಎಂದು ಕಂಪನಿ ತಿಳಿಸಿದೆ.

ola-achieves-all-time-high-registrations-of-30k-units-in-november

ಈ ಮೈಲಿಗಲ್ಲಿನ ಕುರಿತು ಮಾತನಾಡಿದ ಓಲಾ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಂಶುಲ್ ಖಂಡೇಲ್ವಾಲ್, "ದೃಢವಾದ ಮಾರಾಟವು ನಮ್ಮ ಬ್ರ್ಯಾಂಡ್ ಮತ್ತು ನಮ್ಮ ಬಲವಾದ ಉತ್ಪನ್ನ ಶ್ರೇಣಿಯಲ್ಲಿ ಗ್ರಾಹಕರು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ. ನಮ್ಮ ಅತ್ಯಧಿಕ ನೋಂದಣಿಗಳನ್ನು ದಾಖಲಿಸುವ ಮೂಲಕ ನಾವು ನಮ್ಮ ಗ್ರಾಹಕರ ಉನ್ನತ ಆಯ್ಕೆಯಾಗಿ ಸ್ಪಷ್ಟವಾಗಿ ಹೊರಹೊಮ್ಮಿದ್ದೇವೆ ಎಂದರು.

ಡಿಸೆಂಬರ್‌ ತಿಂಗಳಿನಲ್ಲೂ ಈ ಬೇಡಿಕೆ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ವರ್ಷಾಂತ್ಯವನ್ನು ಹೊಸ ದಾಖಲೆಗಳೊಂದಿಗೆ ಮುಗಿಸಲಿದ್ದೇವೆ. ಗ್ರೀನ್ ಮೊಬಿಲಿಟಿಯತ್ತ ಭಾರತದ ಪ್ರಯಾಣವನ್ನು ವೇಗಗೊಳಿಸಲು ಮತ್ತು ಸ್ಕೂಟರ್ ವಿಭಾಗದಲ್ಲಿ #EndICEAge (ಇಂಧನ ಚಾಲಿತ ವಾಹನಗಳ ಅಂತ್ಯ) ಗೆ ಹತ್ತಿರವಾಗಲು ನಮ್ಮ ಬದ್ಧತೆಯಲ್ಲಿ ನಾವು ಅಚಲರಾಗಿದ್ದೇವೆ ಎಂದು ಅಂಶುಲ್ ಹೇಳಿದರು.

ola-achieves-all-time-high-registrations-of-30k-units-in-november

ರೂ. 1,47,499 ಬೆಲೆಯ, S1 Pro (2 ನೇ ತಲೆಮಾರಿನ) Ola ಎಲೆಕ್ಟ್ರಿಕ್‌ನ ಪ್ರಮುಖ ಸ್ಕೂಟರ್ ಆಗಿದ್ದು, S1 Air ರೂ. 1,19,999 ಬೆಲೆಯಲ್ಲಿ ಲಭ್ಯವಿದೆ. Ola Electric ತನ್ನ ICE-ಕಿಲ್ಲರ್ ಉತ್ಪನ್ನವಾದ S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. ಅವುಗಳೆಂದರೆ S1 X+, S1 X (3kWh), ಮತ್ತು S1 X (2kWh) ವೈವಿಧ್ಯಮಯ ಆದ್ಯತೆಗಳೊಂದಿಗೆ ಸವಾರರ ಅಗತ್ಯತೆಗಳನ್ನು ಪೂರೈಸುತ್ತವೆ.

S1 X+ ಇದೀಗ ರೂ. 1,09,999 ರ ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. S1 X (3kWh) ಮತ್ತು S1 X (2kWh) ಬುಕಿಂಗ್ ಈಗ ರೂ. 999 ಕ್ಕೆ ಮಾತ್ರ ತೆರೆದಿದೆ. S1 X (3kWh) ಮತ್ತು S1 X (2kWh) ಸ್ಕೂಟರ್‌ಗಳು ಕ್ರಮವಾಗಿ ರೂ. 99,999 ಮತ್ತು ರೂ. 89,999 ರ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 1, 2023, 15:56 [IST]
English summary
Ola achieves all time high registrations of 30k units in november
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+