ಓಲಾ ಸ್ಕೂಟರ್‌ನಿಂದ 9 ತಿಂಗಳಲ್ಲಿ 1 ಲಕ್ಷ ರೂ. ಉಳಿಸಿದ ಡೆಲಿವರಿ ಬಾಯ್‌ಗೆ ಓಲಾ ಸಿಇಒ ಪ್ರಶಂಸೆ

ಓಲಾ ಎಲೆಕ್ಟ್ರಿಕ್ ಕಂಪನಿಯ ಸಿಇಒ ಭವಿಶ್ ಅಗರ್ವಾಲ್, ಇತ್ತೀಚೆಗೆ ಓಲಾ ಸ್ಕೂಟರ್‌ನಲ್ಲಿ ಕುಳಿತಿದ್ದ ಝೊಮಾಟೊ ಡೆಲಿವರಿ ಬಾಯ್ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಡೆಲಿವರಿ ಬಾಯ್ ತನ್ನ Ola EV ಸ್ಕೂಟರ್ ಅನ್ನು ಒಂಬತ್ತು ತಿಂಗಳು ಚಾಲನೆ ಮಾಡುವ ಮೂಲಕ 1 ಲಕ್ಷ ರೂ. ಉಳಿಸಿದ್ದಾರೆ ಎಂದು ಭವಿಶ್ ಹೇಳಿಕೊಂಡಿದ್ದಾರೆ.

ಸಿಇಒ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ‌ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದು, "ಸಂತೋಷ್ ಅವರನ್ನು ಟ್ರಾಫಿಕ್ ಜಂಕ್ಷನ್‌ನಲ್ಲಿ ಭೇಟಿಯಾದೆ. ತುಂಬಾ ಉದ್ಯಮಶೀಲ ವ್ಯಕ್ತಿ, 2 OlaElectric ಸ್ಕೂಟರ್‌ಗಳನ್ನು ಹೊಂದಿದ್ದಾರೆ. 50,000 ಕಿಮೀಗಳಿಗಿಂತ ಹೆಚ್ಚು ಓಡಿಸಿದ್ದಾರೆ. ನಮ್ಮ ಹೈಪರ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಮೊದಲನೆಯದು ಚಾರ್ಜ್ ಆಗುತ್ತಿರುವಾಗ ಎರಡನೆಯದನ್ನು ಚಾಲನೆ ಮಾಡುತ್ತಿದ್ದರು. ಕೇವಲ 9 ತಿಂಗಳಲ್ಲಿ ₹1 ಲಕ್ಷಕ್ಕೂ ಹೆಚ್ಚು ಉಳಿತಾಯ ಮಾಡಿದ್ದಾರೆ ಎಂದು ಭವಿಷ್ ಬರೆದುಕೊಂಡಿದ್ದಾರೆ.

ಓಲಾ ಸ್ಕೂಟರ್‌ನಿಂದ 9 ತಿಂಗಳಲ್ಲಿ 1 ಲಕ್ಷ ರೂ. ಉಳಿಸಿದ ಡೆಲಿವರಿ ಬಾಯ್‌ಗೆ ಓಲಾ ಸಿಇಒ ಪ್ರಶಂಸೆ

ಓಲಾ ಸಿಇಓ ಹೇಳಿಕೊಂಡಿರುವುದು ನಿಜವೇ ಆಗಿದ್ದಲ್ಲಿ ಈ ಏರುತ್ತಿರುವ ಇಂಧನ ವೆಚ್ಚಗಳೊಂದಿಗೆ ನಗರ ದಟ್ಟಣೆಯಲ್ಲಿ ಬಳಸಲು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಉತ್ತಮ ಆಯ್ಕೆಯಾಗಿವೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಚಾರ್ಜ್ ಮಾಡುವ ವೆಚ್ಚವು ಆಗಾಗ್ಗೆ ಇಂಧನ ತುಂಬಿಸುವುದಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಅಲ್ಲದೇ ಆಗಾಗ್ಗೆ ಸರ್ವಿಸ್ ಮಾಡಿಸುವ ಹಣವೂ ಉಳಿಯುತ್ತದೆ. ಒಟ್ಟಾರೆ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿಕೊಂಡರೆ ತುಂಬಾ ಲಾಭಗಳನ್ನು ಪಡೆಯಬಹುದು.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ MoveOS 3 ನವೀಕರಣವನ್ನು ಸಹ ಹೊರತಂದಿದೆ. ಓಲಾ ಎಲೆಕ್ಟ್ರಿಕ್ ಪ್ರಕಾರ, ಈ ನವೀಕರಣದೊಂದಿಗೆ ಸ್ಕೂಟರ್‌ಗಳು 50 ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಇತ್ತೀಚಿನ ಸಾಫ್ಟ್‌ವೇರ್ ಅಪ್‌ಡೇಟ್‌ನಲ್ಲಿ ಒಳಗೊಂಡಿರುವ ಪ್ರಮುಖ ಸುಧಾರಣೆಗಳಲ್ಲಿ ಒಂದು ಹೈಪರ್ಚಾರ್ಜಿಂಗ್ ಕೂಡ ಆಗಿದೆ. ಕೇವಲ 15 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 50 ಕಿಲೋಮೀಟರ್ ಡ್ರೈವಿಂಗ್ ರೇಂಜ್ ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಓಲಾ ಸ್ಕೂಟರ್‌ನಿಂದ 9 ತಿಂಗಳಲ್ಲಿ 1 ಲಕ್ಷ ರೂ. ಉಳಿಸಿದ ಡೆಲಿವರಿ ಬಾಯ್‌ಗೆ ಓಲಾ ಸಿಇಒ ಪ್ರಶಂಸೆ

ನವೀಕರಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೋಡುವುದಾದರೆ, ಹಿಲ್ ಅಸಿಸ್ಟ್ ಮತ್ತು ಪ್ರಾಕ್ಸಿಮಿಟಿ ಅನ್‌ಲಾಕ್ ಅನ್ನು ಒಳಗೊಂಡಿವೆ. ಬಳಕೆದಾರರು ತಮ್ಮ ಕೀಗಳನ್ನು ಬಳಸದೆಯೇ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನ್‌ಲಾಕ್ ಮಾಡಲು ಪ್ರಾಕ್ಸಿಮಿಟಿ ಅನ್‌ಲಾಕ್ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು. ಕಂಪನಿಯ ಪ್ರಕಾರ ಈ ವೈಶಿಷ್ಟ್ಯವು, ಮಾಲೀಕ ಹತ್ತಿರ ಬರುವುದನ್ನು ಪತ್ತೆಹಚ್ಚಿ ಅದು ಸ್ವತಃ ಅನ್ಲಾಕ್ ಆಗುತ್ತದೆ. ಮಾಲೀಕರು ದೂರ ಹೋದ ನಂತರ ಎಲೆಕ್ಟ್ರಿಕ್ ಸ್ಕೂಟರ್ ಸ್ವತಃ ಲಾಕ್ ಆಗುತ್ತದೆ.

ಪಾರ್ಟಿ ಮೋಡ್ ಇತ್ತೀಚಿನ ಅಪ್‌ಡೇಟ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಈ ಮೋಡ್ ಟೆಸ್ಲಾ ಅವರ ಡ್ಯಾನ್ಸ್ ಮೋಡ್ ಅನ್ನು ಆಧರಿಸಿದೆ ಎಂದು ತೋರುತ್ತದೆ. ಇದು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಲೈಟ್‌ಗಳನ್ನು ಸವಾರರು ಕೇಳುತ್ತಿರುವ ಸಂಗೀತದೊಂದಿಗೆ ಸಿಂಕ್ ಮಾಡುತ್ತದೆ. ಅಂದರೆ ಹಾಡಿಗೆ ತಕ್ಕಂತೆ ಸ್ಕೂಟರ್‌ನ ಲೈಟ್‌ಗಳು ಬೆಳಗುತ್ತವೆ. ಈ ನಿಯಂತ್ರಣವು ಸ್ಕೂಟರ್‌ನಲ್ಲಿ ಮತ್ತು ಕಂಪನಿಯ ಸ್ವಂತ ಸಾಫ್ಟ್‌ವೇರ್ ಮೂಲಕ ಲಭ್ಯವಿದೆ. MoveOS 3 ಅಪ್‌ಡೇಟ್‌ನಿಂದ Ola ಡ್ಯಾಶ್‌ಬೋರ್ಡ್‌ನಲ್ಲಿ ಕರೆಗಳನ್ನು ಸ್ವೀಕರಿಸಬಹುದು.

ಓಲಾ ಸ್ಕೂಟರ್‌ನಿಂದ 9 ತಿಂಗಳಲ್ಲಿ 1 ಲಕ್ಷ ರೂ. ಉಳಿಸಿದ ಡೆಲಿವರಿ ಬಾಯ್‌ಗೆ ಓಲಾ ಸಿಇಒ ಪ್ರಶಂಸೆ

ಗ್ರಾಹಕರು ತಮ್ಮ ಓಲಾ ಸ್ಕೂಟರ್‌ನಲ್ಲಿ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಮೊಬೈಲ್ ನೋಡಬೇಕಿಲ್ಲ, ಬದಲಿಗೆ ಡ್ಯಾಷ್‌ಬೋರ್ಡ್‌ ಸ್ಕ್ರೀನ್‌ನಲ್ಲಿ ಓಲಾ ಬಳಕೆದಾರರು ಈಗ ಸ್ಕೂಟರ್ ಸವಾರಿ ಮಾಡುವಾಗ ಸ್ವಯಂ-ಪ್ರತ್ಯುತ್ತರಿಸಲು ಸಾಧ್ಯವಾಗುತ್ತದೆ. Ola S1 ಸರಣಿಯು MoveOS 3 ನೊಂದಿಗೆ ಬೋಲ್ಟ್ ಮತ್ತು ವಿಂಟೇಜ್ ಮೂಡ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆದಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ವಿವಿಧ ರೆವ್ ಸೌಂಡ್‌ ಮತ್ತು ಸ್ಕ್ರೀನ್ ಥೀಮ್‌ಗಳನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಪ್ರಸ್ತುತ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ. 99,999 ರಿಂದ ಪ್ರಾರಂಭವಾಗುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Thursday, March 2, 2023, 8:30 [IST]
English summary
Ola ceo selfie with delivery boy who saved 1 lakh by ola scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+