Ola Electric: ಕೈಗೆಟುಕುವ ಮೊದಲ S1X ಇವಿ ಸ್ಕೂಟರ್ ಚಿತ್ರಗಳನ್ನು ಹಂಚಿಕೊಂಡ ಓಲಾ ಸಿಇಒ

ಇತ್ತಿಚೆಗೆ ಓಲಾ (Ola Electric) ತನ್ನ ಅತ್ಯಂತ ಕೈಗೆಟುಕುವ ಬೆಲೆಯ ಎಸ್ 1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿತ್ತು. ವಿತರಣೆಗಳನ್ನು ಶೀಘ್ರದಲ್ಲೆ ಪ್ರಾರಂಭಿಸಲಾಗುವುದು ಎಂದು ಸಿಇಓ ಭವಿಷ್ ಅಗರ್ವಾಲ್ ಅವರು ತಿಳಿಸಿದ್ದರು. ಅದರಂತೆ ಓಲಾ ಫ್ಯೂಚರ್ ಫ್ಯಾಕ್ಟರಿಯ ಮುಂದೆ ಮೊಟ್ಟಮೊದಲ S1X ಸ್ಕೂಟರ್‌ನಲ್ಲಿ ಅವರು ಕುಳಿತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ದೈತ್ಯ ಓಲಾ ಎಲೆಕ್ಟ್ರಿಕ್ ತನ್ನ ಹೊಸ ಅತ್ಯಂತ ಕೈಗೆಟುಕುವ ಬೆಲೆಯ ಓಲಾ ಎಸ್ 1 ಎಕ್ಸ್ ಅನ್ನು ಹೊರತಂದಿದೆ. ಮೊದಲ Ola S1X ಪ್ರೊಡಕ್ಷನ್ ಮಾದರಿಯನ್ನು ಭವಿಶ್ ಅಗರ್ವಾಲ್ ಅವರ X (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಲೈನ್ ಆಫ್ ಮೊದಲ S1X!! ನಮ್ಮ ಎಲ್ಲಾ S1 ಉತ್ಪನ್ನಗಳಲ್ಲಿ ನಾನು ಈ ವಿನ್ಯಾಸವನ್ನು ಹೆಚ್ಚು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ola-ceo-shares-pictures-affordable-first-s1x-ev

ಓಲಾ ಎಲೆಕ್ಟ್ರಿಕ್ ಹೊಸ S1X ಮಾದರಿಯನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. Ola ಎಲೆಕ್ಟ್ರಿಕ್ S1X ನ ಪರಿಚಯಾತ್ಮಕ ಬೆಲೆಯು ಆಫರ್ ಇದ್ದಾಗ ರೂ. 79,999 ಇತ್ತು, ಆದರೆ ಈಗ ಮಾದರಿಯ ಬೆಲೆಯು ರೂ. 89,999 ಆಗಿದೆ. ಡಿಸೈನ್ ವಿಷಯದಲ್ಲಿ Ola S1X ತನ್ನ ಹಿಂದಿನ ಮಾದರಿಗಳಂತೆಯೇ ಇದ್ದು ಬಣ್ಣಗಳಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಬಹುದು.

ಮೇಲೇ ತಿಳಿಸಿದ ಮೂರು ವೇರಿಯೆಂಟ್‌ಗಳು ಬ್ಯಾಟರಿ ಆಧಾರದ ಮೇಲೆ ಬೆಲೆಗಳು ಬದಲಾಗುತ್ತವೆ. 3 kWh ಬ್ಯಾಟರಿ ಹೊಂದಿರುವ S1X ಮಾದರಿಯು ಆಫರ್‌ನಲ್ಲಿ 89,999 ರೂ. ಇತ್ತು, ಆದರೆ ಈಗ ಇದರ ಬೆಲೆ 99,999 ರೂ. ಆಗಿದೆ ಕೊನೆಯದಾಗಿ, S1X+ ಮಾಡೆಲ್ ಪರಿಚಯಾತ್ಮಕ ಬೆಲೆಯ ಸಮಯದಲ್ಲಿ 99,999 ರೂ. ಇತ್ತು ಈಗ 1,09,999 ರೂ. ಆಗಿದೆ.

ola-ceo-shares-pictures-affordable-first-s1x-ev

ಓಲಾ ಎಲೆಕ್ಟ್ರಿಕ್‌ನ ಅತ್ಯಂತ ಕೈಗೆಟುಕುವ ಸ್ಕೂಟರ್ ಶ್ರೇಣಿಯು ಎಲ್‌ಇಡಿ ಡಿಆರ್‌ಎಲ್‌ನೊಂದಿಗೆ ಟ್ವಿನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಸಿಂಗಲ್-ಪೀಸ್ ಸೀಟ್, ದೊಡ್ಡ ಹೆಡ್‌ಲೈಟ್ ಕೌಲ್ ಮತ್ತು ಅದೇ ಕರ್ವಿ ಬಾಡಿಯೊಂದಿಗೆ ಬರುತ್ತದೆ. ಈ ಸ್ಕೂಟರ್‌ಗಳು ಮುಂಭಾಗದಲ್ಲಿ ಅದೇ ಟ್ವಿನ್ ಫೋರ್ಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಸಹ ಪಡೆದಿವೆ.

ಮೂಲ S1X ಮಾದರಿಯ ವಿಶೇಷಣಗಳಿಗೆ ಬರುವುದಾದರೆ, ಇದು 2 kWh ಬ್ಯಾಟರಿ ಮಾದರಿಯಾಗಿದೆ. ಇದು 2 kWh ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುತ್ತದೆ. ಇದು 2.7 kW ಮೋಟರ್‌ಗೆ ಸಂಯೋಜಿತವಾಗಿದೆ. ಈ ಬೇಸ್ ರೂಪಾಂತರದ ಗರಿಷ್ಠ ವೇಗವು ಸುಮಾರು 85 kmph ಆಗಿದೆ. ಇದು ಕಂಪನಿಯು ಹೇಳಿರುವಂತೆ ಇಕೋ ಮೋಡ್‌ನಲ್ಲಿ ಗರಿಷ್ಠ 85 ಕಿ.ಮೀ ರೇಂಜ್ ನೀಡುತ್ತದೆ. ಕಂಪನಿ ನೀಡುವ 350W ಚಾರ್ಜರ್‌ನೊಂದಿಗೆ ಬರುತ್ತದೆ.

ಟಾಪ್-ಸ್ಪೆಕ್ S1X+, 3 kWh ಬ್ಯಾಟರಿ ಮತ್ತು 2.7 kW ಮೋಟಾರ್‌ನೊಂದಿಗೆ ಬರುತ್ತದೆ. ಇದು 90 kmph ಗರಿಷ್ಠ ವೇಗ ಮತ್ತು 125 km ರೇಂಜ್ ನೀಡುತ್ತದೆ. OTA ಅಪ್‌ಡೇಟ್‌ಗಳು, ಮ್ಯೂಸಿಕ್ ಕಂಟ್ರೋಲ್, ರಿಮೋಟ್ ಬೂಟ್ ಲಾಕ್/ಅನ್‌ಲಾಕ್, ಬ್ಲೂಟೂತ್/GPS ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್, ಪ್ರಿಡಿಕ್ಟಿವ್ ಮೆಂಟೆನೆನ್ಸ್ ನಂತಹ ವೈಶಿಷ್ಟ್ಯಗಳು ಬರುತ್ತವೆ.

ಲೈನ್‌ಅಪ್‌ನಲ್ಲಿ ಮುಂದಿನದು 3 kWh ಬ್ಯಾಟರಿ ರೂಪಾಂತರವಾಗಿದೆ, ಇದು 2.7 kW ಮೋಟಾರ್‌ನೊಂದಿಗೆ ಬರುತ್ತದೆ. ಈ ಮಿಡ್-ಸ್ಪೆಕ್ ಮಾದರಿಯು ಇಕೋ ಮೋಡ್‌ನಲ್ಲಿ 90 kmph ಗರಿಷ್ಠ ವೇಗ ಮತ್ತು 125 km ನ ರೇಂಜ್ ನೀಡುತ್ತದೆ. ಇದು 3.5-ಇಂಚಿನ LCD ಮತ್ತು ಕೀಯೊಂದಿಗೆ ಸಜ್ಜುಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Wednesday, September 6, 2023, 17:41 [IST]
English summary
Ola ceo shares pictures affordable first s1x ev
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+