Ola ಸ್ಕೂಟರ್ ಖರೀದಿಸಬೇಕೇ.. ಇಲ್ಲಿದೆ ಬಿಗ್ ಗುಡ್‌ನ್ಯೂಸ್‌

ಭಾರತದಲ್ಲಿ ಓಲಾ (Ola) ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಎಸ್1 ಸರಣಿ ಸ್ಕೂಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇದೀಗ, ಕಂಪನಿ ತನ್ನ ಮಾರಾಟವನ್ನು ಪ್ರಮಾಣವನ್ನು ಮತ್ತಷ್ಟು ದ್ವಿಗುಣಗೊಳಿಸುವುದಕ್ಕೆ ಮುಂದಾಗಿದ್ದು, ಅದಕ್ಕಾಗಿ ಭರ್ಜರಿ ಸಿಹಿಸುದ್ದಿ ನೀಡಿದೆ.

ಇತ್ತೀಚೆಗೆ ಬೆಂಗಳೂರು ಮೂಲದ 'ಎಥರ್ ಎನರ್ಜಿ' ಎರಡನೇ ಹಂತದ ನಗರಗಳಲ್ಲಿ ಸೇಲ್ಸ್ ಹೆಚ್ಚಿಸಿಕೊಳ್ಳಲು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ ಕೊಂಡುಕೊಳ್ಳುವ ಗ್ರಾಹಕರಿಗಾಗಿ 60 ತಿಂಗಳ ಸಾಲ ಯೋಜನೆಯನ್ನು ಪ್ರಕಟಿಸಿತ್ತು. ಸದ್ಯ, ಓಲಾ ಎಲೆಕ್ಟ್ರಿಕ್ ಕೂಡ ಇದೇ ದಾರಿಯನ್ನು ಹಿಡಿದಿದ್ದು, ನೂತನ ಲೋನ್ ಪ್ಲಾನ್ ಅನ್ನು ಘೋಷಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Ola ಸ್ಕೂಟರ್ ಖರೀದಿಸಬೇಕೇ.. ಇಲ್ಲಿದೆ ಬಿಗ್ ಗುಡ್‌ನ್ಯೂಸ್‌

ಓಲಾ ಕಂಪನಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಲ್&ಟಿ ಫೈನಾನ್ಶಿಯಲ್ ಸರ್ವಿಸಸ್ ಸಹಭಾಗಿತ್ವದಲ್ಲಿ ತನ್ನ ನೂತನ ಎಸ್1 ಸ್ಕೂಟರ್ ಖರೀದಿಸುವ ಗ್ರಾಹಕರಿಗೆ, 60 ತಿಂಗಳವರೆಗೆ ಶೇಕಡ 6.99% ಬಡ್ಡಿ ದರದಲ್ಲಿ ಸಾಲ ಯೋಜನೆಯನ್ನು ಪ್ರಕಟಿಸಿದೆ. ಇದರಡಿ ಆಸಕ್ತ ಗ್ರಾಹಕರು ಯಾವುದೇ ಡೌನ್ ಪೇಮೆಂಟ್ ಪಾವತಿಸದೇ ಓಲಾ ಸ್ಕೂಟರ್ ಕೊಂಡುಕೊಳ್ಳಬಹುದು. ಕೈಗೆಟುಕುವ ದರದಲ್ಲಿ ಇಎಂಐ ಆಯ್ಕೆ ಇರುತ್ತದೆ.

ಬಹುತೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಸಾಲದ ಅವಧಿ 36 ತಿಂಗಳು ಇರುತ್ತದೆ. ವಿಶೇಷ ಸಂದರ್ಭದಲ್ಲಿ ಮಾತ್ರ 48 ತಿಂಗಳು ಲಭ್ಯವಿರುತ್ತದೆ. ಇದೀಗ, ಲೋನ್ ಕಟ್ಟುವ ಸಮಯವನ್ನು 60 ತಿಂಗಳಿಗೆ ವಿಸ್ತರಣೆ ಮಾಡಿರುವುದು ಗ್ರಾಹಕರಿಗೆ ಖುಷಿತಂದಿದೆ. ದೇಶಾದ್ಯಂತ ಓಲಾ 700ಕ್ಕೂ ಹೆಚ್ಚು ಅನುಭವ ಕೇಂದ್ರಗಳನ್ನು (experience centres) ಹೊಂದಿದ್ದು, ಅಲ್ಲಿ ಸಾಲದ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಬಹುದು.

ಈ ಬಗ್ಗೆ ಮಾತನಾಡಿರುವ ಓಲಾದ ಚೀಫ್ ಬ್ಯುಸಿನೆಸ್ ಆಫೀಸರ್ ಅಂಕುಶ್ ಅಗರ್ವಾಲ್ ಅವರು, 'ಕಂಪನಿಯ ಸ್ಕೂಟರ್ ಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲಿವೆ. ನಾವು ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಉತ್ತಮ ಪಾಲುದಾರಿಕೆಯನ್ನು ಹೊಂದಿದ್ದು, ಇದರಿಂದ ನಮ್ಮ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಎರಡನೇ ಹಂತದ ನಗರಗಳಲ್ಲಿ ವಹಿವಾಟು ವೃದಿಸುತ್ತದೆ' ಎಂದು ಹೇಳಿದ್ದಾರೆ.

ಇನ್ಮುಂದೆ ಓಲಾ ಕಂಪನಿ, ಎಸ್1 ಏರ್, ಎಸ್1 ಸರಣಿಯಲ್ಲಿ 2 kWh (ಎಸ್1 ಏರ್ 4 kWh ಸೇರಿದೆ) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೈಬಿಡುತ್ತಿದೆ ಎಂದು ವರದಿಯಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಎಸ್1 ಏರ್ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದ್ದು, FAME-II ಸಬ್ಸಿಡಿ ಸೇರಿದಂತೆ ರೂ.1.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ.

ಈ ಓಲಾ ಎಸ್1 ಏರ್ ಸಂಪೂರ್ಣ ಚಾರ್ಜಿನಲ್ಲಿ 125 km (IDC) ರೇಂಜ್ ನೀಡುತ್ತದೆ. 85 kmph ಟಾಪ್ ಸ್ವೀಡ್ ಹೊಂದಿದೆ. ಓಲಾ ಎಸ್1 ಸ್ಕೂಟರ್ ಕೂಡ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ರೂ.1.30 ಲಕ್ಷ ಶೋರೂಂ ದರದಲ್ಲಿ ಖರೀದಿದಾರರಿಗೆ ದೊರೆಯುತ್ತದೆ. ಫುಲ್ ಚಾರ್ಜಿನಲ್ಲಿ 128 km ರೇಂಜ್ ನೀಡುತ್ತದೆ. 95 kmph ಟಾಪ್ ಸ್ವೀಡ್ ಹೊಂದಿದೆ.

ಓಲಾ ಎಸ್1 ಪ್ರೊ, 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಪಡೆದಿದೆ. ಇದು, ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

More from DriveSpark

Article Published On: Saturday, June 17, 2023, 16:20 [IST]
English summary
Ola electric introduces 60 month loan scheme buyers details
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+