Ola Refund: ಓಲಾಗೆ ದೊಡ್ಡ ಆಘಾತ.. ಗ್ರಾಹಕರಿಗೆ 130 ಕೋಟಿ ರೂಪಾಯಿ ರೀಫಂಡ್, ಯಾಕೆ?
ಇತ್ತಿಚೆಗೆ ನಡೆದ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಓಲಾ ಎಲೆಕ್ಟ್ರಿಕ್ (Ola Electric) ಈ ಹಿಂದೆ, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನೊಂದಿಗೆ ಚಾರ್ಜಿಂಗ್ ಆಕ್ಸೆಸರೀಸ್/ ಆಫ್-ಬೋರ್ಡ್ ಚಾರ್ಜರ್‌ಗಳನ್ನು ಖರೀದಿಸಿದ ಗ್ರಾಹಕರಿಗೆ ರೂ.130 ಕೋಟಿ ಹಿಂದಿರುಗಿಸುವುದಾಗಿ ತಿಳಿಸಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಓಲಾ ಇಷ್ಟೊಂದು ದೊಡ್ಡ ಮೊತ್ತವನ್ನು ಮರುಪಾವತಿಸಲು ಒಪ್ಪಲು ಕಾರಣ, ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯ ನಡೆಸಿದ ತನಿಖೆಯಲ್ಲಿ ಚಾರ್ಜಿಂಗ್ ಆಕ್ಸೆಸರೀಸ್ ಗಳನ್ನು ಹೆಚ್ಚುವರಿ ಹಣ ಪಡೆದು ಕಂಪನಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇದು FAME (ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್) ಯೋಜನೆ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಭಾರತೀಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ (ARAI) ಪತ್ರ ಬರೆದಿರುವ ಓಲಾ ಕಂಪನಿ, ತನ್ನೆಲ್ಲ ಗ್ರಾಹಕರಿಗೆ ಹಣವನ್ನು ಮರುಪಾವತಿ ಮಾಡುವುದಾಗಿ ತಿಳಿಸಿದೆ. ಇದರಿಂದಾಗಿ ಯಾವುದೇ ರೀತಿಯಲ್ಲಿ ಕ್ರಮಕೈಗೊಳ್ಳದಿರಲು ಎಆರ್‌ಎಐ ತೀರ್ಮಾನಿಸಿದೆ. ಓಲಾ ಎಸ್1 ಪ್ರೊ ಸ್ಕೂಟರ್ ನೊಂದಿಗೆ ಆಫ್-ಬೋರ್ಡ್ ಚಾರ್ಜರ್‌ನ್ನು ಆಕ್ಸೆಸರೀಸ್ ಆಗಿ ಖರೀದಿಸಿದ (2019-20 ರಿಂದ ಮಾರ್ಚ್ 30, 2023) ಗ್ರಾಹಕರಿಗೆ ಸುಮಾರು ರೂ.9,000 ರಿಂದ ರೂ.19,000 ಹಣ ವಾಪಸ್ ಬರಲಿದೆ.
ದೇಶದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವುದರಿಂದ ಸರಿ ಸುಮಾರು 100,000 ಗ್ರಾಹಕರಿಗೆ ಹಣವನ್ನು ರೀಫಂಡ್ ಮಾಡಬೇಕಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಲಾ ಕಂಪನಿ ಸಿಇಒ ಭವಿಶ್ ಅಗರ್ವಾಲ್ ಅವರು 'ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತೇವೆ' ಎಂದು ಹೇಳಿದ್ದಾರೆ. ಜೊತೆಗೆ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವು ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿವೆ ಎಂದು ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ FAME ಮಾರ್ಗಸೂಚಿಯನ್ನು ಓಲಾ ಮಾತ್ರ ಉಲ್ಲಂಘನೆ ಮಾಡಿಲ್ಲ. ಎಥರ್ ಎನರ್ಜಿ, ಟಿವಿಎಸ್ ಮೋಟಾರ್ ಹಾಗೂ ಹೀರೋ ಮೋಟೊಕಾರ್ಪ್ ಕಂಪನಿಗಳು ಉಲ್ಲಂಘನೆ ಮಾಡಿದ್ದು, ಎಲ್ಲ ಕಂಪನಿಗಳು ಒಟ್ಟುಗೂಡಿ ಸರಿ ಸುಮಾರು ರೂ.288 ಕೋಟಿ ಮರು ಪಾವತಿಸಬೇಕಾಗಿದೆ. ಅದರಲ್ಲೂ ಎಥರ್ ಎನರ್ಜಿ ತನ್ನ 95,000 ಗ್ರಾಹಕರಿಗೆ ಓಲಾ ಕಂಪನಿಗಿಂತ ಹೆಚ್ಚಿನ ಹಣವನ್ನು ಪಾವತಿಸಬೇಕಾಗಿದೆ ಎಂದು ವರದಿಯಾಗಿದೆ.
ಸದ್ಯ, ಎಥರ್ ಎನರ್ಜಿ ರೂ.140 ಕೋಟಿ ವಾಪಸ್ ನೀಡಬೇಕು. ಟಿವಿಎಸ್ ಕಂಪನಿ ಮೇ 2022 ರಿಂದ ಮಾರ್ಚ್ 2023ರವೆರೆಗೆ ಐಕ್ಯೂಬ್ ಎಸ್ ಸ್ಕೂಟರ್ ಖರೀದಿಸಿದ 87,000 ಗ್ರಾಹಕರಿಗೆ ರೂ.15.61 ಕೋಟಿ ಮರು ಪಾತಿಸಬೇಕಾಗಿದೆ. ಜೊತೆಗೆ ಹೀರೋ ಮೋಟೊಕಾರ್ಪ್ ತನ್ನ ವಿಡಾ ವಿ1 ಪ್ಲಸ್ ಹಾಗೂ ವಿ1 ಪ್ರೊ ಖರೀದಿಸಿರುವ ಒಟ್ಟು 1,100 ಗ್ರಾಹಕರಿಗೆ ರೂ.2.23 ಕೋಟಿ ರೀಫಂಡ್ ಮಾಡಬೇಕಾಗಿದೆ.
FAME (ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್) ನಿಯಮ ಉಲ್ಲಂಘಿಸಿದ್ದಕ್ಕಾಗಿ ಪ್ರಮುಖ ಕಂಪನಿಗಳು ತಮ್ಮ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಮರುಪಾವತಿಸಬೇಕಾಗಿದೆ. ಈ ಬೆಳವಣಿಗೆ ನಡೆದ ಕೆಲವೇ ದಿನಗಳಲ್ಲಿ ಅಂದರೇ ಮೇ.3 ರಂದು ಹೀರೋ ಕಂಪನಿ ವಿ1 ಪ್ಲಸ್ ರೂಪಾಂತರದ ಬೆಲೆಯನ್ನು ರೂ.25 ಸಾವಿರ ಹಾಗೂ ವಿ1 ಪ್ರೊ ಬೆಲೆಯನ್ನು ರೂ.20 ಸಾವಿರ ಇಳಿಕೆ ಮಾಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








