Ola S1 Air: ಯಾರೂ ನಿರೀಕ್ಷಿಸಿರಲಿಲ್ಲ.. ಓಲಾ ಎಸ್1 ಏರ್ ಬುಕ್ಕಿಂಗ್‌ನಲ್ಲಿ ಸುನಾಮಿ

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric) ಶೇಕಡ 40% ಪಾಲನ್ನು ತನ್ನದಾಗಿಸಿಕೊಂಡು ಮೊದಲ ಸ್ಥಾನದಲ್ಲಿ ಮುಂದುವರಿದೆ. ಜುಲೈ ತಿಂಗಳಲ್ಲಿ 19,000 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 375% ಪ್ರಗತಿ ಸಾಧಿಸಿದೆ.

ಓಲಾ ಕಂಪನಿ ತನ್ನ ಅಗ್ಗದ ಬೆಲೆಯ ಎಸ್1 ಏರ್ (S1 Air) ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಅನ್ನು ಕಳೆದ ಗುರುವಾರ ಸಂಜೆಯಿಂದ ಆರಂಭವಾಗಿತ್ತು. ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ಈ ಸ್ಕೂಟರ್ ಬುಕ್ಕಿಂಗ್‌ನಲ್ಲಿ ಆರ್ಭಟಿಸುತ್ತಿದ್ದು, ಈವರೆಗೆ 50,000ಕ್ಕೂ ಗ್ರಾಹಕರು ಕಾಯ್ದಿರಿಸಿದ್ದಾರೆ. ಈ ಪರಿಪ್ರಮಾಣದಲ್ಲಿ ಖರೀದಿದಾರರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಂಪನಿಯು ಅಂದಾಜಿಸಿರಲಿಲ್ಲ ಎಂದು ಹೇಳಲಾಗಿದೆ.

Ola S1 Air: ಯಾರೂ ನಿರೀಕ್ಷಿಸಿರಲಿಲ್ಲ.. ಓಲಾ ಎಸ್1 ಏರ್ ಬುಕ್ಕಿಂಗ್‌ನಲ್ಲಿ ಸುನಾಮಿ

ಈ ಬಗ್ಗೆ ಮಾತನಾಡಿರುವ ಓಲಾ ಚೀಫ್ ಬ್ಯುಸಿನೆಸ್ ಆಫೀಸರ್ ಅಂಕುಶ್ ಅಗರ್ವಾಲ್ ಅವರು, 'ಕಂಪನಿ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಎಸ್1 ಏರ್, ಇಂಧನ ಚಾಲಿತ (ICE) ಸ್ಕೂಟರ್‌ಗಳಿಗೆ ಉತ್ತರವಾಗಿ ಬರುತ್ತಿದೆ. ಇದು, ICE ಚಾಲಿತ ವಾಹನಗಳ ಯುಗಾಂತ್ಯಕ್ಕೆ ನಾಂದಿಯಾಗುತ್ತಿದೆ. ಆಗಸ್ಟ್ ನಲ್ಲಿ ಎಸ್1 ಏರ್ ವಿತರಣೆಗಳು ಶುರುವಾಗಲಿದೆ ಎಂಬುದನ್ನು ತಿಳಿಸಲು ಹರ್ಷ ವ್ಯಕ್ತಪಡಿಸುತ್ತೇವೆ' ಎಂದು ಹೇಳಿದ್ದಾರೆ.

ಜುಲೈ 27ರಿಂದ ರೂ.1,09,999 ಆರಂಭಿಕ ಬೆಲೆಯಲ್ಲಿ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಅನ್ನು ಶುರು ಮಾಡಲಾಯಿತು. ಕೇವಲ ಮೂರು ಗಂಟೆಯಲ್ಲಿ 3,000ಕ್ಕೂ ಹೆಚ್ಚಿನ ಆರ್ಡರ್ ಪಡೆದುಕೊಳ್ಳುವ ಮೂಲಕ ಹೊಸದೊಂದು ದಾಖಲೆ ನಿರ್ಮಿಸಿತು. ಆದರೆ, ಈ ಬೆಲೆಯಲ್ಲಿ ಕಾಯ್ದಿರಿಸಲು ಜುಲೈ 30ರವರೆಗೆ ಮಾತ್ರ ಅವಕಾಶವಿದೆ. ಆ ಬಳಿಕ, (ಜುಲೈ 31) ರೂ.1,19,999 ದರವಿರುತ್ತದೆ ಎಂದು ಕಂಪನಿ ತಿಳಿಸಿತ್ತು.

ಬಹುತೇಕ ಗ್ರಾಹಕರು, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ.1,09,999 ದರದಲ್ಲಿ ಖರೀದಿಗೆ ನೀಡಬೇಕು ಎಂದು ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿದ ಕಂಪನಿಯು ಆಗಸ್ಟ್ 15 ವರೆಗೆ ಈ ಸ್ಕೂಟರ್ ಬುಕ್ಕಿಂಗ್ ಮಾಡುವವರಿಗೆ ಅದೇ ಬೆಲೆಯಲ್ಲಿ ನೀಡಲು ತೀರ್ಮಾನಿಸಿದೆ. ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಂಪನಿ ಹಲವು ಪರೀಕ್ಷೆಗೆ ಒಳಪಡಿಸಿ, ಅದು ಶಕ್ತಿಯುತವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ.

ಈ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಇದೇ ತಿಂಗಳ ಮೊದಲ ವಾರದಿಂದ ಪ್ರಾರಂಭವಾಗಲಿದ್ದು, ಆದಷ್ಟು ಬೇಗ ಗ್ರಾಹಕರ ಕೈಸೇರಲಿದೆ. ಎಸ್1 ಏರ್ 3 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ಇದರ ಹಬ್ ಮೋಟಾರ್ 6 hp ಪವರ್ ಉತ್ಪಾದಿಸುತ್ತದೆ. ಇದು, ಕೇವಲ 3.3 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಹೊಂದಲಿದ್ದು, 90 kmph ಟಾಪ್ ಸ್ವೀಡ್ ಪಡೆದಿದೆ.

ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸ್ಟೆಲ್ಲರ್ ಬ್ಲೂ, ಪೊರ್ಚೆಲೈನ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಹೊಂದಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಇನ್ನು, ಓಲಾ ಕಂಪನಿ ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಎಸ್1 ಏರ್ ಹಾಗೂ ಟಾಪ್ ಎಂಡ್ ಮಾದರಿಯಾಗಿ ಎಸ್1 ಪ್ರೊ ಮಾರಾಟ ಮಾಡಲು ತೀರ್ಮಾನ ಮಾಡಿದ್ದು, ಮಿಡ್ ಲೆವೆಲ್ ಆವೃತ್ತಿ ಎಸ್1 ಸೇಲ್ ಅನ್ನು ಕೈಬಿಟ್ಟಿದೆ. ಸದ್ಯ, ಓಲಾ ಎಸ್1 ಏರ್ ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ್ದು, ಈವರೆಗೆ 50,000ಕ್ಕೂ ಹೆಚ್ಚಿನ ಬುಕ್ಕಿಂಗ್ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Tuesday, August 1, 2023, 10:41 [IST]
English summary
Ola s1 air bookings 50000 crossed details
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+