ಕಡಿಮೆ ಬೆಲೆಯ ಓಲಾ S1 ಏರ್ ಸ್ಕೂಟರ್ ಬಗ್ಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಸಿಇಒ: ಏನದು?

ದೇಶೀಯ ಮಾರುಕಟ್ಟೆಯಲ್ಲಿ ಓಲಾ (Ola) ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿವೆ. ಕಂಪನಿಯು ಎಸ್1 ಸರಣಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ಕೈಗೆಟುಕುವ ಬೆಲೆಯ 'ಎಸ್1 ಏರ್' ಬಗ್ಗೆ ಸಿಇಒ ಭವಿಶ್ ಅಗರ್ವಾಲ್ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಹುತೇಕ ಗ್ರಾಹಕರು ಕಾಯುತ್ತಿರುವ 'ಓಲಾ ಎಸ್1 ಏರ್‌' ವಿತರಣೆಗಳು ಜುಲೈ ತಿಂಗಳಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಈ ಸ್ಕೂಟರ್ ಮೂರು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗಲಿದೆ. ಆದರೆ, ರೇಂಜ್ ಆಧರಿಸಿ, ಅವುಗಳ ಬೆಲೆ ಬೇರೆ - ಬೇರೆಯಾಗಿದೆ.

ಕಡಿಮೆ ಬೆಲೆಯ ಓಲಾ S1 ಏರ್ ಸ್ಕೂಟರ್ ಬಗ್ಗೆ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಸಿಇಒ: ಏನದು?

2kWh ಬ್ಯಾಟರಿ ಪ್ಯಾಕ್, 4.5kW ಮೋಟಾರ್ ಹೊಂದಿರುವ ಓಲಾ ಎಸ್1 ಏರ್‌ ಸ್ಕೂಟರ್ ರೂ.84,999 ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 85 km ರೇಂಜ್ ನೀಡಲಿದ್ದು, 85 km/h ಟಾಪ್ ಸ್ವೀಡ್ ಹೊಂದಿದೆ. 3kWh ಬ್ಯಾಟರಿ ಪ್ಯಾಕ್, 4.5kW ಮೋಟಾರ್ ಪಡೆದಿರುವ ಎಸ್1 ಏರ್‌ ಸ್ಕೂಟರ್, ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲಿದ್ದು, 85 km/h ಟಾಪ್ ಸ್ವೀಡ್ ಹೊಂದಿದೆ. ರೂ.99,999 ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ.

ದೊಡ್ಡದಾದ 4kWh ಬ್ಯಾಟರಿ ಪ್ಯಾಕ್, 4.5 kW ಮೋಟಾರ್ ಹೊಂದಿರುವ ಓಲಾ ಎಸ್1 ಏರ್‌ ಸ್ಕೂಟರ್, 165 km ರೇಂಜ್ ಕೊಡಲಿದ್ದು, 85 km/h ಟಾಪ್ ಸ್ವೀಡ್ ಪಡೆಯಲಿದೆ. ರೂ.1,09,999 ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇವೆಲ್ಲವೂ ಇಕೋ, ಸ್ಪೋರ್ಟ್ಸ್ ಹಾಗೂ ರಿವರ್ಸ್ ಎಂಬ ರೈಡಿಂಗ್ ಮೋಡ್ ಹೊಂದಿವೆ. ಕೇವಲ 4.3 ಸೆಕೆಂಡುಗಳಲ್ಲಿ 0 ಯಿಂದ 40 ಕಿಲೋಮೀಟರ್ ವೇಗವನ್ನು ಪಡೆಯಲಿವೆ.

ಓಲಾ ಎಸ್1 ಏರ್ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಸ್ಮಾರ್ಟ್‌ಫೋನ್ ಕನೆಕ್ಟ್ದ್ 7 ಇಂಚಿನ TFT ಸ್ಕ್ರೀನ್, ಜಿಪಿಎಸ್, ಮ್ಯೂಸಿಕ್ ಪ್ಲೇಬ್ಯಾಕ್, ಸೈಡ್ ಸ್ಟ್ಯಾಂಡ್ ಅಲರ್ಟ್‌, ರಿವರ್ಸ್ ಮೋಡ್, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ನಂತಹ ಹಲವು ವೈಶಿಷ್ಟ್ಯಗಳನ್ನು ಪಡೆದಿದ್ದು, ಕೋರಲ್ ಗ್ಲಾಮ್, ಜೆಟ್ ಬ್ಲ್ಯಾಕ್, ಲಿಕ್ವಿಡ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ.

ಓಲಾ ಎಸ್1 ಸ್ಕೂಟರ್, 2kWh, 3kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಕ್ರಮವಾಗಿ ರೂ.99,999 ಹಾಗೂ 1,09,999 ದರವನ್ನು ಹೊಂದಿವೆ. 91 km ನಿಂದ 141 km ರೇಂಜ್ ನೀಡಲಿವೆ. ಜೊತೆಗೆ ಒಂದೇ ರೀತಿಯ 90km/h ಟಾಪ್ ಸ್ವೀಡ್ ಹೊಂದಿವೆ. ಟಾಪ್ ಎಂಡ್ ಮಾದರಿ ಎಸ್1 ಪ್ರೊ, 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 81 km ರೇಂಜ್ ನೀಡಲಿದೆ. ರೂ.1,24,999 ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ಕಳೆದ ಏಪ್ರಿಲ್ ತಿಂಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ವರದಿ ಪ್ರಕಟಿಸಿದೆ. ಇದರಲ್ಲಿ ಓಲಾ ಕಂಪನಿ ಸ್ಕೂಟರ್ ಗಳೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಸೇಲ್ ಆಗಿವೆ. ಕಂಪನಿಯು ಬರೋಬ್ಬರಿ 21,882 ಯುನಿಟ್ ಸ್ಕೂಟರ್ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 12,708 ಯುನಿಟ್ ಮಾರಿತ್ತು.

ಒಟ್ಟಾರೆ, ಓಲಾ ಕಂಪನಿ, ತನ್ನ ಕಡಿಮೆ ಬೆಲೆಯ ಎಸ್1 ಏರ್ ಸ್ಕೂಟರ್ ವಿತರಣೆ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದು, ಅದರ ಅಭಿಮಾನಿಗಳಿಗೆ ಖುಷಿ ತಂದಿದೆ. ಓಲಾ ಕಂಪನಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮಾರುಕಟ್ಟೆಯಲ್ಲಿ ಎಥರ್, ಟಿವಿಎಸ್ ಹಾಗೂ ಹೀರೋ ಕಂಪನಿ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ. ಸದ್ಯ, ಹೊಸ ಸೇರ್ಪಡೆ ಎಂಬಂತೆ ಸಿಂಪಲ್ ಒನ್ ಬಂದಿದೆ.

More from DriveSpark

Article Published On: Wednesday, May 24, 2023, 17:14 [IST]
English summary
Ola s1 air e scooter delivery from july
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+