Ola: ಓಲಾದಿಂದ ಬಿಗ್ ಗುಡ್ ನ್ಯೂಸ್, ಎರಡೇ ದಿನ ಇರುತ್ತೆ.. ಮಿಸ್ ಮಾಡಿಕೊಳ್ಳಬೇಡಿ!

ಭಾರತದಲ್ಲಿ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಓಲಾ (Ola) ಜನಮನ್ನಣೆ ಗಳಿಸಿದೆ. ಇದೀಗ, ಕಂಪನಿಯು ತನ್ನ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಎಸ್1 ಏರ್ (S1 Air) ಬಗ್ಗೆ ಬಿಗ್ ಅಪ್ಡೇಟ್ ನೀಡಿದೆ. ಇದೇ ತಿಂಗಳ 28ರಿಂದ ಅದರ ಮಾರಾಟಗಳು ಶುರುವಾಗಲಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಓಲಾ ಕಂಪನಿ ಸಿಇಒ ಭವಿಶ್ ಅಗರ್ವಾಲ್ ಅವರು, 'ಜುಲೈ 28 ರಿಂದ 30ರವರೆಗೆ 'ಎಸ್1 ಏರ್ ಕಾಯ್ದಿರಿಸಿರುವ ಗ್ರಾಹಕರಿಗೆ ಈ ಸ್ಕೂಟರ್ ರೂ.1,09,999 ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ನೀವು ಜುಲೈ 31ರಿಂದ ಎಸ್1 ಏರ್ ಕೊಂಡುಕೊಳ್ಳಬೇಕು ಅಂದುಕೊಂಡರೆ ರೂ.1,19,999 ದರವಿರುತ್ತದೆ. ಆಗಸ್ಟ್ ಮೊದಲ ವಾರದಿಂದ ವಿತರಣೆಗಳು ಆರಂಭವಾಗಲಿದೆ' ಎಂದು ಹೇಳಿದ್ದಾರೆ.

Ola: ಓಲಾದಿಂದ ಬಿಗ್ ಗುಡ್ ನ್ಯೂಸ್, ಎರಡೇ ದಿನ ಇರುತ್ತೆ.. ಮಿಸ್ ಮಾಡಿಕೊಳ್ಳಬೇಡಿ!

ಓಲಾ ಎಸ್1 ಏರ್ 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ. ಇದರಲ್ಲಿ ಹಬ್ ಮೋಟಾರ್ ಬಳಕೆ ಮಾಡಲಾಗಿದ್ದು, 11.3 hp ಗರಿಷ್ಠ ಪವರ್ ಹಾಗೂ 58 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಂಪೂರ್ಣ ಚಾರ್ಜಿನಲ್ಲಿ 125 km ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ.

ಈ ಸ್ಕೂಟರ್ ಮೂರು ರೈಡಿಂಗ್ ಮೋಡ್ ಗಳನ್ನು ಪಡೆದಿದೆ. ಅವುಗಳೆಂದರೆ, ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, LED ಹೆಡ್‌ಲ್ಯಾಂಪ್, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್, ರಿಮೋಟ್ ಬೂಟ್ ಲಾಕ್/ಅನ್‌ಲಾಕ್ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಒಳಗೊಂಡಿದೆ.

ಓಲಾ ಎಸ್1 ಏರ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಟ್ವಿನ್ ಶಾಕ್ ಅಬ್ಸಾರ್ಬರ್‌ನ್ನು ಪಡೆದಿದೆ. ಬ್ರೇಕಿಂಗ್ ವಿಚಾರವಾಗಿ ಹೇಳುವುದಾದರೆ, ಫ್ರಂಟ್ ಹಾಗೂ ರೇರ್ ಡ್ರಮ್ ಬೇಕ್ ಆಯ್ಕೆಯನ್ನು ಹೊಂದಿದೆ. ಇತ್ತೀಚೆಗೆ ಕಂಪನಿಯು ಈ ಸ್ಕೂಟರ್ ಅನ್ನು 5 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಓಡಿಸುವ ಮೂಲಕ ಪರೀಕ್ಷಿಸಿತ್ತು.

ಸದ್ಯ, ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಓಲಾದ ಟಾಪ್ ಎಂಡ್ ಮಾದರಿ, ಎಸ್1 ಪ್ರೊ ಬಗ್ಗೆ ಹೇಳುವುದಾದರೆ, ಇದು, 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜಿನಲ್ಲಿ 181 km ರೇಂಜ್ ನೀಡುತ್ತದೆ. ಜಸ್ಟ್ 2.9 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಿಡ್ ಲೆವೆಲ್ ವೇರಿಯೆಂಟ್ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್, 3 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜಿನಲ್ಲಿ 141 km ರೇಂಜ್ ಕೊಡುತ್ತದೆ. ಇದು, ಕೇವಲ 3.8 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದ್ದು, 95 kmph ಟಾಪ್ ಸ್ವೀಡ್ ಹೊಂದಿದೆ. ರೂ.1.30 ಬೆಲೆಯಲ್ಲಿ ದೊರೆಯುತ್ತದೆ.

ಒಟ್ಟಾರೆ, ಓಲಾ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಎಸ್1 ಏರ್ ಎಲೆಕ್ಟ್ರಿಕ್ ಬಿಡುಗಡೆ ಮಾಡಿ, ಇತಿಹಾಸ ನಿರ್ಮಿಸಲು ಮುಂದಾಗಿದೆ. ಈ ಸ್ಕೂಟರ್ ಗೆ ಎಥರ್, ಟಿವಿಎಸ್ ಹಾಗೂ ಬಜಾಜ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ. ಈ ಸ್ಕೂಟರ್ ಮೂಲಕ ಓಲಾ, ಮಾರುಕಟ್ಟೆಯಲ್ಲಿಯೂ ಉತ್ತಮವಾಗಿ ಪ್ರಗತಿ ಕಾಣಲಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Saturday, July 22, 2023, 12:43 [IST]
English summary
Ola s1 air electric scooter sale from july 28 details
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+