ಬಹುನೀರಿಕ್ಷಿತ 'ಓಲಾ S1 ಏರ್' ಸ್ಕೂಟರ್‌ 3 ರೂಪಾಂತರಗಳಲ್ಲಿ ಬಿಡುಗಡೆ: ಕೇವಲ ರೂ.84,999ಕ್ಕೆ ಸಿಗುತ್ತೆ!

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ ಕಂಪನಿಗೆ ಸರಿಸಾಟಿಯೇ ಇಲ್ಲ. ಸದ್ಯ, ತನ್ನ ಎಸ್1 ಹಾಗೂ ಎಸ್1 ಏರ್ ಸ್ಕೂಟರ್‌ಗಳ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇನ್ಮುಂದೆ ಎಸ್1 ಏರ್ ಸ್ಕೂಟರ್ ಭಾರೀ ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಓಲಾದ ಎಂಟ್ರಿ ಲೆವೆಲ್ 'ಎಸ್1 ಏರ್' ಸ್ಕೂಟರ್ ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಬ್ಯಾಟರಿ ಪ್ಯಾಕ್ ಹಾಗೂ ರೇಂಜ್ ಆಧರಿಸಿ, ಅವುಗಳ ಎಕ್ಸ್ ಶೋರೂಂ ದರ ಬೇರೆ - ಬೇರೆಯಾಗಿದೆ. 2kWh ಬ್ಯಾಟರಿ ಪ್ಯಾಕ್, 4.5 kW ಮೋಟಾರ್, 85 km ರೇಂಜ್ ಹಾಗೂ 85 km/h ಟಾಪ್ ಸ್ವೀಡ್ ಹೊಂದಿರುವ 'ಎಸ್1 ಏರ್' ರೂ.84,999 ಬೆಲೆಯಲ್ಲಿ ಖರೀದಿಗೆ ದೊರೆತರೆ, 3kWh ಬ್ಯಾಟರಿ ಪ್ಯಾಕ್, 4.5 kW ಮೋಟಾರ್, 125 km ರೇಂಜ್ ಮತ್ತು 85 km/h ಗರಿಷ್ಠ ವೇಗ ಹೊಂದಿರುವ ಸ್ಕೂಟರ್ ರೂ.99,999 ದರದಲ್ಲಿ ಸಿಗಲಿದೆ.

ಸಿಎನ್‌ಜಿ ಕಾರಿನಿಂದ ಹೆಚ್ಚು ಹಣ ಉಳಿಸಬಹುದು: ಈ ಟಿಪ್ಸ್..

ಮತ್ತೊಂದು, 4kWh ಬ್ಯಾಟರಿ ಪ್ಯಾಕ್, 4.5 kW ಮೋಟಾರ್, 165 km ರೇಂಜ್ ಮತ್ತು 85 km/h ಟಾಪ್ ಸ್ವೀಡ್ ಪಡೆಯುವ ಓಲಾ ಎಸ್1 ಏರ್ ರೂ.1,09,999 ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. ಇನ್ನುಳಿದಂತೆ ಓಲಾ, ಎಸ್1 ಸ್ಕೂಟರ್ ನ ಹೊಸ ರೂಪಾಂತರವನ್ನು ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದ್ದು, 2kWh ಬ್ಯಾಟರಿ ಪ್ಯಾಕ್, 8.5 kW ಮೋಟಾರ್, 91 km ರೇಂಜ್ ಹಾಗೂ 90km/h ಗರಿಷ್ಠ ವೇಗ ಹೊಂದಿರುವ ಈ ಸ್ಕೂಟರ್ ರೂ.99,999 ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯಲಿರುವ ಓಲಾ ಎಸ್ 1, 3kWh ಬ್ಯಾಟರಿ, 8.5 kW ಮೋಟಾರ್, 141 km ರೇಂಜ್ ಹಾಗೂ 95km/h ಟಾಪ್ ಸ್ವೀಡ್ ಹೊಂದಿದ್ದು, ರೂ.1,09,999 ದರದಲ್ಲಿ ಖರೀದಿಗೆ ದೊರೆಯಲಿದೆ. ಓಲಾದ ಟಾಪ್ ಎಂಡ್ ಮಾದರಿ ಎಂದು ಗುರುತಿಸಿಕೊಂಡಿರುವ ಓಲಾ ಎಸ್1 ಪ್ರೊ ರೂ.129,999 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಇದು 4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 8.5 kW ಮೋಟಾರ್ ನಿಂದ ಕಾರ್ಯನಿರ್ವಹಿಸಲಿದೆ. ಗರಿಷ್ಠ 181 km ರೇಂಜ್ ನೀಡಲಿದ್ದು, 95km/h ಟಾಪ್ ಸ್ವೀಡ್ ಹೊಂದಿದೆ.

ಸಿಎನ್‌ಜಿ ಕಾರಿನಿಂದ ಹೆಚ್ಚು ಹಣ ಉಳಿಸಬಹುದು: ಈ ಟಿಪ್ಸ್..

ಓಲಾ ಎಸ್1 ಏರ್ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಕೋರಲ್ ಗ್ಲಾಮ್, ನಿಯೋ ಮಿಂಟ್, ಪೊರ್ಚೆಲೈನ್ ವೈಟ್, ಜೆಟ್ ಬ್ಲಾಕ್ ಮತ್ತು ಲಿಕ್ವಿಡ್ ಸಿಲ್ವರ್‌ ಬಣ್ಣಗಳಲ್ಲಿ ಲಭ್ಯವಿದೆ. ಕಂಪನಿಯು ಈಗಾಗಲೇ ತನ್ನ ಗ್ರಾಹಕರಿಗಾಗಿ ಬುಕಿಂಗ್ ಆರಂಭ ಮಾಡಿದ್ದು, ಆಸಕ್ತರು ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡುವ ಮೂಲಕ ರೂ.999 ಪಾವತಿಸಿ, ಬುಕ್ ಮಾಡಬಹುದು. ಹೊಸ ಓಲಾ ಎಸ್1 ಸ್ಕೂಟರ್ ವಿತರಣೆಗಳು ಮಾರ್ಚ್ ತಿಂಗಳಿಂದ ಆರಂಭವಾದರೆ, ಓಲಾ ಎಸ್1 ಟೆಸ್ಟ್ ಡ್ರೈವ್ ಹಾಗೂ ವಿತರಣೆಗಳು ಜುಲೈ ನಿಂದ ಶುರುವಾಗಲಿದೆ.

ಓಲಾದ ಅಗ್ಗದ ಸ್ಕೂಟರ್ ಎಸ್1 ಏರ್ ಹಲವಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಮಾರ್ಟ್‌ಫೋನ್ ಕನೆಕ್ಟ್ದ್ 7-ಇಂಚಿನ TFT ಸ್ಕ್ರೀನ್, ಜಿಪಿಎಸ್, ಮ್ಯೂಸಿಕ್ ಪ್ಲೇಬ್ಯಾಕ್, ಸೈಡ್ ಸ್ಟ್ಯಾಂಡ್ ಅಲರ್ಟ್‌, ರಿವರ್ಸ್ ಮೋಡ್, ರಿಮೋಟ್ ಬೂಟ್ ಲಾಕ್/ ಅನ್‌ಲಾಕ್ ನಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇಅಲ್ಲದೆ, ಮೂರು ರೈಡಿಂಗ್ ಮೋಡ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್. ಇಂತಹ ಅತ್ಯಾಧುನಿಕ ವೈಶಿಷ್ಟ್ಯ ಹೊಂದಿರುವುದರಿಂದ ಈ ಸ್ಕೂಟರ್ ಎಲ್ಲರಿಗೂ ಇಷ್ಟವಾಗಲಿದೆ.

ಓಲಾ ಮುಂಬರಲಿರುವ ತನ್ನ ಐದು ಬೈಕ್ ಗಳ ಟೀಸರ್ ಕೂಡ ಬಿಡುಗಡೆ ಮಾಡಿದ್ದು, ಈ ಬೈಕುಗಳು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಅಲ್ಲದೆ, ಕೆಲವೇ ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ ಎಂದು ವರದಿಯಾಗಿದೆ. ಕಳೆದ ತಿಂಗಳು ಓಲಾ ಬರೋಬ್ಬರಿ 25,000 ಯುನಿಟ್ ಸ್ಕೂಟರ್ ಮಾರಾಟ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಾಣ ಮಾಡಿತ್ತು. ದೇಶಾದ್ಯಂತ ಇರುವ ತನ್ನ 200 ಎಕ್ಸ್ಪೀರಿಯೆನ್ಸ್ ಸೆಂಟರ್ಸ್ ಸಂಖ್ಯೆಯನ್ನು 500ಕ್ಕೆ ಏರಿಸುವ ಗುರಿಯನ್ನು ಹಾಕಿಕೊಂಡಿದೆ.

ಓಲಾ ಕಡಿಮೆ ಬೆಲೆಯ 'ಎಸ್1 ಏರ್' ಸ್ಕೂಟರ್‌ ಬಿಡುಗಡೆಯೊಂದಿಗೆ ಪ್ರತಿಸ್ಪರ್ಧಿ ಕಂಪನಿಗಳಿಗೆ ಠಕ್ಕರ್ ನೀಡಲು ಮುಂದಾಗಿದ್ದು, ಈ ಸ್ಕೂಟರ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಹೆಚ್ಚಿನ ಭಾರತೀಯ ಯುವ ಗ್ರಾಹಕರಿಗೆ ಇಷ್ಟವಾಗಬಹುದು. ಅಲ್ಲದೆ, ಬೆಲೆಯನ್ನು ಗಮನಿಸಿದಾಗ ಬೇರೆ ಯಾವ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುವುದಿಲ್ಲ ಎಂದು ಹೇಳಬಹುದು. ಎಸ್1 ಏರ್ ವಿತರಣೆಗಳು ಆರಂಭವಾದ ಮೇಲೆ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Thursday, February 9, 2023, 17:20 [IST]
English summary
Ola s1 s1 air new variants launched in india details kannada
Read more on ಓಲಾ ola new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+