Ola: ಓಲಾದ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ದಿಢೀರನೇ ರೂ.20,000 ಇಳಿಕೆ, ಇನ್ನೂ ತುಂಬಿ ತುಳುಕಲಿವೆ ಶೋರೂಂಗಳು!

ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ (Ola Electric), ದೇಶಾದ್ಯಂತ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಗೊಳಿಸುವ ಮೂಲಕ ಖ್ಯಾತಿಗಳಿಸಿದ್ದು, ನವೆಂಬರ್‌ನಲ್ಲಿ 30,000 ಯುನಿಟ್ (ಸ್ಕೂಟರ್) ಸೇಲ್ ಮಾಡಿ, ಹೊಸದೊಂದು ದಾಖಲೆ ನಿರ್ಮಿಸಿದೆ. ಇದೀಗ, ಎಸ್1 ಎಕ್ಸ್ ಪ್ಲಸ್ (S1 X+) ಇ-ಸ್ಕೂಟರ್ ಬೆಲೆಯನ್ನು ದಿಢೀರನೇ ಇಳಿಕೆ ಮಾಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಓಲಾ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಈ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದ್ದು, ಎಸ್1 ಎಕ್ಸ್ ಪ್ಲಸ್ ಬೆಲೆ ರೂ.20,000 ಕಡಿಮೆಯಾಗಿದೆ. ಈಗ, ಕೆಲವೇ ರೂ.89,999 ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಈ ಕೊಡುಗೆ ಡಿಸೆಂಬರ್‌ ತಿಂಗಳ ಪೂರ್ತಿಯಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ, ಓಲಾ ಎಸ್1 ಎಕ್ಸ್ ಪ್ಲಸ್ ದರ ರೂ.1,09,999 ಇತ್ತು.

Ola: ಓಲಾದ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ದಿಢೀರನೇ ರೂ.20,000 ಇಳಿಕೆ, ಇನ್ನೂ ತುಂಬಿ ತುಳುಕಲಿವೆ ಶೋರೂಂಗಳು!

ನೂತನ ಓಲಾ ಎಸ್1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ತಂತ್ರಜ್ಞಾನದೊಂದಿಗೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ 6 kW ಸಾಮರ್ಥ್ಯದ ಮೋಟಾರ್‌ ಬಳಕೆ ಮಾಡಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 151 ರೇಂಜ್ ನೀಡುತ್ತದೆ. ಕೇವಲ 3.3 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 90 kmph ವೇಗವನ್ನು ಹೊಂದಿದೆ.

ಈ ಬಗ್ಗೆ ಮಾತನಾಡಿರುವ ಓಲಾ ಚೀಫ್ ಮಾರ್ಕೆಟಿಂಗ್ ಆಫೀಸರ್ ಅಂಶುಲ್ ಖಂಡೇಲ್ವಾಲ್ ಅವರು, 'ನವೆಂಬರ್ ತಿಂಗಳಲ್ಲಿ ದಾಖಲೆಯ 30,000 ಯುನಿಟ್‌ ಸ್ಕೂಟರ್ ಮಾರಾಟದೊಂದಿಗೆ ಕಂಪನಿಯು ದೊಡ್ಡ ಸಾಧನೆಯೊಂದನ್ನು ಮಾಡಿದೆ. ಇವಿ ಮಾರಾಟವನ್ನು ವೇಗಗೊಳಿಸಲು ಓಲಾ ಎಸ್1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಇಂಧನ ಚಾಲಿತ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ನೀಡುತ್ತಿದ್ದೇವೆ' ಎಂದು ಹೇಳಿದ್ದಾರೆ.

ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಆಯ್ದ ಕ್ರೆಡಿಟ್ ಕಾರ್ಡ್ ಮೇಲೆ ರೂ.5,000 ರಿಯಾಯಿತಿ, ಜೀರೋ ಡೌನ್ ಡೌನ್ ಪೇಮೆಂಟ್ ಆಯ್ಕೆ ಹಾಗೂ ಶೇಕಡ 6.99% ಬಡ್ಡಿದರದಲ್ಲಿ ಸಾಲ ಸೌಲಭ್ಯಗಳು ಲಭ್ಯವಿದೆ. ಓಲಾದ ಟಾಪ್ ಎಂಡ್ ಮಾದರಿ, ಎಸ್1 ಪ್ರೊ (S1 Pro) ರೂ.1,47,499 ಹಾಗೂ ಎಸ್1 ಏರ್ ರೂ.1,19,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಓಲಾ ಎಸ್1 ಪ್ರೊ ಬಗ್ಗೆ ಮಾತನಾಡುವುದಾದರೆ, ಇದು ಸಂಪೂರ್ಣ ಚಾರ್ಜ್ ನಲ್ಲಿ 195 ಕಿಲೋಮೀಟರ್ ರೇಂಜ್ ನೀಡುತ್ತದೆ. ಜೊತೆಗೆ 120 kmph ಟಾಪ್ ಸ್ವೀಡ್ ಹೊಂದಿದ್ದು, ಇದರಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್, 11 kW ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸ್ಕ್ ಬ್ರೇಕ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಓಲಾ ಎಸ್1 ಏರ್ ಕುರಿತು ಹೇಳುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್, 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜ್ ನಲ್ಲಿ 151 km ರೇಂಜ್ ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ BLDC ಹಬ್ ಮೋಟಾರ್ 6 kW (8 bhp) ಪವರ್ ಉತ್ಪಾದಿಸುತ್ತದೆ. ಜೊತೆಗೆ ಈ ಸ್ಕೂಟರ್, 90 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 5.7 ಸೆಕೆಂಡುಗಳಲ್ಲಿ 0 - 60 kmph ವೇಗವನ್ನು ಪಡೆಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, December 3, 2023, 13:00 [IST]
English summary
Ola s1 x plus e scooter price reduced rs 20000 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+