Ola Electric: ಭಾರತದಲ್ಲಿ ಕ್ರಾಂತಿ ಸೃಷ್ಟಿಸಲು ಆಗಸ್ಟ್ 15ಕ್ಕೆ ಓಲಾ ಬೈಕ್‌ಗಳು ಬಿಡುಗಡೆ?

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಓಲಾ (Ola) ಕಂಪನಿ ಭಾರೀ ವೇಗದಲ್ಲಿ ಮುನ್ನುಗುತ್ತಿದ್ದು, ಎಸ್1 ಸರಣಿ ಸ್ಕೂಟರ್ ಗಳ ಮಾರಾಟದಿಂದ ಹೊಸ ಅಲೆಯನ್ನು ಸೃಷ್ಟಿಸಿದೆ. ಮುಂದಿನ ತಿಂಗಳು ತನ್ನ ಹೊಚ್ಚ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಗೊಳಿಸುವ ಮೂಲಕ ದೇಶದಲ್ಲಿ ದೊಡ್ಡ ಕ್ರಾಂತಿಗೆ ಸಜ್ಜುಗೊಂಡಂತೆ ಕಾಣುತ್ತಿದೆ.

ಕಳೆದ ಕೆಲವು ದಿನಗಳಿಂದ ಓಲಾ ಕಂಪನಿ ಸಿಐಓ ಭವಿಶ್ ಅಗರ್ವಾಲ್ ಅವರು ಮಾಡುತ್ತಿರುವ ಟ್ವೀಟ್ ಗಳು ಆ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತಿವೆ. ಶನಿವಾರ ಟೆಸ್ಟ್ ಟ್ರ್ಯಾಕ್ ನಲ್ಲಿ ಇತರೆ ಕಂಪನಿಯ ಮೋಟಾರ್‌ಸೈಕಲ್‌ಗಳನ್ನು ಪರೀಕ್ಷಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಇಂದು ಬೆಳಗ್ಗೆಯಷ್ಟೇ ಟ್ವೀಟ್ ಮಾಡಿದ್ದ ಅವರು, 'ಭಾರತದಲ್ಲಿ ಹಳೆಯ ಪಾಶ್ಚಿಮಾತ್ಯ ICE (ಇಂಧನ ಚಾಲಿತ) ಮೋಟಾರ್‌ಸೈಕಲ್ ತಯಾರಿಕೆಗೆ ಕೆಲವು ಕಂಪನಿಗಳು ಏಕೆ ಒಲವನ್ನು ತೋರಿಸುತ್ತಿವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ'.

Ola Electric: ಭಾರತದಲ್ಲಿ ಕ್ರಾಂತಿ ಸೃಷ್ಟಿಸಲು ಆಗಸ್ಟ್ 15ಕ್ಕೆ ಓಲಾ ಬೈಕ್‌ಗಳು ಬಿಡುಗಡೆ?

'ನಾವು ಇಡೀ ಪ್ರಪಂಚಕ್ಕೆ ಎಲೆಕ್ಟ್ರಿಕ್ ವಾಹನಗಳು, ಅದರಲ್ಲೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಭವಿಷ್ಯದ ಮೋಟಾರ್‌ಸೈಕಲ್‌ಗಳನ್ನು ನಿರ್ಮಿಸುತ್ತೇವೆ' ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದರೆ, ಶೀಘ್ರದಲ್ಲಿಯೇ ಓಲಾ ಕಂಪನಿ ಎಲೆಕ್ಟ್ರಿಕ್ ಬೈಕ್ ಗಳನ್ನು ಬಿಡುಗಡೆಗೊಳಿಸಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಆದರೆ, ಮೋಟಾರ್‌ಸೈಕಲ್‌ಗಳು ಹೇಗಿರಲಿವೆ ಎಂಬುದರ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಓಲಾ ಪ್ರತಿವರ್ಷ ಆಗಸ್ಟ್ 15ರಂದು ವಾರ್ಷಿಕ ಬಿಡುಗಡೆ ದಿನ (annual launch day)ವನ್ನು ಆದ್ದೂರಿಯನ್ನು ಆಯೋಜಿಸುತ್ತದೆ. ಅಂದೇ ನೂತನ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆಯಾಗಬಹುದು ಎಂದು ಮೂಲಗಳು ಹೇಳಿವೆ. ಇದಕ್ಕೂ ಒಂದು ಕಾರಣವಿದ್ದು, 2021ರ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಓಲಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿತ್ತು. ಆ ರೀತಿಯಾಗಿಯೇ ತನ್ನ ಹೊಸ ಬೈಕ್ ಗಳನ್ನು ಬಿಡುಗಡೆಗೊಳಿಸಬಹುದು ಎಂದು ಹಲವಾರು ಅಂದಾಜಿಸಿದ್ದಾರೆ.

ಕೆಲವೊಂದು ಮೂಲಗಳ ಪ್ರಕಾರ, ಓಲಾ ಹೊಸ ಸ್ಕೂಟರ್ ಮಾದರಿಯನ್ನು ಅಂದೇ ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಸದ್ಯಕ್ಕೆ ಖಚಿತ ವಿವರ ಸಿಕ್ಕಿಲ್ಲ. ಆದರೆ, ಕೆಲವೇ ದಿನದ ಹಿಂದೆಯಷ್ಟೇ ಕಂಪನಿಯು 'ಎಸ್1 ಏರ್' ಸ್ಕೂಟರ್ ಅನ್ನು ಬೆಂಗಳೂರಿನಲ್ಲಿ ಟಾರ್ಮ್ಯಾಕ್‌ನಲ್ಲಿ ಪರೀಕ್ಷೆ ನಡೆಸುವ ವಿಡಿಯೋವನ್ನು ಹಂಚಿಕೊಂಡಿತ್ತು. ಈ ಮೂಲಕ ಅದು ಶೀಘ್ರದಲ್ಲೇ ಬಿಡುಗಡೆಗೆ ಸಿದ್ದ ಎಂಬ ಸಂದೇಶ ನೀಡಿತ್ತು.

ಅದಕ್ಕೂ ಮೊದಲು ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಎರಡು ಹೊಸ ಬಣ್ಣದ ಆಯ್ಕೆಯನ್ನು ಜುಲೈ ತಿಂಗಳಲ್ಲಿ ಪರಿಚಯಿಸಲಾಗುವುದು ಎಂದು ಘೋಷಿಸಿತ್ತು. ಈ ಕುರಿತು ಟೀಸರ್ ಕೂಡ ಬಿಡುಗಡೆ ಮಾಡಿತ್ತು. ಆದರೆ, ಬಣ್ಣಗಳ ಹೆಸರನ್ನು ತಿಳಿಸಿರಲಿಲ್ಲ. ಆದರೂ ನಿಯಾನ್ ಗ್ರೀನ್ ಮತ್ತು ಬ್ಲೂ ಕಲರ್ ಸ್ಕೀಮ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಓಲಾ ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಎಸ್1 ಏರ್ ರೂ.1.10 ಲಕ್ಷ, ಎಸ್1 ರೂ.1.30 ಲಕ್ಷ ಹಾಗೂ ಎಸ್1 ಪ್ರೊ ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ರೂಪಾಂತರಗಳಿಗೆ ಅನುಗುಣವಾಗಿ ಬೇರೆ - ಬೇರೆಯಾಗಿ ರೇಂಜ್ ನೀಡುತ್ತವೆ. ಓಲಾ ಕಂಪನಿ ದೇಶದಲ್ಲಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ್ದು, ತಿಂಗಳಿಗೆ ಏನಿಲ್ಲ ಅಂದರೂ 20,000 ಯುನಿಟ್ ಸ್ಕೂಟರ್ ಗಳನ್ನು ಸೇಲ್ ಮಾಡುತ್ತದೆ.

ಓಲಾ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಗರಿಷ್ಠ ಪಾಲನ್ನು ಹೊಂದಿದ್ದು, ಮಾರಾಟದಲ್ಲಿ ದಿನದಿಂದ ದಿನಕ್ಕೆ ಬೆಳವಣಿಗೆ ಸಾಧಿಸುತ್ತಿದೆ. ಇನ್ನು, ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಬಗ್ಗೆ ಫೆಬ್ರುವರಿ 5ರಂದೇ ಓಲಾ ಟೀಸರ್ ಬಿಡುಗಡೆ ಮಾಡಿತ್ತು. ಒಂದೊಮ್ಮೆ ಎಲೆಕ್ಟ್ರಿಕ್ ಬೈಕ್ ಗಳು ಬಿಡುಗಡೆಗೊಳಿಸುವುದು ನಿಜವಾದರೆ, ಇದು ದೊಡ್ಡ ಮಟ್ಟದ ಕ್ರಾಂತಿಗೆ ನಾಂದಿಯಾಗುತ್ತದೆ.

More from DriveSpark

Article Published On: Tuesday, July 11, 2023, 20:03 [IST]
English summary
Ola set launch motorcycles scooter august 15 details
Read more on ಓಲಾ ola
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+