ಹೀರೋ ಸ್ಪ್ಲೆಂಡರ್‌ಗೆ ಸರಿಯಾದ ಪ್ರತಿಸ್ಪರ್ಧಿ ಬಿಡುಗಡೆ: ಕಡಿಮೆ ಬೆಲೆ, 171 ಕಿ.ಮೀ ರೇಂಜ್
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಪ್ಯೂರ್ ಇವಿ ಇಕೊಡ್ರಿಫ್ಟ್ 350 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದೆ. 110 cc ಮೋಟಾರ್ ಸೈಕಲ್ ವಿಭಾಗದಲ್ಲಿ ಇತರ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗಿಂತ ಹೆಚ್ಚು-ರೇಂಜ್ ನೀಡುವ ಮೋಟಾರ್‌ಸೈಕಲ್ ಆಗಿ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ.
ಹೊಸ ಪ್ಯೂರ್ EV ecoDryft 350 ಬೆಲೆಯು ರೂ. 1.30 ಲಕ್ಷ (ಎಕ್ಸ್-ಶೋರೂಮ್)ವಿದ್ದು, ಒಂದೇ ಚಾರ್ಜ್‌ನಲ್ಲಿ 171 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಮೋಟಾರ್‌ಸೈಕಲ್ ದಿನನಿತ್ಯ ವ್ಯಾಪಕವಾಗಿ ಪ್ರಯಾಣಿಸುವವರ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಮೂಲಕ ಹೊಸ ecoDryft 350 ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಹೀರೋ ಸ್ಪ್ಲೆಂಡರ್, ಹೋಂಡಾ ಶೈನ್, ಬಜಾಜ್ ಪ್ಲಾಟಿನಾಗಳಿಗೆ ಕಠಿಣ ಪೈಪೋಟಿ ನೀಡಲಿದೆ.

Pure ecoDryft 350 ಮೋಟಾರ್‌ಸೈಕಲ್ 3.5 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಇದು ಆರು MCU ಗಳೊಂದಿಗೆ 4 hp ಎಲೆಕ್ಟ್ರಿಕ್ ಮೋಟಾರು ಪವರ್ ಜೊತೆಗೆ 40 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳೊಂದಿಗೆ ಸಜ್ಜುಗೊಂಡಿರುವ ಹೊಸ ಮೋಟಾರ್‌ಸೈಕಲ್ ಗಂಟೆಗೆ 75 ಕಿ.ಮೀ ಗರಿಷ್ಟ ವೇಗವನ್ನು ತಲುಪಬಲ್ಲದು.
ಹೊಸ ಪ್ಯೂರ್ ಇವಿ ಇಕೊಡ್ರಿಫ್ಟ್ 350, ರಿವರ್ಸ್ ಮೋಡ್, ಕೋಸ್ಟಿಂಗ್ ರೀಜೆನ್, ಹಿಲ್-ಸ್ಟಾರ್ಟ್ ಅಸಿಸ್ಟ್ ಟು ಡೌನ್-ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಅಸಿಸ್ಟ್‌ನಂತಹ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಟೇಟ್ ಆಫ್ ಚಾರ್ಜ್ (SoC) ಮತ್ತು ಸ್ಟೇಟ್ ಆಫ್ ಹೆಲ್ತ್ (SoH) ಪ್ರಕಾರ ಬ್ಯಾಟರಿ ದೀರ್ಘ ಬಾಳಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಾಹನದ ಸ್ಮಾರ್ಟ್ AI ಕೇಂದ್ರ ಹಂತವನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ICE ಪ್ರಯಾಣಿಕ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ರೂ. 7,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು ಎಂದು ಕಂಪನಿ ಹೇಳಿದೆ. ಪ್ಯೂರ್ ಎಕೊಡ್ರಿಫ್ಟ್ ಹೀರೋ ಸ್ಪ್ಲೆಂಡರ್, ಹೋಂಡಾ ಶೈನ್ ಮತ್ತು ಬಜಾಜ್ ಪ್ಲಾಟಿನಾದಂತಹ ಪ್ರವೇಶ ಮಟ್ಟದ ICE ಪ್ರಯಾಣಿಕ ಮೋಟಾರ್‌ಸೈಕಲ್‌ಗಳನ್ನು ಗುರಿಯಾಗಿಸಿಕೊಂಡಿದೆ. ಇದಲ್ಲದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ ಹಾಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿದೆ.
Pure eco Dryft 350 ಸುಲಭ EMI ಆಯ್ಕೆಗಳೊಂದಿಗೆ ತಿಂಗಳಿಗೆ 4,000 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು 100 ಕ್ಕೂ ಹೆಚ್ಚು ವಿಶೇಷವಾದ ಪ್ಯೂರ್ ಇವಿ ಡೀಲರ್‌ಶಿಪ್‌ಗಳಲ್ಲಿ ಖರೀದಿಸಲು ಲಭ್ಯವಿದೆ. ಕಂಪನಿಯು HeroFincorp, L&T ಫೈನಾನ್ಶಿಯಲ್ ಸರ್ವಿಸಸ್, ICICI ಇತ್ಯಾದಿಗಳೊಂದಿಗೆ ಹಣಕಾಸು ಆಯ್ಕೆಗಳನ್ನು ನೀಡಿದೆ.

ಈ ಹೊಸ ಮೋಟಾರ್‌ಸೈಕಲ್ ನೋಡಲು ತುಂಬಾ ಸಿಂಪಲ್ ಡಿಸೈನ್ ಹೊಂದಿದ್ದು, ಪ್ರವೇಶ ಮಟ್ಟದ ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗಳಂತೆಯೇ ಕಾಣುತ್ತದೆ. ಇದರ ಅಲಾಯ್ ವೀಲ್‌ಗಳು ಮಸ್ಕುಲರ್ ಪೆಟ್ರೋಲ್ ಟ್ಯಾಂಕ್ ಹಾಗೂ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಬೈಕ್‌ನ ಆಕರ್ಷಣೆಯನ್ನು ಹೆಚ್ಚಿಸಿದ್ದು, ತನ್ನ ವಿಭಾಗದಲ್ಲಿ ಇತರ ಮೋಟಾರ್‌ಸೈಕಲ್‌ಗಳಿಗಿಂತ ಆಧುನಿಕ ವಿನ್ಯಾಸವನ್ನು ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








