130 km ರೇಂಜ್ ನೀಡುವ ದಿನನಿತ್ಯ ಬಳಕೆಯ 'ecoDryft' ಎಲೆಕ್ಟ್ರಿಕ್ ಬೈಕ್ ವಿತರಣೆ ಶುರು: ಇಲ್ಲಿದೆ ಹೆಚ್ಚಿನ ಮಾಹಿತಿ

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಹುತೇಯರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ದಿನಬಳಕೆಗೆ ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾತ್ರ ಕೈಗೆಟುಕುವ ದರದಲ್ಲಿ ಖರೀದಿಗೆ ದೊರೆಯುತ್ತಿವೆ. ಆದರೆ, ಬೈಕ್ ಗಳು ಸಿಗುತ್ತಿಲ್ಲ. ಇದನ್ನು ಮನದಲ್ಲಿಟ್ಟುಕೊಂಡು ಪ್ಯೂರ್ ಇವಿ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ ಮಾಡಿದ್ದು, ವಿತರಣೆಯನ್ನು ಆರಂಭಿಸಿದೆ.

ಪ್ಯೂರ್ ಇವಿ (PURE EV) ತನ್ನ ಬಹುನಿರೀಕ್ಷಿತ ಇಕೋಡ್ರೈಫ್ಟ್ (ecoDryft) ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಹೈದರಾಬಾದ್ ಮತ್ತು ಆಂಧ್ರಪ್ರದೇಶದಲ್ಲಿರುವ ತನ್ನ ಡೀಲರ್‌ಶಿಪ್ ಮೂಲಕ ಮಾರ್ಚ್ 22ರಿಂದ ವಿತರಣೆಯನ್ನು ಪ್ರಾರಂಭಿಸಿದೆ. ಈ ಬೈಕ್, ರೂ.99,999 (ಎಕ್ಸ್ ಶೋರೂಂ, ದೆಹಲಿ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಈವರೆಗೆ 10,000ಕ್ಕೂ ಹೆಚ್ಚು ಬುಕಿಂಗ್ ಸ್ವೀಕರಿಸಿದ್ದು, ಅದರಲ್ಲಿ ಶೇಕಡ 50% ಬೈಕುಗಳನ್ನು ಮೇ ಅಂತ್ಯದೊಳಗೆ, ಉಳಿದವುಗಳನ್ನು ಜುಲೈನೊಳಗೆ ತಲುಪಿಸುವ ಗುರಿಯನ್ನು ಹೊಂದಿದೆ.

130 km ರೇಂಜ್ ನೀಡುವ ದಿನನಿತ್ಯ ಬಳಕೆಯ ecoDryft ಎಲೆಕ್ಟ್ರಿಕ್ ಬೈಕ್ ವಿತರಣೆ ಶುರು: ಇಲ್ಲಿದೆ ಹೆಚ್ಚಿನ ಮಾಹಿತಿ

ಪ್ಯೂರ್ ಇವಿ ಕಂಪನಿ ಈ ಬೈಕ್ ಅನ್ನು ದೇಶದ್ಯಾಂತ ಒಂದೇ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ದಿನನಿತ್ಯ ಬಳಕೆಗೆ ಸೂಕ್ತವಾಗಿರುವ ecoDryft ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ನಮೇಲಿ ಬ್ಲ್ಯಾಕ್, ಗ್ರೇ, ರೆಡ್ ಹಾಗೂ ಬ್ಲೂ. ಜೊತೆಗೆ ಡ್ರೈವ್, ಕ್ರಾಸ್ ಓವರ್ ಮತ್ತು ಥ್ರಿಲ್ ಎಂಬ ಮೂರು ಆಕರ್ಷಕ ರೈಡಿಂಗ್ ಮೋಡ್ ಅನ್ನು ಪಡೆದುಕೊಂಡಿದೆ.

ಈ ಹೊಸ ecoDryft ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು 3 kWh ಬ್ಯಾಟರಿ ಪ್ಯಾಕ್ ಹಾಗೂ 3 kW ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 4.2 bhp ಪವರ್ ಹಾಗೂ 40 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕೆಲವೇ 5 ಸೆಕೆಂಡುಗಳಲ್ಲಿ 0-40 ಹಾಗೂ 10 ಸೆಕೆಂಡುಗಳಲ್ಲಿ 60 km/h ವೇಗವನ್ನು ಪಡೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ.

130 km ರೇಂಜ್ ನೀಡುವ ದಿನನಿತ್ಯ ಬಳಕೆಯ ecoDryft ಎಲೆಕ್ಟ್ರಿಕ್ ಬೈಕ್ ವಿತರಣೆ ಶುರು: ಇಲ್ಲಿದೆ ಹೆಚ್ಚಿನ ಮಾಹಿತಿ

ecoDryft ಎಲೆಕ್ಟ್ರಿಕ್ ಬೈಕ್ ರೇಂಜ್ ಹಾಗೂ ಟಾಪ್ ಸ್ವೀಡ್ ಬಗ್ಗೆ ಮಾತನಾಡುವುದಾದರೆ, ಇದು ಸಂಪೂರ್ಣ ಚಾರ್ಜಿನಲ್ಲಿ ಬರೋಬ್ಬರಿ 130 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದೆ. ಜೊತೆಗೆ 75 kmph ಟಾಪ್ ಸ್ವೀಡ್ ಹೊಂದಿದೆ. ಇನ್ನು, ಬ್ಯಾಟರಿ ಪ್ಯಾಕ್ ಚಾರ್ಜಿಂಗ್ ಆಯ್ಕೆ ಬಗ್ಗೆ ಹೇಳುವುದಾದರೆ, ಇದರ 20-80% ಬ್ಯಾಟರಿ ಚಾರ್ಜ್ ಆಗಲು 3 ಗಂಟೆ ಬೇಕಾಗಿದ್ದು, ಫುಲ್ ಬ್ಯಾಟರಿ ಚಾರ್ಜ್ ಆಗಲು 6 ಗಂಟೆ ಸಮಯ ಬೇಕಾಗುತ್ತದೆ.

ಪ್ಯೂರ್ ಇವಿಯ ecoDryft ಎಲೆಕ್ಟ್ರಿಕ್ ಬೈಕ್ ಹತ್ತಾರು ನವೀನ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, 7-ಇಂಚಿನ TFT ಡಿಸ್ಪ್ಲೇ, ಬ್ಲೂಟೂತ್ ಸಂಪರ್ಕ, ಇನ್ಸ್ಟ್ರುಮೆಂಟ್ ಕ್ಲಸ್ಟರ್, BMS (ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ ಫ್ರಂಟ್ 18 ಇಂಚು ಹಾಗೂ ರೇರ್ 17 ಇಂಚಿನ ವೀಲ್ ಹೊಂದಿದೆ. ಇವು ಹಲವು ಖರೀದಿದಾರರನ್ನು ಆಕರ್ಷಿಸಲಿವೆ ಎಂದು ಹೇಳಬಹುದು.

ದೇಶಾದ್ಯಂತ ಪ್ಯೂರ್ ಇವಿ ಈಗಾಗಲೇ 130ಕ್ಕೂ ಹೆಚ್ಚಿನ ಡೀಲರ್‌ಶಿಪ್‌ಗಳನ್ನು ಹೊಂದಿದೆ. ಅದನ್ನು 2023ರ ಅಂತ್ಯದ ವೇಳೆಗೆ 300 ನಗರಗಳಿಗೆ ವಿಸ್ತರಿಸಲು ಯೋಜಿಸಿದೆ. ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್‌ನಿಂದಲೂ ಈ ಬೈಕ್ ಪೂರೈಸುವಂತೆ ಆರ್ಡರ್ ಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ವಿದೇಶದಲ್ಲೂ ಮಾರಾಟ ಮಾಡಿ, ಹೆಚ್ಚಿನ ಗ್ರಾಹಕರನ್ನು ಪಡೆಯಬೇಕೆಂಬುದು ಕಂಪನಿಯ ಇಚ್ಛೆಯಾಗಿದೆ.

ಸದ್ಯ, ದಿನನಿತ್ಯ ಬಳಕೆಯ ecoDryft ಎಲೆಕ್ಟ್ರಿಕ್ ಬೈಕ್ ವಿತರಣೆ ಶುರುವಾಗಿದ್ದು, ಇದು ಮತ್ತಷ್ಟು ಖರೀದಿದಾರರು ಈ ಬೈಕ್ ನ್ನು ಕೊಂಡುಕೊಳ್ಳುವಂತೆ ಪ್ರೇರಿಪಿಸಬಹುದು. ಜೊತೆಗೆ ಬೆಲೆಯು ಕೈಗೆಟುಕುವಂತ್ತಿದ್ದು, ಅದಕ್ಕೆ ತಕ್ಕಂತೆ ಉತ್ತಮ ರೇಂಜ್ ಅನ್ನು ಕೊಡುತ್ತಿದೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಪ್ಯೂರ್ ಇವಿಯು ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲು ಉತ್ತಮ ಕಾರ್ಯಕ್ಷಮತೆ ಹೊಂದಿರುವ ಎಲೆಕ್ಟ್ರಿಕ್ ಬೈಕ್ ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಬಹುದು.

More from DriveSpark

Article Published On: Tuesday, March 7, 2023, 14:40 [IST]
English summary
Pure ev starts ecodryft bike delivery details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+