ಹೆಚ್ಚಾಯ್ತು ಬೇಡಿಕೆ: RV400 ಇವಿ ಬೈಕ್‌ಗೆ ಮತ್ತೊಮ್ಮೆ ಬುಕಿಂಗ್ ತೆರೆದ ರಿವೋಲ್ಟ್ ಮೋಟಾರ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಜೋರಾಗಿದೆ, ತಿಂಗಳಿಗೆ ಹತ್ತಾರು ಇವಿ ಸ್ಕೂಟರ್, ಮೋಟಾರ್ ಸೈಕಲ್, ಕಾರುಗಳು ಬಿಡುಗಡೆಯಾಗುತ್ತಿವೆ. ಇದೀಗ ರಿವೋಲ್ಟ್ ಮೋಟಾರ್ಸ್ ಕೂಡ ಇಂದು ತನ್ನ ಅತ್ಯಾಧುನಿಕ ಹೊಸ ಎಲೆಕ್ಟ್ರಿಕ್ ಬೈಕ್‌ಗೆ ಮತ್ತೊಮ್ಮೆ ಬುಕಿಂಗ್‌ಗಳನ್ನು ತೆರೆಯುತ್ತಿರುವುದಾಗಿ ಘೋಷಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

Revolt Motors ಅನ್ನು ಇತ್ತೀಚೆಗೆ ರಟ್ಟನ್‌ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್ ಅವರು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದ್ದು, ಸರಬರಾಜು ಸರಪಳಿಯಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ. ಹರಿಯಾಣದ ಮಾನೇಸರ್‌ನಲ್ಲಿರುವ ತನ್ನ ವಿಶ್ವ-ದರ್ಜೆಯ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ. ಇನ್ನು ಇವರ ಹೊಸ ಮೋಟಾರ್‌ ಸೈಕಲ್‌ ಆದ Revolt RV400 ಗೆ ಬುಕಿಂಗ್ ಸ್ವೀಕರಿಸುತ್ತಿದ್ದು, ಬುಕಿಂಗ್ ಮೊತ್ತವು 2,499 ರೂ. ಇದೆ. ಮಾರ್ಚ್ 31 ರೊಳಗೆ ಡೆಲಿವರಿಗಳನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

ಹೆಚ್ಚಾಯ್ತು ಬೇಡಿಕೆ: RV400 ಇವಿ ಬೈಕ್‌ಗೆ ಮತ್ತೊಮ್ಮೆ ಬುಕಿಂಗ್ ತೆರೆದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಮೋಟಾರ್ಸ್ ಹರಿಯಾಣದಲ್ಲಿರುವ ಮಾನೇಸರ್ ಉತ್ಪಾದನಾ ಘಟಕದಲ್ಲಿ ಬೈಕ್‌ಗಳನ್ನು ತಯಾರಿಸುತ್ತಿದೆ. ಕಂಪನಿಯು ಇತ್ತೀಚೆಗೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೊಸ ನಗರಗಳಲ್ಲಿ ಡೀಲರ್‌ಶಿಪ್‌ಗಳನ್ನು ತೆರೆಯಲು ಹೂಡಿಕೆಗಳನ್ನು ಮಾಡಿದೆ. ಕಳೆದ ವರ್ಷ ಕಂಪನಿಯು ಬೈಕ್‌ಗಳಿಗಾಗಿ ಹೆಚ್ಚಿನ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ ಎಂದು ರಿವೋಲ್ಟ್ ಹೇಳಿಕೊಂಡಿದೆ. ಪ್ರಸ್ತುತ, ರಿವೋಲ್ಟ್ ಮೋಟಾರ್ಸ್ 22 ರಾಜ್ಯಗಳಲ್ಲಿ 35 ಡೀಲರ್‌ಶಿಪ್‌ಗಳನ್ನು ನಿರ್ವಹಿಸುತ್ತಿದೆ.

ಕಂಪನಿಯ ಪ್ರಕಾರ, ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಅನ್ನು ಮಾಸಿಕ ಕೇವಲ 350 ರೂ.ಗಳಲ್ಲಿ ಚಲಾಯಿಸಬಹುದು. ಪೆಟ್ರೋಲ್ ಚಾಲಿತ ಬೈಕ್‌ಗೆ ಹೋಲಿಸಿಕೊಂಡರೆ ಈ ವೆಚ್ಚವು ತುಂಬಾ ಕಡಿಮೆಯಿರುತ್ತದೆ. ಇನ್ನು ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಬ್ಯಾಟರಿಗೆ ಹೆಸರುವಾಸಿಯಾಗಿದೆ. ಪ್ರಸ್ತುತ ರಿವೋಲ್ಟ್ ಬೈಕ್‌ಗಳು ಭಾರತೀಯ ರಸ್ತೆಗಳಲ್ಲಿ 200 ಮಿಲಿಯನ್ ಕಿ.ಮೀ ದೂರವನ್ನು ಕ್ರಮಿಸಿವೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ಸಾಧನೆಗಳನ್ನು ಮಾಡಲಿದೆ ಎಂದು ಕಂಪನಿ ಹೇಳಿದೆ.

ಹೆಚ್ಚಾಯ್ತು ಬೇಡಿಕೆ: RV400 ಇವಿ ಬೈಕ್‌ಗೆ ಮತ್ತೊಮ್ಮೆ ಬುಕಿಂಗ್ ತೆರೆದ ರಿವೋಲ್ಟ್ ಮೋಟಾರ್ಸ್

Revolt RV400 ವಿಷಯಕ್ಕೆ ಬಂದರೆ ಕಾಸ್ಮಿಕ್ ಬ್ಲಾಕ್, ರೆಬೆಲ್ ರೆಡ್ ಮತ್ತು ಮಿಸ್ಟ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ನೀಡಲಾಗುತ್ತಿದೆ. ಕಳೆದ ಬಾರಿ ಮೋಟಾರ್‌ಸೈಕಲ್ ಬುಕ್ ಮಾಡುವುದನ್ನು ತಪ್ಪಿಸಿಕೊಂಡಿದ್ದ ಆಸಕ್ತ ಖರೀದಿದಾರರು ಈಗ ಕಂಪನಿಯ ವೆಬ್‌ಸೈಟ್ ಮೂಲಕ ತಮ್ಮ ರಿವೋಲ್ಟ್ ಮೋಟಾರ್‌ಸೈಕಲ್ ಅನ್ನು ಬುಕ್ ಮಾಡಬಹುದು. ಕಳೆದ ಬಾರಿ ಮೋಟಾರ್‌ ಸೈಕಲ್ ಕುರಿತು ಕೆಲವೇ ಮಂದಿಗೆ ತಿಳಿದಿದ್ದು, ಇದೀಗ ಬೇಡಿಕೆ ಹೆಚ್ಚಾದ ಕಾರಣ ಮತ್ತೊಮ್ಮೆ ಬುಕಿಂಗ್ ತೆರೆಯಲಾಗಿದೆ ಎಂದು ಹೇಳಲಾಗಿದೆ.

Revolt RV400 3KW ಎಲೆಕ್ಟ್ರಿಕ್ ಮೋಟರ್‌ನಿಂದ ಚಾಲಿತವಾಗಿದೆ, ಇದು 3.24 kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಪವರ್ ಪಡೆಯುತ್ತದೆ. ಈ ಬೈಕ್‌ನಲ್ಲಿ, ಸವಾರನು ಗಂಟೆಗೆ 85 ಕಿ.ಮೀ ವೇಗವನ್ನು ಓಡಿಸಬಹುದು. ಈ ಬೈಕ್‌ನ ಪ್ರಮಾಣೀಕೃತ ಶ್ರೇಣಿಯು ಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ ಇದೆ. ಈ ಬೈಕ್‌ನಲ್ಲಿ, MyRevolt ಅಪ್ಲಿಕೇಶನ್ ಮೂಲಕ ಹಲವು ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು. ಇದು ಸಂಪೂರ್ಣ ಆಧುನಿಕ ಫೀಚರ್ ಎಂದು ಕಂಪನಿ ಹೇಳಿಕೊಂಡಿದೆ.

ಹೆಚ್ಚಾಯ್ತು ಬೇಡಿಕೆ: RV400 ಇವಿ ಬೈಕ್‌ಗೆ ಮತ್ತೊಮ್ಮೆ ಬುಕಿಂಗ್ ತೆರೆದ ರಿವೋಲ್ಟ್ ಮೋಟಾರ್ಸ್

ಈ ಆಪ್ ಮೂಲಕ ಜಿಯೋ ಲೊಕೇಟರ್, ಜಿಯೋ ಫೆನ್ಸಿಂಗ್ ನಂತಹ ಕನೆಕ್ಟಿವಿಟಿ ಫೀಚರ್ ಗಳ ಜೊತೆಗೆ ಡಯಾಗ್ನೋಸ್ಟಿಕ್, ಬ್ಯಾಟರಿ ಸ್ಟೇಟಸ್, ರೈಡ್ ಡೇಟಾ, ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಹಲವು ರೀತಿಯ ಮಾಹಿತಿಯನ್ನು ಪತ್ತೆ ಮಾಡಬಹುದು. ಜೊತೆಗೆ RV400 ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದರ ಜೊತೆಗೆ, ಬೈಕ್ ಮುಂಭಾಗದಲ್ಲಿ ಅಪ್‌ಸೈಡ್ ಡೌನ್ (USD) ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆನ್ಷನ್ ಘಟಕವನ್ನು ನೋಡಬಹುದು, ಇದು ಉತ್ತಮ ಚಾಲನಾ ಅನುಭವ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, February 20, 2023, 19:05 [IST]
English summary
Revolt motors reopens booking for new and advanced rv 400 electric bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+