ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್‌ನ ತಿಂಗಳ ಖರ್ಚು ಕೇವಲ 350 ರೂಪಾಯಿ: ಬುಕಿಂಗ್ ಆರಂಭ

ಭಾರತದ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಹುಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಒಂದಿಲ್ಲೊಂದು ಕಂಪನಿಗಳು ಹೊಸ ಇವಿ ಸ್ಕೂಟರ್, ಬೈಕ್‌ಗಳನ್ನು ಲಾಂಚ್ ಮಾಡುತ್ತಿರುತ್ತವೆ. ಇದೀಗ, ರಿವೋಲ್ಟ್ ಮೋಟಾರ್ಸ್ ತನ್ನ ಬಹುನಿರೀಕ್ಷಿತ 'RV400' ಎಲೆಕ್ಟ್ರಿಕ್ ಬೈಕ್‌ಗೆ ಬುಕಿಂಗ್ ಮತ್ತೆ ಆರಂಭಿಸಿದ್ದು, ಗ್ರಾಹಕರನ್ನು ಆಕರ್ಷಿಸಲು ಹಲವು ಕೊಡುಗೆಗಳನ್ನು ಘೋಷಿಸಿದೆ.

ಮೊದಲಿಗೆ ರಿವೋಲ್ಟ್ ಮೋಟಾರ್ಸ್ ಹೊಸ ಖರೀದಿದಾರರಿಗಾಗಿ 'ಮೈ ರಿವೋಲ್ಟ್ ಪ್ಲಾನ್' (MRP) ಜಾರಿಗೆ ತಂದಿದೆ. ಇದರ ಅನ್ವಯ ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್‌ ಖರೀದಿಸುವ ಗ್ರಾಹಕರು, ಕೇವಲ ರೂ.5,715 ಡೌನ್ ಪೇಮೆಂಟ್ ಪಾವತಿಸಬೇಕು. ಜೊತೆಗೆ ತಿಂಗಳ ಇಎಂಐಯಾಗಿ ರೂ.5,715 ಕಟ್ಟಬೇಕು. ಪೆಟ್ರೋಲ್ ಎಂಜಿನ್ ಚಾಲಿತ ಬೈಕ್‌ಗಳಿಗೆ ಹೋಲಿಕೆ ಮಾಡಿದರೆ, ಈ ರಿವೋಲ್ಟ್ RV400 ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್‌ನ ತಿಂಗಳ ಖರ್ಚು ಕೇವಲ 350 ರೂಪಾಯಿ: ಬುಕಿಂಗ್ ಆರಂಭ

ಕೆಲವೇ ದಿನಗಳ ಹಿಂದೆಯಷ್ಟೇ ರಿವೋಲ್ಟ್ ಮೋಟಾರ್ಸ್ ನೂತನ RV400 ಎಲೆಕ್ಟ್ರಿಕ್ ಬೈಕ್‌ಗಾಗಿ ಬುಕಿಂಗ್ ಅನ್ನು ಪುನಃ (ಫೆ.22 ರಿಂದ) ಆರಂಭಿಸುವುದಾಗಿ ಘೋಷಿಸುವ ಮೂಲಕ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ನೂತನ ಬೈಕ್‌ನ ಬುಕಿಂಗ್ ದರ ರೂ. 2,499 ಇದ್ದು, ಖರೀದಿದಾರರಿಗೆ ಮಾರ್ಚ್ 31ರೊಳಗೆ ವಿತರಣೆ ಮಾಡಲಾಗುತ್ತದೆ. ಆಸಕ್ತರು, ರಿವೋಲ್ಟ್ ಕಂಪನಿಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ, ಬುಕ್ ಮಾಡಬಹುದು. ಈ ಬೈಕ್, ಆಕರ್ಷಕ ಲುಕ್ ಹೊಂದಿದ್ದು, ಯುವಕರು ಇಷ್ಟಪಡುತ್ತಾರೆ ಎಂದು ಕಂಪನಿ ನಂಬಿದೆ.

ರಿವೋಲ್ಟ್ ಮೋಟಾರ್ಸ್ ದೇಶಾದ್ಯಂತ 22 ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿದ್ದು, 35 ಡೀಲರ್‌ಶಿಪ್‌ಗಳನ್ನು ಹೊಂದಿದೆ. ಕಂಪನಿಯು ಈ ಬೈಕ್ ಖರೀದಿ ಮೂಲಕ ಗ್ರಾಹಕರಿಗೆ ಏನು ಲಾಭವಾಗಲಿದೆ ಎಂಬುದನ್ನು ಕೂಡ ತಿಳಿಸಿದೆ. ನಿಮ್ಮ ಬಳಿ ಪೆಟೋಲ್ ದ್ವಿಚಕ್ರ ವಾಹನವಿದ್ದರೆ ತಿಂಗಳಿಗೆ ಕನಿಷ್ಠವೆಂದರೂ ರೂ.3,500 ವೆಚ್ಚ ಮಾಡಬೇಕು. ಆದರೆ, ನೀವೇನಾದರೂ ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್‌ನ್ನು ಖರೀದಿ ಮಾಡಿದರೆ, ನಿರ್ವಹಣಾ ವೆಚ್ಚವಾಗಿ ಮಾಸಿಕ ಕೇವಲ ರೂ.350 ವ್ಯಯಿಸಬೇಕು ಎಂದು ಹೇಳಿದೆ.

ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್‌ನ ಕಾರ್ಯಕ್ಷಮತೆ ಕುರಿತು ಮಾತನಾಡುವುದಾದರೆ, ಇದು ಗ್ರಾಹಕರಿಗೆ 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, 5 kW ಪೀಕ್ ಪವರ್ ಉತ್ಪಾದಿಸಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ ಬರೋಬ್ಬರಿ 120 km ರೇಂಜ್ ನೀಡಲಿದ್ದು, 85 km/h ಟಾಪ್ ಸ್ವೀಡ್ ಹೊಂದಿದೆ. ಅಲ್ಲದೆ, ಮೂರು ರೈಡಿಂಗ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಇಕೋ, ಸ್ಪೋರ್ಟ್ ಹಾಗೂ ಪವರ್. ಇದರ ಅತ್ಯುತ್ತಮ ರೇಂಜ್ ಗ್ರಾಹಕರಿಗೆ ಖಂಡಿತ ಇಷ್ಟವಾಗಲಿದೆ.

ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಖರೀದಿಗೆ ದೊರೆಯುವ ರಿವೋಲ್ಟ್ RV400 ಎಲೆಕ್ಟ್ರಿಕ್ ಬೈಕ್‌, ವಿನ್ಯಾಸ ಹಾಗೂ ವೈಶಿಷ್ಟ್ಯದ ದೃಷ್ಟಿಯಿಂದ ಅತ್ಯಾಧುನಿಕವಾಗಿದೆ. ಇದು ಆಕರ್ಷಕ ಎಲ್‌ಇಡಿ ಹೆಡ್‌ಲೈಟ್‌ ಹೊಂದಿದೆ. ಡಿಜಿಟಲ್ ಕನ್ಸೋಲ್, OTA ಅಪ್ಡೇಟ್, ಟ್ಯಾಂಕ್ ಸಮೀಪ ದೊಡ್ಡದಾದ ಸ್ಟೋರೇಜ್ ಇದ್ದು, ಸಿಂಗಲ್ ಪೀಸ್ ಸೀಟ್‌ನ್ನು ಪಡೆದುಕೊಂಡಿದೆ. ಅಲ್ಲದೆ, ಫ್ರಂಟ್ USD ಫೋರ್ಕ್‌, ರೇರ್ ಮೊನೊಶಾಕ್ ಸಸ್ಪೆಷನ್ ಸೆಟಪ್ ಹೊಂದಿದ್ದು, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ರಿವೋಲ್ಟ್ ಮೋಟಾರ್ಸ್, ಇತ್ತೀಚೆಗೆ ರಟ್ಟನ್‌ ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್‌ನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿದೆ. ರಟ್ಟನ್‌ ಇಂಡಿಯಾ ಕಂಪನಿಯು ಇ-ಕಾಮರ್ಸ್, ಎಲೆಕ್ಟ್ರಿಕ್ ವಾಹನ ಮತ್ತು ಡ್ರೋನ್‌ ಸೇರಿದಂತೆ ವಿವಿಧ ಉದ್ಯಮಗಳಿಗೆ ತಾಂತ್ರಿಕ ಸಹಾಯವನ್ನು ಒದಗಿಸುತ್ತದೆ. ಅಲ್ಲದೆ, ರಿವೋಲ್ಟ್ ಕಂಪನಿ ಹರಿಯಾಣ ರಾಜ್ಯದ ಮಾನೇಸರ್‌ನಲ್ಲಿರುವ ತನ್ನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡಿದ್ದು, ಇದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ.

ರಿವೋಲ್ಟ್ ಮೋಟಾರ್ಸ್, ಹೊಸ RV400 ಎಲೆಕ್ಟ್ರಿಕ್ ಬೈಕ್‌ನ ಬೆಲೆ ಬಗ್ಗೆ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ಸುಮಾರು ಒಂದು ಲಕ್ಷದ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ. ಸಾಕಷ್ಟು ಹೊಚ್ಚ ಹೊಸ ವೈಶಿಷ್ಟ್ಯಗಳನ್ನು ನೂತನ ಬೈಕ್ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಖರೀದಿಬಹುದು. ಭಾರತದ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಬೈಕ್‌ಗೆ ಯಾವುದೇ ನೇರ ಪ್ರತಿಸ್ಪರ್ದಿಯಿಲ್ಲ. ಆದರೆ ಎಥರ್ 450X, ಓಲಾ ಎಸ್1 ಹಾಗೂ ಬಜಾಜ್ ಚೇತಕ್ ಸ್ಕೂಟರ್ ಗಳಿಂದ ಭಾರೀ ಪೈಪೋಟಿಯನ್ನು ಎದುರಿಸಬೇಕಾಗಿದೆ.

More from DriveSpark

Article Published On: Wednesday, February 22, 2023, 15:26 [IST]
English summary
Revolt rv400 electric bike get mrp program details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+