Auto Expo 2023: ಬಹುನಿರೀಕ್ಷಿತ ಮ್ಯಾಟರ್ ಎಲೆಕ್ಟ್ರಿಕ್ ಬೈಕ್‌ಗಳಾದ EXE, UT ಪ್ರದರ್ಶನ

ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (EV) ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಮ್ಯಾಟರ್ (Matter) ಸಹ ಸೇರಿದ್ದು, ಎರಡು ಪ್ರಮುಖ ಎಲೆಕ್ಟ್ರಿಕ್ ಬೈಕ್‌ಗಳ ಕಾನ್ಸೆಪ್ಟ್ ಅನ್ನು ಪ್ರದರ್ಶಿಸಿದೆ. ಕಂಪನಿಯು ಅನಾವರಣ ಮಾಡಿರುವ ಈ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಆಟೋ ಎಕ್ಸ್‌ಪೋದಲ್ಲಿ ಮ್ಯಾಟರ್ ಕಂಪನಿಯು ಪ್ರದರ್ಶಿಸಿದ ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್‌ಗಳಲ್ಲೊಂದು EXE, ಇನ್ನೊಂದು UT. ಈ ಎರಡು ಬೈಕ್‌ಗಳು ಒಂದೇ ಫ್ಯಾಟ್ ಫಾರ್ಮ್ ಅನ್ನು ಆಧರಿಸಿವೆ. ಇವು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಈ ಎರಡು ಬೈಕ್‌ಗಳು ನೋಡಲು ಬಹಳ ಆಕರ್ಷಕವಾಗಿವೆ. ಜೊತೆಗೆ ಹಲವು ನವೀಕರಿಸಿದ ವೈಶಿಷ್ಟ್ಯಗಳನ್ನು ಪಡೆದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಗಳು ಬಿಡುಗಡೆಯಾದ ಮೇಲೆ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡಬಹುದು.

ಬಹುನಿರೀಕ್ಷಿತ ಮ್ಯಾಟರ್ ಎಲೆಕ್ಟ್ರಿಕ್ ಬೈಕ್‌ಗಳಾದ EXE, UT ಪ್ರದರ್ಶನ

ಮ್ಯಾಟರ್ EXE ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್, ಎಲ್ಇಡಿ ಹೆಡ್‌ಲೈಟ್, ಟೈಲ್ ಲೈಟ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್ ನೊಂದಿಗೆ ಫ್ಲಾಟ್ ಸೀಟ್ ಅನ್ನು ಹೊಂದಿದೆ. ಇದರ ಸೀಟ್ ರೈಡರ್ ಮತ್ತು ಪಿಲಿಯನ್‌ಗೆ ತುಂಬಾ ಆರಾಮದಾಯಕವಾಗಿದೆ ಎಂದು ಹೇಳಬಹುದು. ಇದರಿಂದಲೇ ಸ್ಪೋರ್ಟಿ ವಿನ್ಯಾಸ ಹೊಂದಿರುವ ಪ್ರಯಾಣಿಕ ಬೈಕ್ ಇದಾಗಿದೆ. ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಇದೆ.

ಮ್ಯಾಟರ್ ಕಂಪನಿಯ ಈ ಎಲೆಕ್ಟ್ರಿಕ್ ಬೈಕ್ ಫ್ರಂಟ್ ಮತ್ತು ರೇರ್ ಡಿಸ್ಕ್ ಬ್ರೇಕ್ ಗಳನ್ನು ಪಡೆದಿದ್ದು, ರೈಡರ್ ಗಳಿಗೆ ತುಂಬಾ ಸೂಕ್ತವಾಗಿರುವ ಬೈಕ್ ಎಂದು ಹೇಳಬಹುದು. ಈ ಬೈಕ್ ಟ್ರೆಲ್ಲಿಸ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದ್ದು, ಆರಾಮದಾಯಕವಾಗಿ ರೈಡಿಂಗ್ ಮಾಡಬಹುದು. ಇದು ಪಿರೆಲ್ಲಿ ಏಂಜೆಲ್ ಜಿಟಿ ಟೈರ್‌ಗಳನ್ನು ಹೊಂದಿದೆ. ಅಲ್ಲದೆ, ಆಟೋ ಎಕ್ಸ್‌ಪೋದಲ್ಲಿ ಕಾಣಿಸಿಕೊಂಡಿರುವ ಈ ಎರಡು ಬೈಕ್‌ಗಳಲ್ಲಿ ಒಂದು ವೈಟ್ ಕಲರ್ ಮತ್ತು ಇನ್ನೊಂದು ನಿಯಾನ್ ಬಣ್ಣದಲ್ಲಿದೆ.

ಬಹುನಿರೀಕ್ಷಿತ ಮ್ಯಾಟರ್ ಎಲೆಕ್ಟ್ರಿಕ್ ಬೈಕ್‌ಗಳಾದ EXE, UT ಪ್ರದರ್ಶನ

ಮ್ಯಾಟರ್‌ನ ಇನ್ನೊಂದು ಎಲೆಕ್ಟ್ರಿಕ್ ಬೈಕ್ 'UT ಕಾನ್ಸೆಪ್ಟ್' ಬಗ್ಗೆ ಹೇಳುವುದಾದರೆ, ಇದೊಂದು ಅಡ್ವೆಂಚರ್ಸ್ ಬೈಕ್ ಎಂದು ಗೊತ್ತಾಗಿದೆ. ಇದು ಡ್ಯುಯಲ್ ಪರ್ಪಸ್ ಟೈರ್, ವಿಶಾಲ ಮತ್ತು ಆರಾಮದಾಯಕ ಸೀಟ್, ಸ್ಯಾಡಲ್ ಸ್ಟೇಗಳು, ನಕಲ್ ಗಾರ್ಡ್, ದೊಡ್ಡ ಸ್ಟೋರೇಜ್ ಬಾಕ್ಸ್ ಮತ್ತು ಹೊಂದಿದೆ. ಇದು ಸಹ ಟ್ರೆಲ್ಲಿಸ್ ಫ್ರೇಮ್ ಅನ್ನು ಆಧರಿಸಿದೆ. ಈ ಬೈಕ್ ತುಂಬಾ ಹೊಸದಾಗಿ ಕಾಣುತ್ತಿದ್ದು, ಗ್ರಾಹಕರನ್ನು ಆಕರ್ಷಿಸುತ್ತದೆ ಎಂದು ಹೇಳಬಹುದು.

ಮ್ಯಾಟರ್ ಎಲೆಕ್ಟ್ರಿಕ್ ಬೈಕ್‌ಗಳು ಗೇರ್ ಲಿವರ್‌ಗಳನ್ನು ಸಹ ಹೊಂದಿವೆ. ಇದು ಅವುಗಳ ಗಮನಾರ್ಹ ಫೀಚರ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಗೇರ್ ಬಾಕ್ಸ್ ಆಯ್ಕೆಯನ್ನು ಈವರೆಗೆ ಹೊಂದಿಲ್ಲ. ಬಹುಶಃ ಇದು ಮಾರುಕಟ್ಟೆಯಲ್ಲಿ ಗೇರ್‌ಬಾಕ್ಸ್‌ನೊಂದಿಗೆ ಬಂದ ಮೊದಲ ಎಲೆಕ್ಟ್ರಿಕ್ ಬೈಕ್ ಆಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಆದರೆ, ಬೆಲೆಗಳನ್ನು ಇನ್ನೂ ಬಹಿರಂಗವಾಗಿಲ್ಲ. ಅದನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.

ಕಂಪನಿಯು ಈ ಬೈಕ್‌ನಲ್ಲಿ ಲಿಕ್ವಿಡ್ ಕೂಲ್ಡ್ ಮೋಟಾರ್ ಅನ್ನು ಉಪಯೋಗ ಮಾಡಿದೆ. ಆದ್ದರಿಂದ ಕಾರ್ಯಕ್ಷಮತೆಯ ದೃಷ್ಟಿಯಿಂದ ಇದು ಸಾಮಾನ್ಯ ಮೋಟಾರ್‌ಗಿಂತ ಉತ್ತಮವಾಗಿರುತ್ತದೆ ಎಂದು ಹೇಳಬಹುದು. ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ ಆಧುನಿಕ ವೈಶಿಷ್ಟ್ಯಗಳು ಲಭ್ಯವಿವೆ. 7-ಇಂಚಿನ ಟಚ್ ಸ್ಕ್ರೀನ್, 4G ಸಂಪರ್ಕ, ಬ್ಲೂಟೂತ್ ಮತ್ತು ಆಂಡ್ರಾಯ್ಡ್ ಸಾಫ್ಟ್‌ವೇರ್ ಸಪೋರ್ಟ್, ನ್ಯಾವಿಗೇಷನ್ ಮತ್ತು ವಾಯ್ಸ್ ಕಮಾಂಡ್ ವೈಶಿಷ್ಟ್ಯಗಳನ್ನು ಹೊಂದಿದೆ.

ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಮ್ಯಾಟರ್ ಮಾತ್ರವಲ್ಲದೆ, ಟಿವಿಎಸ್ 'iQube ST' ಇ-ಸ್ಕೂಟರ್ ಅನ್ನು ಪ್ರದರ್ಶಿಸಿದ್ದು, ಇದು ಕೈಗೆಟುವ ಬೆಲೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ. 4.56 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಪವರ್ ಮೋಡ್‌ನಲ್ಲಿ 110 ಕಿಮೀ ಮತ್ತು ನಾರ್ಮಲ್ ಮೋಡ್‌ನಲ್ಲಿ 145 ಕಿಮೀ ರೈಡಿಂಗ್ ರೇಂಜ್ ನೀಡುತ್ತದೆ. 82 kmph ಟಾಪ್ ಸ್ವೀಡ್ ಹೊಂದಿದ್ದು, 4 bhp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಬಹುದು.

More from DriveSpark

Article Published On: Friday, January 13, 2023, 19:05 [IST]
English summary
Auto expo 2023 much awaited mater electric bikes exe ut showcased details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+