ರೂ. 499 ಬುಕಿಂಗ್ ಬೆಲೆ: 150 ಕಿ.ಮೀ ರೇಂಜ್, Revolt RV400 ಬೈಕ್‌ಗೆ ಹೊಸ ಬಣ್ಣ ಸೇರ್ಪಡೆ

ರಟ್ಟನ್ ಇಂಡಿಯಾ ಎಂಟರ್‌ಪ್ರೈಸಸ್‌ನ ಭಾಗವಾಗಿರುವ ರಿವೋಲ್ಟ್ ಮೋಟಾರ್ಸ್, ತನ್ನ RV400 ಮೋಟಾರ್‌ಸೈಕಲ್‌ಗೆ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ. ಈ ಮೂಲಕ Revolt RV400 ಈಗ ಲೈಟ್ನಿಂಗ್ ಯೆಲ್ಲೋ ಪೇಂಟ್ ಸ್ಕೀಮ್‌ನಲ್ಲಿ ಲಭ್ಯವಿದ್ದು, ಈ ಮೋಟಾರ್ ಸೈಕಲ್‌ಗೆ ಹೆಚ್ಚಿನ ಆಕರ್ಷಕ ನೋಟವನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಈ ಹೊಸ ಬಣ್ಣದ ಆಯ್ಕೆಯೊಂದಿಗೆ ಬರುವ ಮೋಟಾರ್‌ಸೈಕಲ್‌ ಬುಕಿಂಗ್‌ಗಳು ಕೂಡ ತೆರೆದಿದ್ದು, ರೂ. 499 ಪಾವತಿಸಿ ಬುಕಿಂಗ್ ಮಾಡಿಕೊಳ್ಳಬಹುದು. ಹೊಸ ಲೈಟ್ನಿಂಗ್ ಯೆಲ್ಲೋ ಬಣ್ಣವು RV400 ಮೇಲೆ ಡ್ಯುಯಲ್ ಟೋನ್ ನೀಡುತ್ತದೆ. ಕೆಳಗಿನ ಫೇರಿಂಗ್ ಮತ್ತು ವೀಲ್‌ಗಳು ಸೇರಿದಂತೆ ಬ್ಲಾಕ್ - ಔಟ್ ಶೈನಿಂಗ್‌ನೊಂದಿಗೆ ಪೂರಕವಾಗಿದೆ ಎಂದು ರಿವೋಲ್ಟ್ ಮೋಟಾರ್ಸ್ ಹೇಳಿಕೊಂಡಿದೆ.

revolt-rv400-ev-arrives-in-new-lightning-yellow-colour-details

ಹೊಸ ಬಣ್ಣದ ಆಯ್ಕೆಯು ಯಾವುದೇ ಯಾಂತ್ರಿಕ ನವೀಕರಣಗಳನ್ನು ಅಥವಾ ಬೆಲೆ ಬದಲಾವಣೆಯನ್ನು ಪಡೆದಿಲ್ಲ. ಮೊದಲಿನಂತೆಯೇ RV400 ಬೆಲೆಯು ಅದೇ ರೂ. 1.19 ಲಕ್ಷದಿಂದ (ಎಕ್ಸ್ ಶೋ ರೂಂ, ದೆಹಲಿ, ಸಬ್ಸಿಡಿ ನಂತರ) ಆರಂಭವಾಗುತ್ತದೆ. ಇನ್ನು ಕಂಪನಿಯು ಈ ಹೊಸ ಬಣ್ಣದ ಜೊತೆಗೆ ಗ್ರಾಹಕರಿಗೆ ಈ ಹಿಂದಿನಿಂದಲೂ ಹಲವು ಬಣ್ಣದ ಆಯ್ಕೆಗಳನ್ನು ನೀಡುತ್ತಿದೆ.

ರಿವೋಲ್ಟ್ RV400 ಸ್ಟೆಲ್ತ್ ಬ್ಲ್ಯಾಕ್ ಲಿಮಿಟೆಡ್ ಎಡಿಷನ್, ಇಂಡಿಯಾ ಬ್ಲೂ ಕ್ರಿಕೆಟ್ ಸ್ಪೆಷಲ್ ಎಡಿಷನ್ ಬಣ್ಣಗಳನ್ನು ಕೂಡ ಕಂಪನಿ ಇತ್ತೀಚಗೆ ಪರಿಚಯಿಸಿತ್ತು. ಅದೇ ಸಮಯದಲ್ಲಿ ರಿವೋಲ್ಟ್ RV400 ಸ್ಟಾಂಡರ್ಡ್‌ ಬಣ್ಣಗಳನ್ನು ನೋಡುವುದಾದರೆ- ಕಾಸ್ಮಿಕ್ ಬ್ಲ್ಯಾಕ್ ಮತ್ತು ಮಿಸ್ಟ್ ಗ್ರೇ ಬಣ್ಣಗಳು ಕೂಡ ಲಭ್ಯವಿದೆ. ಈ ಬಣ್ಣಗಳ ಪೈಕಿ ಲಿಮಿಟೆಡ್ ಎಡಿಷನ್ ಹಾಗೂ ಕ್ರಿಕೆಟ್ ಸ್ಪೆಷಲ್ ಎಡಿಷನ್‌ಗೆ ಈ ಹಿಂದೆ ಬೇಡಿಕೆ ಹೆಚ್ಚಾಗಿತ್ತು.

revolt-rv400-ev-arrives-in-new-lightning-yellow-colour-details

ರಿವೋಲ್ಟ್ RV400 3 kW (4 bhp) ಮಿಡ್-ಡ್ರೈವ್ ಮೋಟರ್‌ನೊಂದಿಗೆ ಬರಲಿದ್ದು, ಇದು 170 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಬೆಲ್ಟ್ ಡ್ರೈವ್ ಮೂಲಕ ಹಿಂದಿನ ಚಕ್ರಕ್ಕೆ ಪವರ್ ನೀಡುತ್ತದೆ. ಇದರ ಚಾರ್ಜಿಂಗ್ ವಿಷಯಕ್ಕೆ ಬದರೆ ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿದೆ.

ರಿವೋಲ್ಟ್ RV400 ವೇಗ ಹಾಗೂ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದ್ರೆ, ಇದರ ಗರಿಷ್ಠ ವೇಗವು ಗಂಟೆಗೆ 85 ಕಿ.ಮೀ ಎಂದು ರೇಟ್ ಮಾಡಲಾಗಿದೆ. ಈ ಮೋಟಾರ್ ಸೈಕಲ್ ಅನ್ನು ಪ್ರಮಾಣಿತ ಚಾರ್ಜರ್ ಬಳಸಿ ಕೇವಲ 4.5 ಗಂಟೆಗಳಲ್ಲಿ ಶೇ 100 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

revolt-rv400-ev-arrives-in-new-lightning-yellow-colour-details

ಹೊಸ ಬಣ್ಣದ ಕುರಿತು ರಟ್ಟನ್ ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಬಿಸಿನೆಸ್ ಚೇರ್ ಪರ್ಸನ್ ಅಂಜಲಿ ರತ್ತನ್ ಮಾತನಾಡಿ, "ಲೈಟ್ನಿಂಗ್ ಯೆಲ್ಲೋ ರೂಪಾಂತರದಲ್ಲಿರುವ RV400 ಸ್ಪೋರ್ಟಿ ವೈಬ್ ಮತ್ತು ಸಮಕಾಲೀನ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಬೈಕ್‌ನ ಮೋಡಿಯನ್ನು ಹೆಚ್ಚಿಸುತ್ತದೆ. ಇದು ಅತ್ಯುತ್ತಮವಾದ ಶಕ್ತಿಯೊಂದಿಗೆ ರಿವೋಲ್ಟ್ ಮೋಟಾರ್ಸ್‌ನ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು."

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 12, 2023, 15:57 [IST]
English summary
Revolt rv400 ev arrives in new lightning yellow colour details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+