ಹೆಚ್ಚಿನ ರೇಂಜ್, ಅಗ್ಗದ ಬೆಲೆಯಲ್ಲಿ ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಬಿಡುಗಡೆ
ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ತಯಾರಕ ಕಂಪನಿಯಾದ ರಿವೋಲ್ಟ್ ಮೋಟಾರ್ಸ್ ಹೊಸ RV400 ಎಲೆಕ್ಟ್ರಿಕ್ ಬೈಕಿನ ಲಿಮಿಟೆಡ್ ಎಡಿಷನ್ ಆನ್ನು ಹೊಸ ಸ್ಟೆಲ್ತ್ ಬ್ಲ್ಯಾಕ್ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಹೊಸ ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ (Revolt RV400 Limited Edition) ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.17 ಲಕ್ಷವಾಗಿದೆ.
ರಿವೋಲ್ಟ್ ಮೋಟಾರ್ಸ್ ಕಂಪನಿಯು ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಹೊಸ ಲಿಮಿಟೆಡ್ ಎಡಿಷನ್ ಮಾದರಿಯನ್ನು ಬಿಡುಗಡೆಗೊಳಿಸಳಾಗಿದೆ. ಈ ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಎಲೆಕ್ಟ್ರಿಕ್ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಬಿಸಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ರಿವೋಲ್ಟ್‌ನ ಡೀಲರ್‌ಶಿಪ್‌ಗಳಲ್ಲಿ ರೂ.4,999 ಟೋಕನ್ ದರ ಪಾವತಿಸಿ ಬುಕ್ ಮಾಡಬಹುದು.

ಹೊಸ ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಅನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹೊಸ ಎಲೆಕ್ಟ್ರಿಕ್ ಬೈಕಿನ ವಿತರಣೆಯು ಅಕ್ಟೋಬರ್ ತಿಂಗಳಿನಿಂದ ಪ್ರಾರಂಭವಾಗುತ್ತವೆ. ಹೊಸ ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಸಾಮಾನ್ಯ ಮಾದರಿಗಿಂತ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ. ಇದು ಈಗ ಹಿಂಬದಿಯ ಸ್ವಿಂಗರ್ಮ್, ಹಿಂಭಾಗದ ಗ್ರ್ಯಾಬ್ ಹ್ಯಾಂಡಲ್ ಮತ್ತು ಫ್ರೇಮ್‌ನ ಇತರ ಭಾಗಗಳನ್ನು ಬ್ಲ್ಯಾಕ್ ಔಟ್ ಮಾಡಿದೆ. ಹ್ಯಾಂಡಲ್‌ಬಾರ್‌ನಲ್ಲಿ ಕ್ರೋಮ್ ಅನ್ನು ಹೊಂದಿರುತ್ತದೆ.
ಈ ಹೊಸ ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಮಾದರಿಯ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಗೋಲ್ಡನ್ ಫಿನಿಶ್ ಅಪ್‌ಸೈಡ್ ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಯೆಲ್ಲೋ ಮೊನೊ-ಶಾಕ್‌ನೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಬೈಕಿನಲ್ಲಿ ಸಂಪೂರ್ಣ ಬ್ಲಾಕ್ ಬಣ್ಣದ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ.

ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಎಲೆಕ್ಟ್ರಿಕ್ ಬೈಕಿನ ಮುಂಭಾಗದಲ್ಲಿ ಸಣ್ಣ ಫ್ಲಾಟ್‌ಸ್ಕ್ರೀನ್ ಹೊಂದಿದೆ. ಇದು ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ LED ಹೆಡ್‌ಲ್ಯಾಂಪ್‌ಗಳು, LCD ಎನ್ಸ್ ಟ್ರೂಮೆಂಟ್ ಕನ್ಸೋಲ್, ರೈಡ್ ಮೋಡ್‌ಗಳು, ಇ-ಸಿಮ್‌ನೊಂದಿಗೆ ಮೊಬೈಲ್ ಅಪ್ಲಿಕೇಶನ್ ಕನೆಕ್ಟ್ ಮತ್ತು ಇತರವುಗಳನ್ನು ಒಳಗೊಂಡಿವೆ. ಈ ಎಲೆಕ್ಟ್ರಿಕ್ ಬೈಕಿನಲ್ಲಿ ಅಗತ್ಯವಿರುವ ಎಲ್ಲಾ ಫೀಚರ್ಸ್ ಗಳನ್ನು ಒಳಗೊಂಡಿವೆ.
ರಿವೋಲ್ಟ್ RV400 ಲಿಮಿಟೆಡ್ ಎಡಿಷನ್ ಎಲೆಕ್ಟ್ರಿಕ್ ಬೈಕಿನಲ್ಲಿ ಅದೇ 3.24 kWh Li-ion ಬ್ಯಾಟರಿ ಪ್ಯಾಕ್ ಮತ್ತು 3 kW ಮಿಡ್-ಡ್ರೈವ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ 156 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಬೈಕ್ ARAI ಪ್ರಕಾರ 85 ಕಿ.ಮೀ ರೇಂಜ್ ಅನು ನೀಡುತ್ತದೆ. ಇನ್ನು ಈ ಬೈಕ್ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಆಗಲು 4.5 ಗಂಟೆಗಳ ಅವಧಿ ಬೇಕಾಗಿದೆ.
ಇನ್ನು ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತಿದೆ. ಜನಪ್ರಿಯ ದ್ವಿಚಕ್ರ ವಾಹನ ಕಂಪನಿಗಳು ಎಲೆಕ್ಟ್ರಿಕ್ ದಿಚಕ್ರ ವಾಹನಗಳ ಉತ್ಪಾದನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಹಲವು ಹೊಸ ಕಂಪನಿಗಳು ಎಲೆಕ್ಟ್ರಿಕ್ ವಾಹನ ವಿಭಾಗವನ್ನು ಪ್ರವೇಶೀಸಲಿದೆ. ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಕಂಪನಿಯು ಇ-ಕಾಮರ್ಸ್ ಮಾರುಕಟ್ಟೆ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಕಂಪನಿಯು ತನ್ನ RV400 ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡುವ ಸಲುವಾಗಿ ಇ-ಕಾಮರ್ಸ್ ಮಾರುಕಟ್ಟೆ ಸ್ಥಳವಾದ ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ. ರಿವೋಲ್ಟ್‌ನ RV400 ಬೈಕ್‌ಗಳನ್ನು ಕೊಚ್ಚಿ ಪೊಲೀಸ್ ಇಲಾಖೆಯ ಫ್ಲೀಟ್‌ಗೆ ಸೇರಿಸಲಾಗಿದೆ. ರಿವೋಲ್ಟ್ ತನ್ನ ಗ್ರಾಹಕರಿಗೆ ತನ್ನ ಎಲೆಕ್ಟ್ರಿಕ್ ಬೈಕ್‌ಗಾಗಿ ತಡೆರಹಿತ ಖರೀದಿ ಅನುಭವವನ್ನು ನೀಡಲು ಸಾಧ್ಯವಾಗುತ್ತದೆ.
ಹೊಸ ರಿವೋಲ್ಟ್ RV400 ಎಲೆಕ್ಟಿಕ್ ಬೈಕ್ ಉತ್ತಮ ಪರ್ಫಾಮೆನ್ಸ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಈ ವರ್ಷದ ಮಾರ್ಚ್‌ನಲ್ಲಿ, ಕಂಪನಿಯು ರಾಯ್‌ಪುರ, ವಾಪಿ, ಬಹದ್ದೂರ್‌ಗಢ, ಮುಂಬೈ, ಔರಂಗಾಬಾದ್, ಭುವನೇಶ್ವರ್, ಕೋಟಾ, ಆಗ್ರಾ, ಝಾನ್ಸಿ, ಮೀರತ್, ಸೂರತ್, ಡೆಹ್ರಾಡೂನ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ನಂತಹ ಭಾರತದ ವಿವಿಧ ನಗರಗಳಲ್ಲಿ 15 ಹೊಸ ಡೀಲರ್‌ಶಿಪ್‌ಗಳೊಂದಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ.


Click it and Unblock the Notifications








