ರಾಯಲ್ ಎನ್‌ಪೀಲ್ಡ್ ಬೈಕ್ ಮೇಲೆ ಓಡಾಡಲು ಇನ್ಮುಂದೆ ಲಕ್ಷಗಟ್ಟಲೆ ಖರ್ಚು ಮಾಡಬೇಕಾಗಿಲ್ಲ: ಇಲ್ಲಿದೆ ಹೊಸ ಮಾರ್ಗ
ರಾಯಲ್ ಎನ್‌ಫೀಲ್ಡ್ (Royal Enfield) ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್. ಇಂದಿಗೂ ರಾಯಲ್ ಎನ್ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆಯುತ್ತದೆ.
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಇದೀಗ ರಾಯಲ್ ಎನ್ಫೀಲ್ಡ್ ಬೈಕ್ ರೈಡ್ ಆನಂದಿಸಲು ಹೊಸ ಮಾರ್ಗ ಇಲ್ಲಿದೆ. ಈ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಬಾಡಿಗೆ (Royal Enfield Bike Rental) ಕಾರ್ಯಕ್ರಮವು ಆರಂಭದಲ್ಲಿ 25 ನಗರಗಳಲ್ಲಿ ಪ್ರಾರಂಭಿಸಲಿದೆ. ಇನ್ನು ಭವಿಷ್ಯದಲ್ಲಿ ಹೆಚ್ಚಿನ ವಿಸ್ತರಣೆಗಾಗಿ ಯೋಜನೆಗಳೊಂದಿಗೆ ಒಳಗೊಂಡಿದೆ.

40 ಕ್ಕೂ ಹೆಚ್ಚು ಬಾಡಿಗೆ ನಿರ್ವಾಹಕರನ್ನು ಬಳಸಿಕೊಳ್ಳುವ ಮೂಲಕ, 300 ಕ್ಕೂ ಹೆಚ್ಚು ಬೈಕ್ ಗಳು ಅಲ್ಪಾವಧಿಯ ಬಾಡಿಗೆಗೆ ಲಭ್ಯವಿರುತ್ತವೆ. ಅಹಮದಾಬಾದ್, ಮುಂಬೈ, ಗುಜರಾತ್, ಮಹಾರಾಷ್ಟ್ರ, ಚಂಡೀಗಢ, ಧರ್ಮಶಾಲಾ, ಲೇಹ್, ಮನಾಲಿ, ಹರಿದ್ವಾರ ಮತ್ತು ಋಷಿಕೇಶ್ ಜೊತೆಗೆ ಹಲವಾರು ನಗರಗಳಲ್ಲಿ ಆರಂಭದಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಬಾಡಿಗೆ ಪ್ರಕ್ರಿಯೆಯನ್ನು ಸರಳ ಮತ್ತು ಬಳಕೆದಾರ ಸ್ನೇಹಿಯಾಗಿ ಮಾಡಲಾಗಿದೆ.
ಆಸಕ್ತ ವ್ಯಕ್ತಿಗಳು ರಾಯಲ್ ಎನ್‌ಫೀಲ್ಡ್ ರೆಂಟಲ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ, ಗರ, ಪಿಕ್-ಅಪ್ ದಿನಾಂಕ ಮತ್ತು ಸಮಯ ಮತ್ತು ಡ್ರಾಪ್-ಆಫ್ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಸೈಟ್ ನಂತರ ಲಭ್ಯವಿರುವ ಮಾದರಿಗಳ ಪಟ್ಟಿಯನ್ನು ಮತ್ತು ಆಯ್ಕೆಮಾಡಿದ ನಂತರದಲ್ಲಿ ನಿಮಗೆ ಬೈಕಿನ ಬಾಡಿಗೆ ವೆಚ್ಚಗಳನ್ನು ಪ್ರದರ್ಶಿಸುತ್ತದೆ.

ಫಾರ್ಮ್ ಅನ್ನು ಸಲ್ಲಿಸಿದ ನಂತರ, ಆಪರೇಟರ್‌ನ ವಿವರಗಳನ್ನು ಒದಗಿಸಲಾಗುತ್ತದೆ. ಆಪರೇಟರ್ ವಿಧಿಸಿದ ಮರುಪಾವತಿಸಬಹುದಾದ ಠೇವಣಿ ಇರಬಹುದು. ಬಾಡಿಗೆ ನಿಲ್ದಾಣದಲ್ಲಿ ಬೈಕ್ ಅನ್ನು ಇಳಿಸಿದ ನಂತರ ಈ ಮೊತ್ತವನ್ನು ಸಾಮಾನ್ಯವಾಗಿ ಬಳಕೆದಾರರಿಗೆ ಹಿಂತಿರುಗಿಸಲಾಗುತ್ತದೆ. ರಾಯಲ್ ಎನ್‌ಫೀಲ್ಡ್‌ನ ಮುಖ್ಯ ಬ್ರಾಂಡ್ ಅಧಿಕಾರಿ ಮೋಹಿತ್ ಧರ್ ಜಯಲ್ ಅವರು ಪ್ರಮುಖ ಹೆಜ್ಜೆಯ ಹಿಂದಿನ ದೃಷ್ಟಿಯನ್ನು ವಿವರಿಸಿದರು.
ಮೋಹಿತ್ ಧರ್ ಜಯಲ್ ಮಾತನಾಡಿ, ನಮ್ಮ ವಿಸ್ತೃತ ಕುಟುಂಬ ಮೋಟಾರ್‌ಸೈಕಲ್ ಬಾಡಿಗೆ ಮತ್ತು ಟೂರ್ ಆಪರೇಟರ್‌ಗಳು ಮತ್ತು ಮೆಕ್ಯಾನಿಕ್‌ಗಳು ಪರಿಶುದ್ಧ ಮೋಟಾರ್‌ಸೈಕ್ಲಿಂಗ್‌ನ ಧ್ಯೇಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಹೊಸ ರಾಯಲ್ ಎನ್‌ಫೀಲ್ಡ್ ರೆಂಟಲ್ಸ್ ಕಾರ್ಯಕ್ರಮ ಭಾರತದಾದ್ಯಂತ ನಮ್ಮ ಬೈಕ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಬಾಡಿಗೆ ನಿರ್ವಾಹಕರಿಗೆ ಅಮೂಲ್ಯವಾದ ಬೆಂಬಲವನ್ನು ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು.

ಇನ್ನು ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಗಾಗಿ ಫ್ಲೆಕ್ಸ್-ಇಂಧನ ಬೈಕ್‌ಗಳನ್ನು ತಯಾರಿಸಲಿವೆ. ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ತನ್ನ ಮೊದಲ ಫ್ಲೆಕ್ಸ್-ಇಂಧನದ ಬೈಕ್ ಅನ್ನು 2024ರಲ್ಲಿ ಬಿಡುಗಡೆ ಮಾಡಲಿದೆ. ಸದ್ಯಕ್ಕೆ ರಾಯಲ್ ಎನ್‌ಫೀಲ್ಡ್ ಅವರು ಫ್ಲೆಕ್ಸ್-ಇಂಧನದ (Fex-fuel)ಲ್ಲಿ ಚಲಿಸಲು ಸಾಧ್ಯವಾಗುವಂತೆ ಯಾವ ಮೋಟಾರ್‌ಸೈಕಲ್ ಅನ್ನು ಮಾರ್ಪಡಿಸುತ್ತಾರೆ ಎಂಬ ಮಾಹಿತಿಗಳು ಬಹಿರಂಗವಾಗಿಲ್ಲ. ಜನಪ್ರಿಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನು ಮೊದಲು ಮಾರ್ಪಡಿಸಲು ಅರ್ಥಪೂರ್ಣವಾಗಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬ್ರಾಂಡ್‌ಗೆ ಹೆಚ್ಚು ಮಾರಾಟವಾಗುವ ಬೈಕ್ ಆಗಿರುವುದರಿಂದ ಫ್ಲೆಕ್ಸ್-ಇಂಧನದಲ್ಲಿ ಚಲಿಸಬಹುದು. ಕ್ಲಾಸಿಕ್ 350 ಬೈಕ್ ಅನ್ನು ಹೊಸ J-ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಆದ್ದರಿಂದ, ಜೆ-ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಇತರ ಮೋಟಾರ್‌ಸೈಕಲ್‌ಗಳು ಭವಿಷ್ಯದಲ್ಲಿ ಫ್ಲೆಕ್ಸ್-ಇಂಧನವನ್ನು ಬೆಂಬಲಿಸಬಹುದು ಎಂದು ನಿರೀಕ್ಷಿಸಬಹುದು. ಇತರ ಬೈಕ್‌ಗಳು ಮೆಟಿಯರ್ 350, ಹಂಟರ್ 350 ಮತ್ತು ಕ್ಲಾಸಿಕ್ 350 ಗಳಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








