ಕೇವಲ 18,000 ರೂ.ಗೆ ಶೋರೂಂನಿಂದ ಹೊಸ ಎನ್‌ಫೀಲ್ಡ್ ಬುಲೆಟ್‌ ಮಾರಾಟ

ಒಮ್ಮೊಮ್ಮೆ ಅಂತರ್ಜಾಲದಲ್ಲಿ ಕೆಲವು ಚಿತ್ರಗಳು ಬಹಳ ವೈರಲ್ ಆಗುತ್ತವೆ. ಅವುಗಳ ಹಿನ್ನೆಲೆ ಹಾಗೂ ಇತಿಹಾಸದಿಂದಲೇ ಎಲ್ಲರ ಗಮನ ಸೆಳೆಯುತ್ತವೆ. ಇಂತಹದೇ ಚಿತ್ರವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಇದೀಗ ಸಖತ್ ವೈರಲ್ ಆಗಿದೆ. ಎನ್‌ಫೀಲ್ಡ್ ಬುಲೆಟ್‌ನ ಡೀಲರ್‌ಶಿಪ್‌ನಿಂದ ಕೇವಲ 18,700 ರೂಗಳಿಗೆ ಮಾರಾಟವಾದ ಬಿಲ್‌ನ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ.

ಈ ಫೋಟೊವನ್ನು royalenfield_4567k ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಇದು ಜನವರಿ 23, 1986 ರಲ್ಲಿ ನೀಡಲಾದ ಬಿಲ್ ಎಂಬುದನ್ನು ನಾವು ಗಮನಿಸಬಹುದು. ಆ ಸಮಯದಲ್ಲಿ ಕಂಪನಿಯನ್ನು ಎನ್‌ಫೀಲ್ಡ್ ಎಂದು ಮಾತ್ರ ಕರೆಯಲಾಗುತ್ತಿತ್ತು. ಎಂ/ಎಸ್ ಆರ್‌ಎಸ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಹೆಸರಿನಲ್ಲಿ ಬಿಲ್ ನೀಡಲಾಗಿದೆ. ಮಾರಾಟದ ಕೈಬರಹದ ಬಿಲ್ ಆ ಸಮಯದಲ್ಲಿ ಜನಪ್ರಿಯವಾಗಿ ಬಳಸಲ್ಪಟ್ಟ ಕಾಗದವನ್ನು ತೋರುತ್ತಿದೆ. ಮಾರಾಟದ ಮಾದರಿಯು ಸ್ಟ್ಯಾಂಡರ್ಡ್ ಬುಲೆಟ್ 350 cc ಬೈಕ್ ಆಗಿದೆ.

ಕೇವಲ 18,000 ರೂ.ಗೆ ಶೋರೂಂನಿಂದ ಹೊಸ ಎನ್‌ಫೀಲ್ಡ್ ಬುಲೆಟ್‌ ಮಾರಾಟ

ಬಿಲ್ ಪ್ರಕಾರ, ಜಾರ್ಖಂಡ್‌ನ ಬೊಕಾರೊ ಸ್ಟೀಲ್ ಸಿಟಿಯ ಕೊಠಾರಿ ಮಾರುಕಟ್ಟೆಯಲ್ಲಿ ಆ ಸಮಯದಲ್ಲಿ ಸಂದೀಪ್ ಆಟೋ ಕಂಪನಿಯ ಡೀಲರ್‌ಶಿಪ್ ಇತ್ತು. ಬಿಲ್ ಮೇಲೆ ಮೂಲ ಎನ್‌ಫೀಲ್ಡ್ ಲೋಗೋ ಕೂಡ ಇದೆ. ಬಿಲ್‌ನಲ್ಲಿ ಆನ್-ರೋಡ್ ಮೊತ್ತವನ್ನು 18,800 ಎಂದು ನಮೂದಿಸಲಾಗಿದೆ. ಹಾಗೆಯೇ ರಿಯಾಯಿತಿಯಾಗಿ 250 ರೂ.ಗಳನ್ನು ಕಡಿಮೆ ಮಾಡಲಾಗಿದೆ. ಇನ್ನೂ 150 ರೂ. ಸೇರಿಸಿ ಅಂತಿಮ ಮೊತ್ತ 18,700 ರೂ.ಗೆ ಇಳಿದಿದೆ. ಪ್ರಸ್ತುತ, ಸ್ಟ್ಯಾಂಡರ್ಡ್ ಬುಲೆಟ್ 350 ನ ಆನ್-ರೋಡ್ ಬೆಲೆ ಸುಮಾರು 1.7 ಲಕ್ಷ ರೂ. ಇದೆ.

ಈ ಬೈಕು ಪ್ರಾರಂಭದಿಂದಲೂ ಕಂಪನಿಯ ಶ್ರೇಣಿಯಲ್ಲಿ ಅತ್ಯಂತ ಪ್ರಮುಖವಾದ ಬೈಕ್ ಆಗಿ ಗುರ್ತಿಸಿಕೊಂಡಿದೆ. ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತದ ಸ್ವಾತಂತ್ರ್ಯದ ನಂತರ, ಹೊಸ ಆಡಳಿತವು ತನ್ನ ಸೈನ್ಯಕ್ಕೆ ಗಡಿ ಗಸ್ತಿನಲ್ಲಿ ಬಳಸಲು ಸೂಕ್ತವಾದ ಮೋಟಾರು ಬೈಕನ್ನು ಹುಡುಕುತಿತ್ತು. ಆ ಸಂದರ್ಭದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು 1952 ರಲ್ಲಿ ಈ ಕಾರ್ಯಕ್ಕಾಗಿ ಅತ್ಯುತ್ತಮ ಮೋಟಾರ್‌ಸೈಕಲ್ ಎಂದು ನಿರ್ಧರಿಸಲಾಯಿತು. ಆಗಿನ ಸರ್ಕಾರವು 1954 ರಲ್ಲಿ 350 ಸಿಸಿ ಮಾದರಿಗಳಲ್ಲಿ 800 ಬೈಕ್‌ಗಳನ್ನು ಖರೀದಿಸಿತ್ತು.

ಏಳು ದಶಕಗಳ ನಂತರ ಕಂಪನಿಯು ಈಗ ದೇಶದ ಅತ್ಯಂತ ಯಶಸ್ವಿ ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಪ್ರಸ್ತುತ ಇದು ಬಹು ವಿಭಾಗಗಳಲ್ಲಿ ಉತ್ಪನ್ನಗಳನ್ನು ಹೊಂದಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಮಾದರಿಗಳನ್ನು ಪರಿಚಯಿಸುವ ಹಾದಿಯಲ್ಲಿದೆ. ಕಂಪನಿಯು ಪ್ರಸ್ತುತ ಹೊಸ 450 cc ಡ್ಯುಯಲ್ ಓವರ್ ಹೆಡ್ ಕ್ಯಾಮ್‌ಶಾಫ್ಟ್ (DOHC) ಎಂಜಿನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಆಯಿಲ್ ಕೂಲಿಂಗ್ ಅನ್ನು ಹೊಂದಿದೆ.

ಇನ್ನು ಇದರ ಇತಿಹಾಸ ನೋಡಿಕೊಂಡರೆ ಚೆನ್ನೈ ಮೂಲದ ಬೈಕ್‌ಮೇಕರ್ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್, ಅದರ ಮೂಲ ಇಂಗ್ಲಿಷ್ ಪರಂಪರೆ ಸೇರಿದಂತೆ, ನಿರಂತರ ಉತ್ಪಾದನೆಯಲ್ಲಿ ಅತ್ಯಂತ ಹಳೆಯ ಜಾಗತಿಕ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಕಂಪನಿಯು ಭಾರತದಲ್ಲಿ ಚೆನ್ನೈನಲ್ಲಿ ಉತ್ಪಾದನಾ ಘಟಕಗಳನ್ನು ನಿರ್ವಹಿಸುತ್ತದೆ. ಇಂಗ್ಲೆಂಡ್‌ನ ವೋರ್ಸೆಸ್ಟರ್‌ಶೈರ್‌ನ ರೆಡ್ಡಿಚ್‌ನ ಎನ್‌ಫೀಲ್ಡ್ ಸೈಕಲ್ ಕಂಪನಿಯು ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿಯ ಮೋಟಾರುಬೈಕ್ ವಿನ್ಯಾಸವಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ರಚಿಸಿತು.

1901 ರಲ್ಲಿ ಮೊದಲ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಅನ್ನು ತಯಾರಿಸಲಾಯಿತು. ಇದು ಈಗ ಭಾಗವಾಗಿರುವ ಭಾರತೀಯ ಮೂಲದ ಮದ್ರಾಸ್ ಮೋಟಾರ್ಸ್ ಭಾರತೀಯ ಕಾರು ತಯಾರಕ ಐಷರ್ ಮೋಟಾರ್ಸ್ ಲಿಮಿಟೆಡ್, ಮೂಲ ಇಂಗ್ಲಿಷ್ ರಾಯಲ್ ಎನ್‌ಫೀಲ್ಡ್‌ನಿಂದ ಪರವಾನಗಿಯನ್ನು ಪಡೆದುಕೊಂಡಿದೆ. ಇಂದಿಗೂ ಭಾರತದಲ್ಲಿ ಪ್ರತಿ ತಿಂಗಳು ರಾಯಲ್ ಎನ್‌ಫೀಲ್ಡ್‌ನಿಂದ ಹಲವು 350 ಸಿಸಿ ಮಾದರಿಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗುವುದನ್ನು ನಾವು ನೋಡಬಹುದು.

ನಮ್ಮ ಡ್ರೈವ್‌ಸ್ಪಾರ್ಕ್ ವೆಬ್ ತಾಣವು ಇಂತಹ ಪ್ರತಿಯೊಂದು ಸುದ್ದಿಯನ್ನು ಬಹಳ ಆಸಕ್ತಿದಾಯಕವಾಗಿ ವಿವರಿಸುತ್ತದೆ. ಕರ್ನಾಟಕದ ಬಹುತೇಕ ಆಟೋ ಪ್ರಿಯರು ನಮ್ಮ ಎಲ್ಲಾ ಸೋಷಿಯಲ್ ಮೀಡಿಯಾಗಳನ್ನು ಫಾಲೋ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಇನ್ನೂ ಹಲವು ಅಡ್ವೆಂಚರ್ ಕುರಿತ ಸುದ್ದಿಗಳನ್ನು ಓದಲು ನಿಮಗೆ ಆಸಕ್ತಿ ಇದ್ದಲ್ಲಿ ನಮ್ಮ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳಿಗೆ ಕಮೆಂಟ್ ಮಾಡಿ ತಿಳಿಸಿ. ಇಂತಹ ಇನ್ನು ಹಲವು ಸುದ್ದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

Most Read Articles

Kannada
English summary
Royal enfield bullet on sale for just rs 18000
Story first published: Monday, January 2, 2023, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X