Royal Enfield Electric Bikes: ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ಸ್ ಕುರಿತು ಬಿಗ್ ಅಪ್ಡೇಟ್: ಇವೇ ಟ್ರೆಂಡ್ ಆಗುತ್ತವೆ!
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (ಇವಿ) ಅಬ್ಬರಿಸುತ್ತಿದ್ದು, ಯುವಕರ ಹಾಟ್ ಫೆವರೇಟ್ ಬೈಕ್‌ಗಳನ್ನು ತಯಾರಿಸುವ 'ರಾಯಲ್ ಎನ್‌ಫೀಲ್ಡ್' ಕೂಡ ಇವಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಇದೀಗ, ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದ್ದು, ಮುಂಬರುವ ವರ್ಷಗಳಲ್ಲಿ ಅವೇ ಟ್ರೆಂಡ್ ಆಗಲಿವೆ.
ಈಗಾಗಲೇ, ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಓಲಾ, ಎಥರ್, ಟಿವಿಎಸ್, ಹೀರೋ ಹಾಗೂ ಬಜಾಜ್ ಕಂಪನಿಗಳು ಆವರಿಸಿಕೊಂಡಿವೆ. ಆದರೆ, ಅವೆಲ್ಲವೂ ಸ್ಕೂಟರ್ ಗಳನ್ನು ಮಾತ್ರ ಮಾರಾಟ ಮಾಡುತ್ತಿವೆ. ಬೈಕ್‌ಗಳನ್ನು ಕೆಲವು ಸ್ಟಾರ್ಟ್ಅಪ್ ಬಿಟ್ಟರೆ, ಯಾವ ದೊಡ್ಡ ಕಂಪನಿಗಳು ಸೇಲ್ ಮಾಡುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡಿರುವ ರಾಯಲ್ ಎನ್‌ಫೀಲ್ಡ್ ತನ್ನದೇ ಆಕರ್ಷಕ ಎಲೆಕ್ಟ್ರಿಕ್ ಬೈಕ್‌ಗಳ ತಯಾರಿಕೆಯಲ್ಲಿ ತೊಡಗಿದೆ.

ಪ್ರಮುಖವಾಗಿ ಕಂಪನಿ ಎರಡು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅಭಿವೃದ್ಧಿಪಡಿಸುತ್ತಿದೆ. ಅದರಲೊಂದು ಬೈಕ್‌ನ್ನು (L1A ಕೋಡ್ ನೇವ್) ರಾಯಲ್ ಎನ್‌ಫೀಲ್ಡ್ ತಜ್ಞರೇ ಸ್ವತಃ ಅಭಿವೃದ್ಧಿಪಡಿಸುತ್ತಿದ್ದಾರೆ. ಇನೊಂದು ಮೋಟಾರ್‌ಸೈಕಲ್ ಅನ್ನು ಸ್ಪ್ಯಾನಿಷ್ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'ಸ್ಟಾರ್ಕ್' ಸಹಯೋಗದಲ್ಲಿ ತಯಾರಿಸುತ್ತಿದೆ. ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸ್ಟಾರ್ಕ್ ಕಂಪನಿಯ ಆಫ್ ರೋಡ್ ಮೋಟಾರ್‌ಸೈಕಲ್ 80 hp ಪವರ್ ಉತ್ಪಾದಿಸಲಿದ್ದು, 2 ಗಂಟೆಯಲ್ಲಿ ಚಾರ್ಜ್ ಆಗಲಿದ್ದು, 6 ಗಂಟೆ ರೈಡ್ ಮಾಡಬಹುದು.
ರಾಯಲ್ ಎನ್‌ಫೀಲ್ಡ್ ತಯಾರಿಸುತ್ತಿರುವ ಇವೆರೆಡು ಬೈಕ್‌ಗಳ ರೇಂಜ್, ಪವರ್‌ಟ್ರೇನ್ ಹಾಗೂ ವೈಶಿಷ್ಟ್ಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅತ್ಯುತ್ತಮವಾಗಿಯೇ ಇರಲಿವೆ. ಜೊತೆಗೆ ಹೆಚ್ಚಿನ ಯುವಕರು ಇಷ್ಟಪಡುವಂತೆಯೇ ಆಫ್ ರೋಡ್ ಬೈಕ್‌ಗಳೇ ಆಗಿರಲಿವೆ. ಸದ್ಯದ ಮಾಹಿತಿ ಪ್ರಕಾರ, ಹಿಮಾಲಯನ್ (Himalayan) ಮೋಟಾರ್‌ಸೈಕಲ್ ರೂಪದಲ್ಲಿ ಹೊಸ ಎಲೆಕ್ಟ್ರಿಕ್ ಬೈಕ್‌ಗಳಿರಲಿವೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಇದೀಗ, L1A ಕೋಡ್ ನೇವ್ ಹೊಂದಿರುವ ಬೈಕ್ ಬಿಡುಗಡೆ ಬಗ್ಗೆ ಕೊಂಚ ವಿವರಗಳು ಲಭಿಸಿದ್ದು, ಈ ವರ್ಷದ ಅಂತ್ಯದೊಳಗೆ ಈ ಬೈಕ್ ಮಾದರಿಯನ್ನು ಅನಾವರಣ ಮಾಡಲಾಗುತ್ತದೆ. ಮುಂದಿನ ವರ್ಷ (2024)ದ ಮೊದಲಾರ್ಧದಲ್ಲಿ ಬಹುತೇಕ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಇದರ ಬೆಲೆ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಅದು ಕೈಗೆಟುಕುವ ಬೆಲೆಯಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಮಾರಾಟ ಮಾಡುವ ಬೈಕ್‌ಗಳ ಬಗ್ಗೆ ಹೇಳುವುದಾದರೆ, ಹಂಟರ್ 350 ರೂ.1,49,900, ಕ್ಲಾಸಿಕ್ 350 ರೂ.1,90,092, ಬುಲೆಟ್ 350 ರೂ.1,50,999, ಕಾಂಟಿನೆಂಟಲ್ ಜಿಟಿ 650 ರೂ.3,19,000, ಮೆಟಿಯರ್ 350 ರೂ. 2,01,253, ಹಿಮಾಲಯನ್ ರೂ.2,15,900, ಸೂಪರ್ ಮೀಟಿಯರ್ 650 ರೂ.3,48,900, ಇಂಟರ್‌ಸೆಪ್ಟರ್ 650 ರೂ.3,03,000 ಹಾಗೂ ಸ್ಕ್ರ್ಯಾಮ್ 411 ಬೈಕ್ ರೂ.2,03,085 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
1901ರಲ್ಲಿ ಆರಂಭವಾಗಿ ಸುದೀರ್ಘ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ರಾಯಲ್ ಎನ್‌ಫೀಲ್ಡ್, ಟ್ರೆಂಡ್ ಅನುಗುಣವಾಗಿ ತಾನು ಬದಲಾಗುತ್ತಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಿಕೆಯತ್ತ ಮುಖ ಮಾಡಿದೆ. ಅದಕ್ಕಾಗಿ ಹೊಸ ಕಾರ್ಖಾನೆ ತೆರೆಯಲು ತಮಿಳುನಾಡಿನ ಚೆಯ್ಯರ್‌ನಲ್ಲಿ 60 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ರೂ.1,500 ಕೋಟಿ ಹೂಡಿಕೆ ಮಾಡಲು ತೀರ್ಮಾನ ಮಾಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








