Royal Enfield Guerrilla 450: ರಣಕ್ಕೆ ಸಜ್ಜಾದ ರಾಯಲ್‌ ಎನ್‌ಫೀಲ್ಡ್... ಹೊಸ ಹೆಸರು ಸೋರಿಕೆ

ನವೆಂಬರ್‌ನಲ್ಲಿ ರಾಯಲ್‌ ಎನ್‌ಫೀಲ್ಡ್ ತನ್ನ ಹೊಸ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದು ಹಿಮಾಲಯನ್ ಆವೃತ್ತಿಯ 450cc ಬೈಕ್ ಎಂದು ಹೇಳಲಾಗುತ್ತಿದೆ. ಆದ್ರೆ ಈಗ ಹೊಸ ಹೆಸರಿನೊಂದಿಗೆ ಟ್ರೇಡ್‌ಮಾರ್ಕ್ ಸಲ್ಲಿಸಿರುವುದು ಬಹಿರಂಗಗೊಂಡಿದೆ. ಇದು ಕೂಡ 450 cc ಮಾದರಿಯಾಗಿದ್ದು, ಹಲವರನ್ನು ಗೊಂದಲಗೊಳಿಸಿದೆ.

ಈಗ ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಹೆಸರಿನಲ್ಲಿ ಟ್ರೇಡ್‌ಮಾರ್ಕ್ ಅನ್ನು ಸಲ್ಲಿಸಿರುವುದು ತಿಳಿದುಬಂದಿದೆ. ಸದ್ಯಕ್ಕೆ, ಈ ಹೆಸರನ್ನು ಯಾವ ಮೋಟಾರ್‌ಸೈಕಲ್‌ಗೆ ಬಳಸಲಾಗುವುದು ಎಂಬುದು ದೃಢಪಟ್ಟಿಲ್ಲ. ಆದರೆ, ಹೆಸರೇ ಸೂಚಿಸುವಂತೆ ಇದು 450 ಸಿಸಿ ಮೋಟಾರ್ ಸೈಕಲ್ ಆಗಿದ್ದು, ನಾವೆಲ್ಲರು ಅಂದುಕೊಂಡಂತೆ ಇದು ಹಿಮಾಲಯನ್ 450 ಆಗಿರಬಹುದು ಎಂಬ ನಿರೀಕ್ಷೆಗಳಿವೆ. ಇಲ್ಲವೇ ಮತ್ತೊಂದು 450 ಸಿಸಿ ಮೋಟಾರ್‌ಸೈಕಲ್ ಅನ್ನು ಕಂಪನಿ ಪರಿಚಯಿಸುವ ಸಾಧ್ಯೆತಯು ಇದೆ.

royal-enfield-guerrilla-450-new-trademark-new-450cc-bike

ಸೋರಿಕೆಯಾದ ಮಾಹಿತಿಯ ಪ್ರಕಾರ ರಾಯಲ್ ಎನ್‌ಫೀಲ್ಡ್ ಮುಂಬರುವ ವರ್ಷಗಳಲ್ಲಿ ಐದು 450 ಸಿಸಿ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲಿದೆ. ಇವುಗಳಲ್ಲಿ ಮೊದಲನೆಯದು ಹಿಮಾಲಯನ್ 450 ಎಂದು ನಮಗೆ ಈಗಾಗಲೇ ತಿಳಿದಿದೆ. ಇದಲ್ಲದೇ ಮತ್ತೊಂದು 450 ಸಿಸಿ ಎಂಜಿನ್ ಹೊಂದಿರುವ ರೋಡ್‌ಸ್ಟರ್ ಮೋಟಾರ್‌ಸೈಕಲ್‌ನ ಸ್ಪೈ ಶಾಟ್‌ಗಳು ಇತ್ತೀಚೆಗೆ ಸೋರಿಕೆಯಾಗಿವೆ. ಈ ಮೋಟಾರ್‌ಸೈಕಲ್ ಹಿಮಾಲಯನ್ 450 ನಂತರ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹಾಗಾಗಿ, ರಾಯಲ್ ಎನ್‌ಫೀಲ್ಡ್ ಈ ಹೊಸ ರೋಡ್‌ಸ್ಟರ್‌ಗಾಗಿ ಗೆರಿಲ್ಲಾ 450 ಹೆಸರನ್ನು ಬಳಸುವ ಸಾಧ್ಯತೆಯಿದೆ. ಇವುಗಳ ಜೊತೆಗೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 450 ನ ಟಾಪ್ ಮಾಡಲ್ ಅನ್ನು ಸಹ ಬಿಡುಗಡೆ ಮಾಡಲಿದೆ. ಹಾಗೆಯೇ ರೋಡ್‌ಸ್ಟರ್‌ನ ಸ್ಕ್ರ್ಯಾಂಬ್ಲರ್ ಆವೃತ್ತಿಯೂ ಇರುತ್ತದೆ. ಇದು ಹಾರ್ಡ್-ಕೋರ್ ಆಫ್-ರೋಡ್ ಉತ್ಸಾಹಿಗಳಿಗಾಗಿ ಪರಿಚಯಿಸಲಿದ್ದಾರೆ.

royal-enfield-guerrilla-450-new-trademark-new-450cc-bike

ಈ ಪ್ಲಾಟ್‌ಫಾರ್ಮ್‌ನಲ್ಲಿ ಬರುವ ಕೊನೆಯ ಮೋಟಾರ್‌ಸೈಕಲ್ ಕೆಫೆ ರೇಸರ್ ಆಗಿದ್ದು, ಇದು ಕಾಂಟಿನೆಂಟಲ್ ಜಿಟಿ 650 ನಂತೆ ಅತ್ಯಂತ ಸ್ಥಾಪಿತ ಗ್ರಾಹಕರನ್ನು ಹೊಂದಿರುತ್ತದೆ. ಇನ್ನು ಮೊದಲೇ ಹೇಳಿದಂತೆ ನವೆಂಬರ್‌ನಲ್ಲಿ ಹಿಮಾಲಯನ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ ನಡೆಸಿದೆ. ಇದನ್ನು ಹಿಮಾಲಯನ್ 450 ಎಂದು ಕರೆಯುವ ನಿರೀಕ್ಷೆಯಿದೆ.

ರಾಯಲ್ ಎನ್‌ಫೀಲ್ಡ್ ಅಭಿವೃದ್ಧಿಪಡಿಸಿದ ಹೊಸ 450 ಸಿಸಿ ಎಂಜಿನ್, ಕಂಪನಿಯ ಮೊದಲ ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿರಲಿದೆ. ಇದರ ಪವರ್ ನೋಡಿಕೊಂಡಿರೆ 40 bhp ಗಿಂತ ಹೆಚ್ಚಿರಲಿದ್ದು ಟಾರ್ಕ್ ವಿಷಯಕ್ಕೆ ಬಂದರೆ ಸುಮಾರು 40 Nm ಉತ್ಪಾದಿಸುವ ನಿರೀಕ್ಷೆಯಿದೆ. ರಾಯಲ್ ಎನ್‌ಫೀಲ್ಡ್ ಸದ್ಯ ಮೋಟಾರ್‌ಸೈಕಲ್‌ನ ಗುಣಲಕ್ಷಣಗಳಿಗೆ ಸರಿಹೊಂದುವಂತೆ ಎಂಜಿನ್ ಅನ್ನು ಮರುಪರಿಶೀಲಿಸುತ್ತದೆ ಎಂದು ಮೂಲಗಳು ಹೇಳುತ್ತಿವೆ.

royal-enfield-guerrilla-450-new-trademark-new-450cc-bike

ಸೆಪ್ಟೆಂಬರ್ 1 ರಂದು ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350: ಮೋಟಾರ್‌ಸೈಕಲ್ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಅನ್ನು ರಾಯಲ್ ಎನ್‌ಫೀಲ್ಡ್‌ನ ಜೆ-ಸಿರೀಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು. ಇದು ರಾಯಲ್ ಎನ್‌ಫೀಲ್ಡ್‌ನ ಈಗ ಮಾರಾಟದಲ್ಲಿರುವ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಮೀಟಿಯೊರ್ 350 ಮತ್ತು ಹಂಟರ್ 350 ಗಳಿಗೆ ಆಧಾರವಾಗಿರುವ ಅದೇ ಪ್ಲಾಟ್‌ಫಾರ್ಮ್ ಆಗಿದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಹೊಸ ಟ್ವಿನ್-ಡೌನ್‌ಟ್ಯೂಬ್ ಫ್ರೇಮ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಹೊಸ ಫ್ರೇಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಇದು ಮೋಟಾರ್‌ಸೈಕಲ್ ಅನ್ನು ಗಮನಾರ್ಹವಾಗಿ ಸುಧಾರಿತ ಹ್ಯಾಂಡ್ಲಿಂಗ್ ಡೈನಾಮಿಕ್ಸ್‌ನೊಂದಿಗೆ ಒದಗಿಸುವ ನಿರೀಕ್ಷೆಯಿದೆ. ಹಾಗಯೇ ಈಗಿರುವ ಮಾದರಿಗಿಂತ ತುಸು ಸುಧಾರಣೆಗೊಂಡು ಬರುವ ಸಾಧ್ಯತೆಗಳಿವೆ.

royal-enfield-guerrilla-450-new-trademark-new-450cc-bike

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

More from DriveSpark

Article Published On: Wednesday, August 30, 2023, 18:01 [IST]
English summary
Royal enfield guerrilla 450 new trademark new 450cc bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+