ಸ್ಥಗಿತವಾಗಲಿದೆ ಈ ರಾಯಲ್ ಎನ್‌ಫೀಲ್ಡ್ ಬೈಕ್: ಬದಲಿಯಾಗಿ ಯುವಕರ ಮನಗೆಲ್ಲಲು ಬರಲಿದೆ ಆಕರ್ಷಕ ಬೈಕ್
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ರಾಯಲ್ ಎನ್‍ಫೀಲ್ಡ್ ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಿ ದೇಶಿಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಹಿಮಾಲಯನ್ 452 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 (Royal Enfield Himalayan 452) ಬೈಕ್ ಅನ್ನು ಭಾರತದಲ್ಲಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ರಾಯಲ್ ಎನ್‌ಫೀಲ್ಡ್ ತನ್ನ ಈ ಹಿಮಾಲಯನ್ 452 ಬೈಕನ್ನು ನವೆಂಬರ್ 7 ರಂದು ಬಿಡುಗಡೆ ಮಾಡಲಿದೆ. ಇದರಿಂದ ಮುಂಬರುವ ವಾರಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 411 (Royal Enfield Himalayan 411) ಬೈಕ್ ಅನ್ನು ಸ್ಥಗಿತಗೊಳಿಸಲಿದೆ. ಈ ಸ್ಥಾನಕ್ಕೆ ಹೆಚ್ಚು ಪವರ್ ಫುಲ್ ಹಿಮಾಲಯನ್ 452 ಬೈಕ್ ಬರಲಿದೆ.

ಹಿಮಾಲಯನ್ 411 ಆರಂಭಿಕ ಕೆಲವು ಸಮಸ್ಯೆಗಳನ್ನು ಹೊಂದಿತ್ತು ಆದರೆ ರಾಯಲ್ ಎನ್‌ಫೀಲ್ಡ್ ವರ್ಷಗಳಿಂದ ಮೋಟಾರ್‌ಸೈಕಲ್ ಅನ್ನು ಪರಿಪೂರ್ಣಗೊಳಿಸಲು ನವೀಕರಣಗಳನ್ನು ಸಕ್ರಿಯವಾಗಿ ತಂದಿತು. ಪ್ರಸ್ತುತ, ಇದು ಉತ್ತಮ ಗೋ-ಎನಿವೇರ್ ಗುಣಲಕ್ಷಣಗಳೊಂದಿಗೆ ಮಾರುಕಟ್ಟೆಯಲ್ಲಿ ಅತ್ಯಂತ ಆರಾಮದಾಯಕ ಟೂರಿಂಗ್ ಬೈಕ್ ಗಳಲ್ಲಿ ಒಂದಾಗಿದೆ. ಡ್ಯುಯಲ್-ಪರ್ಪಸ್ ಅಡ್ವೆಂಚರ್ ಟೂರರ್ ಮಾರ್ಚ್ 2022 ರಲ್ಲಿ ಸ್ಕ್ರಾಮ್ 411 ಗೆ ಜನ್ಮ ನೀಡಿತು ಮತ್ತು ಎರಡೂ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಮತ್ತು ವಿದೇಶದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಭಾರತದಲ್ಲಿ Scram 411 ಅನ್ನು ನಿಲ್ಲಿಸುವುದಿಲ್ಲ ಮತ್ತು 2.06 ಲಕ್ಷದಿಂದ 2.12 ಲಕ್ಷ ರೂಪಾಯಿಗಳ ನಡುವೆ (ಎಕ್ಸ್ ಶೋ ರೂಂ) ಬೆಲೆಯಿದೆ. ಹಿಮಾಲಯನ್ 411 ಬೈಕಿನ ಬೆಲೆಯು ರೂ. 2.16-2.28 ಲಕ್ಷ (ಎಕ್ಸ್ ಶೋ ರೂಂ) ಆಗಿದೆ. ಮುಂಬರುವ ಹಿಮಾಲಯನ್ 450 ಹೆಚ್ಚು ಫೀಚರ್-ಪ್ಯಾಕ್ ಮತ್ತು ಹೆಚ್ಚು ಪ್ರೀಮಿಯಂ ಆಗಿರುವುದರಿಂದ ಸುಮಾರು ರೂ.2.75 ಲಕ್ಷ ಬೆಲೆಯನ್ನು ಹೊಂದಿರಬಹುದು.

ಪ್ರಸ್ತುತ ಹಿಮಾಲಯನ್ 411 ಹೆವಿವೇಯ್ಟ್ ಮತ್ತು ದುರ್ಬಲ ಭಾವನೆಗಾಗಿ ಟೀಕಿಸಲ್ಪಟ್ಟಿದೆ. ರಾಯಲ್ ಎನ್‌ಫೀಲ್ಡ್ ಈ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಬೈಕ್ 196 ಕೆಜಿ ತೂಕವನ್ನು ಹೊಂದಿದ್ದು, 411 ಆವೃತ್ತಿಗಿಂತ 3 ಕೆಜಿ ಕಡಿಮೆಯಾಗಿದೆ. ಇನ್ನು ಈ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಬೈಕಿನಲ್ಲಿ 451.65 ಸಿಸಿ, ಸಿಂಗಲ್ ಸಿಲಿಂಡರ್ ಯುನಿಟ್ ಅನ್ನು ಹೊಂದಿರಲಿದೆ.
ರಾಯಲ್ ಎನ್‌ಫೀಲ್ಡ್ ತನ್ನ ಎಂಜಿನ್‌ಗೆ ಲಿಕ್ವಿಡ್ ಕೂಲಿಂಗ್ ಅನ್ನು ಬಳಸುತ್ತಿರುವುದು ಇದೇ ಮೊದಲು. ಎಂಜಿನ್‌ನ ಪವರ್ ಔಟ್‌ಪುಟ್ 8,000 rpm ನಲ್ಲಿ ಸುಮಾರು 40 bhp ಪವರ್ ಮತ್ತು 40 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಅಲ್ಲದೆ, ಮಾದರಿಯು ಸುಗಮವಾದ ಡೌನ್ ಶಿಫ್ಟ್‌ಗಳಿಗಾಗಿ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ನೀಡುವ ಹೆಚ್ಚಿನ ನಿರೀಕ್ಷೆಯಿದೆ.

ಫೀಚರ್ಸ್ ಕುರಿತು ಹೇಳುವುದಾದರೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ ಬ್ಲೂಟೂತ್ ಕನೆಕ್ಟಿವಿಟಿ, ಆಲ್-ಎಲ್‌ಇಡಿ ಲೈಟಿಂಗ್, ಡ್ಯುಯಲ್-ಚಾನೆಲ್ ಎಬಿಎಸ್ ಟೆಕ್, ಮಲ್ಟಿಪಲ್ ರೈಡ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್) ಮತ್ತು ಹೊಸ ವೃತ್ತಾಕಾರದ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ವಿನ್ಯಾಸದ ವಿಷಯದಲ್ಲಿ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ ಈಗಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮೋಟಾರ್‌ಸೈಕಲ್‌ನ ಅಪ್ಪನಂತೆ ಕಾಣುತ್ತಿದ್ದು ಹೆಚ್ಚು ಆಫ್‌ರೋಡರ್ ಆಗಿ ಕಾಣುತ್ತಿದೆ. ಕೆಲವು ಗಮನಾರ್ಹ ವಿನ್ಯಾಸದ ವೈಶಿಷ್ಟ್ಯಗಳಲ್ಲಿ ಸ್ಥಿರ ಹೆಡ್‌ಲ್ಯಾಂಪ್, ದೊಡ್ಡ ಇಂಧನ ಟ್ಯಾಂಕ್, ಸ್ಪ್ಲಿಟ್ ಸೀಟ್‌ಗಳು, ಮಧ್ಯ-ಸೆಟ್ ಫುಟ್‌ಪೆಗ್‌ಗಳು ಮತ್ತು ಹೆಚ್ಚಿನವು ಸೇರಿವೆ.

ಹಾರ್ಡ್‌ವೇರ್‌ಗೆ ಬಗ್ಗೆ ಮಾತನಾಡುವುದಾರೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್ ಸೈಕಲ್ ಮುಂಭಾಗದಲ್ಲಿ USD ಫೋರ್ಕ್‌ಗಳು, ಹಿಂಭಾಗದಲ್ಲಿ ಅರೆ - ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಮತ್ತು ದೊಡ್ಡದಾದ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳಂತಹ ಪ್ರೀಮಿಯಂ ಹಾರ್ಡ್‌ವೇರ್ ಬಿಟ್‌ಗಳನ್ನು ಹೊಂದಿದೆ. ಇನ್ನು ಹೋಮೋಲೋಗೇಶನ್ ದಾಖಲೆಗಳ ಪ್ರಕಾರ, ಮುಂಬರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 ಮೋಟಾರ್‌ಸೈಕಲ್ 2,245mm ಉದ್ದ, 852mm ಅಗಲ ಮತ್ತು 1,510mm ವ್ಹೀಲ್‌ಬೇಸ್ ಅನ್ನು ಹೊಂದಿದೆ.


Click it and Unblock the Notifications








